ಭರದಿಂದ ಸಾಗುತ್ತಿರುವ ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಕಂಬಳ ಕರೆ ನವೀಕರಣ ಕಾರ್ಯ

ಭರದಿಂದ ಸಾಗುತ್ತಿರುವ ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಕಂಬಳ ಕರೆ ನವೀಕರಣ ಕಾರ್ಯ

Share
IMG-20251119-WA0002-1024x1012 ಭರದಿಂದ ಸಾಗುತ್ತಿರುವ ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಕಂಬಳ             ಕರೆ ನವೀಕರಣ ಕಾರ್ಯ

ವೇಣೂರು : ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ -ವಿಕ್ರಮ ಜೋಡುಕರೆ ಕಂಬಳವು ಡಿಸೆಂಬರ್ 21ರಂದು ಜರಗಲಿದ್ದು
ಕರೆ ಮುಹೂರ್ತವು ಮೂಜುಲ್ನಾಯ ಕೊಡಮಣಿತ್ತಾಯ ದೈವದ ಪ್ರಾರ್ಥನೆಯೊಂದಿಗೆ ಮತ್ತು ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ನೆರವೇರಿದ ದಿನದಿಂದ ಆರಂಭಗೊಂಡ ಕಂಬಳ ಕರೆ ನವೀಕರಣ ಕಾರ್ಯವು ಎರಡು ವಾರಗಳಿಂದ ಭರದಿಂದ ಸಾಗುತ್ತಿದೆ.
ಕಂಬಳ ಸಮಿತಿಯ ಅಧ್ಯಕ್ಷರಾದ ರಶ್ಮಿತ್ ಶೆಟ್ಟಿ ನೋಣಾಲುಗುತ್ತು, ಗೌರವಧ್ಯಕ್ಷರಾದ ಸಂಜೀವ ಶೆಟ್ಟಿ ಗುಂಡ್ಯಾರು, ಗೌರವ ಸಲಹೆಗಾರರಾದ ಜಗತ್ಪಾಲ ಶೆಟ್ಟಿ ಉಮನೊಟ್ಟು ಮುಂತಾದವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಕಂಬಳ ಕರೆ ಸಜ್ಜಿಕೆ ಕಾರ್ಯದಲ್ಲಿ ಸಮಿತಿಯ ಇತರ ಪದಾಧಿಕಾರಿಗಳು, ಕಂಬಳ ಮನೆಯವರು, ಸ್ಥಳೀಯ ಭಜನಾ ಮಂಡಳಿ, ಊರ ಸಂಘ ಸಂಸ್ಥೆಗಳ ಪ್ರಮುಖರು, ಸದಸ್ಯರು, ಕಂಬಳಾಭಿಮಾನಿಗಳು ಪಾಲ್ಗೊಳ್ಳುತ್ತಿದ್ದಾರೆ.

InShot_20251003_220916895-21-1024x1024 ಭರದಿಂದ ಸಾಗುತ್ತಿರುವ ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಕಂಬಳ             ಕರೆ ನವೀಕರಣ ಕಾರ್ಯ

Post Comment

ಟ್ರೆಂಡಿಂಗ್‌

error: Content is protected !!