ಇನ್ಸ್ಟಾಗ್ರಾಮ್ ಗ್ರೂಪಿನಲ್ಲಿ ಪ್ರಚೋದನಾಕಾರಿ ದ್ವೇಷ ಸಂದೇಶ : ಆರೋಪಿ ವಿರುದ್ಧ ಕೇಸು

ಇನ್ಸ್ಟಾಗ್ರಾಮ್ ಗ್ರೂಪಿನಲ್ಲಿ ಪ್ರಚೋದನಾಕಾರಿ ದ್ವೇಷ ಸಂದೇಶ : ಆರೋಪಿ ವಿರುದ್ಧ ಕೇಸು

Share

ಬೆಳ್ತಂಗಡಿ : ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್
ದ್ವೇಷ ಸಂದೇಶ ವ್ಯಕ್ತಿಯೋರ್ವನ ವಿರುದ್ಧ ಬೆಳ್ತಂಗಡಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ಖಾತೆಯ
‘mangalore_beary_warrior_03” ಎಂಬ ಪೇಜ್ ನಲ್ಲಿ
ವ್ಯಕ್ತಿಯೋರ್ವನು ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಳ ಭಾವಚಿತ್ರವನ್ನು ಹೊಂದಿರುವ ಪೋಸ್ಟ್ ಹಾಕಿ, ಅದರೊಂದಿಗೆ ವಿಭಿನ್ನ ಸಮುದಾಯಗಳ ನಡುವೆ ವೈಮನಸ್ಸು ಉಂಟಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳಿರುವಂತಹ ಪ್ರಚೋದನಾಕಾರಿ ದ್ವೇಷ ಸಂದೇಶ
ಬರೆದಿರುವ ಹಿನ್ನೆಲೆಯಲ್ಲಿ ಆರೋಪಿತನ ವಿರುದ್ದ ಜೂನ್ 1ನೇ 2025 ರಂದು ಬೆಳ್ತಂಗಡಿ ಠಾಣೆಯಲ್ಲಿ ಅಕ್ರ ನಂ : 41/2025 ಕಲಂ: 55,103,353(2) ಬಿಎನ್‌ ಎಸ್‌ 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು ಮುಂದಿನ ಕಾನೂನು ಕ್ರಮಕೈಗೊಳ್ಳಲಿದ್ದಾರೆ.

Post Comment

ಟ್ರೆಂಡಿಂಗ್‌