‘ಕೋಮಾ’ ಸ್ಥಿತಿಗೆ ಬಂತು ಶ್ರೀರಾಮ ಸೊಸೈಟಿ ! ಕಟ್ಟಿದ ಪಿಗ್ಮಿ ಹಣ ಕೇಳಿದ ಗ್ರಾಹಕನಿಗೆ ‘ಬ್ಲ್ಯಾಕ್ ಮೇಲ್’ ಮಾಡಿದ ಖದೀಮ ಯಾರು?

‘ಕೋಮಾ’ ಸ್ಥಿತಿಗೆ ಬಂತು ಶ್ರೀರಾಮ ಸೊಸೈಟಿ ! ಕಟ್ಟಿದ ಪಿಗ್ಮಿ ಹಣ ಕೇಳಿದ ಗ್ರಾಹಕನಿಗೆ ‘ಬ್ಲ್ಯಾಕ್ ಮೇಲ್’ ಮಾಡಿದ ಖದೀಮ ಯಾರು?

Share
IMG-20241019-WA0000-587x1024 'ಕೋಮಾ' ಸ್ಥಿತಿಗೆ ಬಂತು ಶ್ರೀರಾಮ ಸೊಸೈಟಿ !         ಕಟ್ಟಿದ ಪಿಗ್ಮಿ ಹಣ ಕೇಳಿದ ಗ್ರಾಹಕನಿಗೆ 'ಬ್ಲ್ಯಾಕ್ ಮೇಲ್' ಮಾಡಿದ ಖದೀಮ ಯಾರು?

ಬೆಳ್ತಂಗಡಿ : ಗ್ರಾಹಕರ ಕೋಟ್ಯಾಂತರ ರೂಪಾಯಿ ಹಣವನ್ನು ನುಂಗಿ ನೀರು ಕುಡಿದ ಪರಿಣಾಮ ಬೃಹತ್ ಅವ್ಯವಹಾರದಿಂದ
ಮುಳುಗುತ್ತಿರುವ ದೋಣಿಯಂತಾಗಿರುವ ಬೆಳ್ತಂಗಡಿಯ ಶ್ರೀರಾಮ ಕೋ.ಆಪರೇಟಿವ್ ಸೊಸೈಟಿಯಲ್ಲಿ ಕಟ್ಟಿದ್ದ ಪಿಗ್ಮಿ ಹಣಕ್ಕಾಗಿ ಗ್ರಾಹಕರೊಬ್ಬರು ದೂರವಾಣಿ ಕರೆ ಮಾಡಿ ತಾನು ಕಟ್ಟಿದ ಹಣವನ್ನು ವಾಪಾಸು ಕೊಡಿ ಎಂದು ಕೇಳಿದಾಗ ಸೊಸೈಟಿಯಿಂದ ಇತ್ತೀಚೆಗಷ್ಟೆ ಅಮಾನತುಗೊಂಡಿರುವ ಮ್ಯಾನೇಜರ್ ಚಂದ್ರಕಾಂತ ಎಂಬವರು ಗ್ರಾಹಕನಲ್ಲಿ ಉಡಾಫೆಯಿಂದ ಮತ್ತು ಒರಟಾಗಿ ಮಾತನಾಡಿದ್ದಲ್ಲದೆ ಯಾರೋ ಕರೆ ಮಾಡಿ ಮಾತನಾಡಿದ್ದನ್ನು ತಿಳಿದುಕೊಳ್ಳದರ “ನೀವೇ ಮಾತಾಡಿದ್ದು ‘ ಕಾನತ್ತೂರಿಗೆ ಆಣೆ ಪ್ರಮಾಣಕ್ಕೆ ಬರ್ತಿಯಾ… ನಿನ್ನ ಮೇಲೆ ಪೊಲೀಸ್ ಠಾಣೆಗೆ ‌ಕಂಪ್ಲೇಂಟ್ ಕೊಡ್ತೇನೆ ಎಂದು ಇನ್ನೊಬ್ಬರಿಗೆ ವಿನಾಕಾರಣ ಹೆದರಿಸಿ ಬಾಯಿ ಮುಚ್ಚಿಸಲು ವಿಫಲ ಯತ್ನ ನಡೆಸಿರುವ ಪ್ರಸಂಗ ನಡೆದಿದೆ.
ಬೆಳ್ತಂಗಡಿ ಸಂತೆಕಟ್ಟೆಯ ಭರತ್ ಎಂಬವರೇ ಶ್ರೀರಾಮ ಸೊಸೈಟಿಗೆ ‌ ಕಟ್ಟಿದ ಪಿಗ್ಮಿ ಹಣ ಕೇಳಿದಾಗ ಕೆಲವು ದಿನಗಳ ಹಿಂದೆಯಷ್ಟೇ ಸೊಸೈಟಿಯಿಂದ ಅಮಾನತುಗೊಂಡಿರುವ ಮಾಜಿ ಮ್ಯಾನೇಜರ್ ಚಂದ್ರಕಾಂತ ಎಂಬಾತನಿಂದ ಬೆದರಿಕೆಗೊಳಗಾದ ಗ್ರಾಹಕ.
ಶ್ರೀರಾಮ ಸೊಸೈಟಿಯಲ್ಲಿ ಮ್ಯಾನೇಜರ್ ಆಗಿದ್ದ ಚಂದ್ರಕಾಂತ ಎಂಬವರಿಗೆ ದೂರವಾಣಿ ಕರೆ ಮಾಡಿದ ಗ್ರಾಹಕ ಭರತ್ ಅವರು
ನಾವು ಕಟ್ಟಿದ ಪಿಗ್ಮಿ ಹಣವನ್ನು ಯಾರಲ್ಲಿ ಕೇಳಬೇಕು ಎಂದು ಕೇಳಿದ್ದರು. ಈ ಸಂದರ್ಭ , ಕೆಲವು ದಿನಗಳ ಹಿಂದೆ ಕರೆ ಮಾಡಿದಾಗ “ನಾನು ರಜೆಯಲ್ಲಿದ್ದೇನೆ, ಹಾರ್ಟ್ ಸಮಸ್ಯೆಗೆ ಚಿಕಿತ್ಸೆ ಪಡೆದು ವಿಶ್ರಾಂತಿಯಲ್ಲಿದ್ದೇನೆ. ” ಎಂದೆಲ್ಲಾ ಹೇಳಿದ್ದ ಮ್ಯಾನೇಜರ್ ಚಂದ್ರಕಾಂತ ಇದೀಗ ಮತ್ತೆ ಭರತ್ ಅವರು ದೂರವಾಣಿ ಕರೆ ಮಾಡಿ ಪಿಗ್ಮಿ ಹಣ ಕೇಳಿ ತರಾಟೆಗೆ ತೆಗೆದುಕೊಂಡು ಪ್ರಶ್ನಿಸಿದಾಗ “ನನ್ನನ್ನು ಕೆಲಸದಿಂದ ತೆಗೆದಿದ್ದಾರೆ, ನೀವು ಏನಿದ್ರೂ ಸೊಸೈಟಿಗೆ ಹೋಗಿ , ಸ್ಥಾಪಕಾಧ್ಯಕ್ಷರಲ್ಲಿ ಕೇಳಿ, ಅಧ್ಯಕ್ಷರಲ್ಲೇ ಕೇಳಿ” ಎಂದೆಲ್ಲಾ ಹೇಳಿ ಜಾರಿಕೊಂಡಿದ್ದಾರೆ.
ಈ ಸಂದಭರ್ಭ ಭರತ್ ಚಂದ್ರಕಾಂತ ಅವರಲ್ಲಿ ಸಾಲು ಸಾಲು ಪ್ರಶ್ನೆ ಕೇಳಿದಾಗ ಉತ್ತರಿಸಲಾಗದೆ ತಬ್ಬಿಬ್ಬಾಗಿ ಕೊನೆಗೆ ಉತ್ತರಿಸಲಾಗದೆ ” ನೀವು ನನ್ನಲ್ಲಿ ಹಣ ಕೊಟ್ಟಿದ್ದಿರಾ ಎಂದು ಪ್ರಶ್ನಿಸಿದ್ದು ಇದಕ್ಕೆ ಭರತ್ ಈತನನ್ನು ತೀವ್ರ ತರಾಟೆಗೆ ತೆಗೆದುಕೊಂಡು ಕರೆ ಕಟ್ ಮಾಡಿದ್ದರು.
ಬಳಿಕ ಯಾರೋ ಬೇರೊಬ್ಬರು ಗ್ರಾಹಕರು ಕರೆ ಮಾಡಿದ್ದು ನಿಮಗೆ ಮಕ್ಕಳಿದ್ದಾರೆ ಕಷ್ಟದಲ್ಲಿ ಕಟ್ಟಿದ ನಮ್ಮ ಹಣ ಇಟ್ಕೊಂಡ್ರೆ ಒಳ್ಳೆದಾಗಲ್ಲ ಎಂಬರ್ಥದಲ್ಲಿ ಮಾತನಾಡಿ ನಮ್ಮ ಹಣ ನಮಗೆ ಕೊಡುವ ವ್ಯವಸ್ಥೆ ಮಾಡಿ ಅಂತ ಹೇಳಿ ಎಚ್ಚರಿಕೆ ಕೊಟ್ಟು ಕಾಲ್ ಕಟ್ ಮಾಡಿದ್ದರು. ಇದಾಗಿ ಸ್ವಲ್ಪ ಹೊತ್ತಲ್ಲೇ ಗಡಿಬಿಡಿಯಲ್ಲಿ ಅಪಾರ್ಥ ಮಾಡಿಕೊಂಡ ಚಂದ್ರಕಾಂತ್ ಭರತ್ ಅವರಿಗೆ ಮತ್ತೆ ಕರೆ ಮಾಡಿ ನನ್ನ ಮಕ್ಕಳ ಬಗ್ಗೆ ಮಾತಾಡಿದ್ರಲ್ಲ ನಾನು ಪೊಲೀಸ್ ಕಂಪ್ಲೇಂಟ್ ಕೊಡುತ್ತೇನೆಂದು ಹೇಳಿ ಬೆದರಿಸಲು ಯತ್ನಿಸಿದ್ದು ಈ ಸಂದರ್ಭ “ನಾನು ನಿಮ್ಮಲ್ಲಿ ಆ ರೀತಿ ಮಾತಾಡಿಲ್ಲ , ನಿಮ್ಮ ಮಕ್ಕಳ ಬಗ್ಗೆ ನಾನು ನಿಮ್ಮಲ್ಲಿ ಮಾತನಾಡಿಲ್ಲ, ಯಾರೋ ಬೇರೆಯವರು ಮಾತನಾಡಿರಬೇಕು, ನಾನು ಮಾತನಾಡಿದ್ದು ನನ್ನಲ್ಲಿ ರೆಕಾರ್ಡ್ ಇದೆ , ಯಾರೋ ಮಾತಾಡಿದ್ದನ್ನು ನನಗೆ ಸುಳ್ಳು ಆಪಾದನೆ ಮಾಡಬೇಡಿ, ಕರೆ ಮಾಡಿದ್ದು ಯಾರು ಅಂತ ತಿಳ್ಕೊಂಡು ಮಾತಾಡಿ ” ಎಂದು ಭರತ್ ಹೇಳಿದ್ದರು.
ಆಗ ಚಂದ್ರಕಾಂತ , ಭರತ್ ಅವರಲ್ಲಿ “ನೀವು ಹೇಳಿಲ್ಲ ಅಂತ ಕಾನತ್ತೂರಿಗೆ ಬರ್ತೀರಾ” ಅಂತ ಕೇಳಿದ್ದು ಇದೇ ಸಂದರ್ಭ ಭರತ್ “ಸೊಸೈಟಿ ಹಣ ತಿಂದವರು ನೀವು , ನಮ್ಮ ಹಣ ಕೇಳಿದ್ರೆ ಕಂಪ್ಲೇಂಟ್ ಕೊಡ್ತೇನೆ ಅಂತ ಹೆದರಿಸುತ್ತೀರಾ ?
ನೀವೇನು ಕಂಪ್ಲೇಂಟ್ ಕೊಡೋದು ನಾನು ಮಾತನಾಡಿದ್ದಕ್ಕೆ ನನ್ನಲ್ಲಿ ‌ರೆಕಾರ್ಡ್ ಇದೆ, ನಾನೇ ಪೊಲೀಸರಿಗೆ ನಿಮ್ಮ ಮೇಲೆ ಕಂಪ್ಲೇಂಟ್ ಮಾಡ್ತೇನೆ, ನೀವೇ ಪೊಲೀಸ್ ಸ್ಟೇಷನ್ ಗೆ ಬನ್ನಿ ” ಅಂತ ಚೆನ್ನಾಗಿ ಝಾಡಿಸಿದ್ದಾರೆ. ಪಿಗ್ಮಿ ಹಣವನ್ನು ನ್ಯಾಯಯುತವಾಗಿ ವಾಪಾಸು ಕೇಳಿದ ಗ್ರಾಹಕನಿಗೆ ತಾಳ್ಮೆಯಿಂದ ಸಮಾಧಾನಕರ ಮಾತುಗಳಿಂದ ವಿಶ್ವಾಸ ಹುಟ್ಟಿಸಬೇಕಾದ ಸೊಸೈಟಿ ಕಾರ್ಯನಿರ್ವಣಾಧಿಕಾರಿ
ಪೊಲೀಸ್ ಕಂಪ್ಲೇಂಟ್ ಕೊಡುತ್ತೇನೆಂದೂ , ಕಾನತ್ತೂರಿಗೆ ಪ್ರಮಾಣಕ್ಕೆ ಬರ್ತೀಯಾ ಎಂದೆಲ್ಲಾ ಬ್ಲ್ಯಾಕ್ ಮೇಲ್ ಮಾಡಿರುವುದು ಹತಾಶಾ ಮನಸ್ಥಿತಿಯನ್ನು ಎತ್ತಿ ತೋರಿಸಿದೆ.
ಶ್ರೀರಾಮ ಕೋ.ಆಪರೇಟಿವ್ ಸೊಸೈಟಿಯು ಕೋಮಾ ಸ್ಥಿತಿಯಲ್ಲಿದ್ದು ಮ್ಯಾನೇಜರ್ ಚಂದ್ರಕಾಂತನನ್ನು ಆಡಳಿತ ಮಂಡಳಿ ಎಂಬ ‘ಮುಳುಗಿಸೋ ತಜ್ಞರ ತಂಡ’ ಅಮಾನತು ಮಾಡಿ ರಜೆಯಲ್ಲಿ ಕಳಿಸಿರುವ ಸಂಗತಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಈ ಮಧ್ಯೆ ಕುಂಬಳ ಕಾಯಿ ಕದ್ದರೂ ಹೆಗಲು ಮುಟ್ಟಿಕೊಳ್ಳದಂತೆ ಎಚ್ಚರವಹಿಸುವ ಆಡಳಿತ ಮಂಡಳಿಯ ಕೆಲವು ವಿಪರೀತ ಬುದ್ಧಿವಂತರಿಂದ ಕದ್ದು ಮುಚ್ಚಿ ಸೊಸೈಟಿ ಬಾಗಿಲು ತೆರೆದು ದಾಖಲೆ ತಡಕಾಡುವ ಕಣ್ಣಾಮುಚ್ಚಾಲೆಯಾಟ ಕೆಲವು ದಿನಗಳಿಂದ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.
ಈ ಸೊಸೈಟಿಯಲ್ಲಿ ಐದು ಮಂದಿ ಪಿಗ್ಮಿ ಸಂಗ್ರಾಹಕರಿಂದ ತಿಂಗಳಿಗೆ ಸುಮಾರು 30 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗುತ್ತಿತ್ತು. ಆದರೆ ಕೆಲವು ಸಮಯಗಳಿಂದ ಗ್ರಾಹಕರ ಪಿಗ್ಮಿ ಹಣ ಸೊಸೈಟಿ ಖಾತೆಯಲ್ಲಿ ಜಮಾವೇ ಆಗಿಲ್ಲ ಎಂಬ ಆತಂಕಕಾರಿ ವಿಚಾರ ಇದೀಗ ಬಯಲಾಗಿದೆ.
ಭರತ್ ಸೇರಿದಂತೆ ಪಿಗ್ಮಿಗೆ ಹಣ ಕಟ್ಟುತ್ತಾ ಬಂದಿರುವ ಇನ್ನೂ ಕೆಲವು ಗ್ರಾಹಕರು ಹಣ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಕಷ್ಟ ಪಟ್ಟು ದುಡಿದು ಕಟ್ಟಿದ ಪಿಗ್ಮಿ ಹಣ ಕೇಳಿದಾಗ “ನೀವು ನನ್ನಲ್ಲಿ ಹಣ ಕೊಟ್ಟಿದ್ದಿರಾ? ಸ್ಥಾಪಕಾಧ್ಯಕ್ಷರಲ್ಲಿ ಕೇಳಿ, ಸೊಸೈಟಿಗೆ ಹೋಗಿ ಕೇಳಿ ” ಎಂದೆಲ್ಲಾ ಹೇಳಿ ಜಾರಿಕೊಳ್ಳುತ್ತಿರುವುದು ಇದೀಗ ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.

IMG-20241015-WA0000-2-1024x768 'ಕೋಮಾ' ಸ್ಥಿತಿಗೆ ಬಂತು ಶ್ರೀರಾಮ ಸೊಸೈಟಿ !         ಕಟ್ಟಿದ ಪಿಗ್ಮಿ ಹಣ ಕೇಳಿದ ಗ್ರಾಹಕನಿಗೆ 'ಬ್ಲ್ಯಾಕ್ ಮೇಲ್' ಮಾಡಿದ ಖದೀಮ ಯಾರು?

Post Comment

ಟ್ರೆಂಡಿಂಗ್‌