ಅಕ್ರಮ ಗೋಸಾಟ : ಹಿಂದೂ ಯುವಕರನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

ಅಕ್ರಮ ಗೋಸಾಟ : ಹಿಂದೂ ಯುವಕರನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Share
IMG-20241019-WA0002 ಅಕ್ರಮ ಗೋಸಾಟ :       ಹಿಂದೂ ಯುವಕರನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

ಬೆಳ್ತಂಗಡಿ : ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ಪಿಕಪ್ ವಾಹನದಲ್ಲಿ ದನ‌ ಸಾಗಾಟ ಪ್ರಕರಣವನ್ನು ಪತ್ತೆ ಹಚ್ಚಿದ್ದು ಚಾಲಕ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದು ದನಗಳನ್ನು ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ನಿವಾಸಿಗಳಾದ ಅಶ್ವಥ್ (34) ಹಾಗೂ ಸಚಿನ್ (27) ಎಂಬವರಾಗಿದ್ದಾರೆ.
ಆರೋಪಿಗಳು ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ಸಂಶಯ ಬಾರದಿರಲೆಂದು ಅಥವಾ ಬಜರಂಗದಳ ಕಾರ್ಯಕರ್ತರ ಕಣ್ಣು ತಪ್ಪಿಸಿ ಬಚಾವಾಗಲು ‘ತತ್ವಮಸಿ’ -‘ಜೈಶ್ರೀರಾಮ್’ ಹೆಸರಿನ ಗೂಡ್ಸ್ ವಾಹನವನ್ನು ಅಕ್ರಮ ಗೋಸಾಗಾಟಕ್ಕೆ ಉಪಯೋಗಿಸಿರಬಹುದೆಂದು ಸಂಶಯ ವ್ಯಕ್ತವಾಗಿದೆ.
ಯಾವುದೇ ಪರವಾನಿಗೆಯಿಲ್ಲದೆ ಗೋವುಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಹಿನ್ನಲೆಯಲ್ಲಿ ಬೆಳ್ತಂಗಡಿ ಪೊಲೀಸರು ಮದ್ದಡ್ಕದಲ್ಲಿ ಪರಿಶೀಲನೆ ನಡೆಸಿದಾಗ ಅಕ್ರಮ ಗೋ ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ.
ಕೆ.ಎ ಡಿ 6960 ನಂಬರಿನ ಗೂಡ್ಸ್ ವಾಹನದಲ್ಲಿ ಎರಡು ದನಗಳು, ಒಂದು ಕರು, ಹಾಗೂ ಒಂದು ಹೋರಿಯನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡಲಾಗುತ್ತಿತ್ತು.
ಆರೋಪಿಗಳ ಬಳಿ ಯಾವುದೇ ಸೂಕ್ತ ದಾಖಲೆಗಳ ಇಲ್ಲದ ಹಿನ್ನಲೆಯಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರು ದನಗಳನ್ನು ಹಾಗೂ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಂಡಿದ್ದಾರೆ.

Post Comment

ಟ್ರೆಂಡಿಂಗ್‌