ಏಕ್ಸಿಲ್ ಕಟ್ ಹೆದ್ದಾರಿ ಮಧ್ಯೆ ಟೆಂಪೋ ಬಾಕಿ: ಟ್ರಾಫಿಕ್ ಅಡಚಣೆ ಕ್ರೇನ್ ಮೂಲಕ ಟೆಂಪೋ ತೆರವು
ಬೆಳ್ತಂಗಡಿ : ರಾಷ್ಟ್ರೀಯ ಹೆದ್ದಾರಿಯ ಉಜಿರೆ-ಬೆಳ್ತಂಗಡಿ ಮಧ್ಯೆ ಕಾಜೂರು ಕ್ರಾಸ್ ಬಳಿ ಲಾಯಿಲಾದಲ್ಲಿ ಉಜಿರೆ ಕಡೆಗೆ ಹೋಗುವ ಟೆಂಪೋ ಒಂದರ ಏಕ್ಸಿಲ್ ಕಟ್ ಆದ ಪರಿಣಾಮ ಇಂದು ಮಂಗಳವಾರ ಬೆಳಿಗ್ಗೆ ರೋಡ್ ಬ್ಲಾಕ್ ಆಗಿ ಸ್ವಲ್ಪ ಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಯಿತು.
ಉಜಿರೆ ಕಡೆಗೆ ಚಲಿಸುತ್ತಿದ್ದಾಗಲೇ ಮುಂಭಾಗದ ಏಕ್ಸಿಲ್ ಕಟ್ ಆಗಿ ಟೆಂಪೋ ಹೆದ್ದಾರಿ ಕೆಟ್ಟು ನಿಂತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಕ್ರೇನ್ ಮೂಲಕ ಟೆಂಪೋ ತೆರವು ಕಾರ್ಯಾಚರಣೆ ನಡೆಸಿ ಸಂಚಾರ ಸುಗಮಗೊಳಿಸಿದರು.
Post Comment