ಭೂಸೇನಾ ಸೇವಾವಧಿ ಪೂರ್ಣಗೊಳಿಸಿ ಹುಟ್ಟೂರಿಗೆ ಆಗಮಿಸುತ್ತಿರುವ ಎ.ಸಿ.ಪಿ. ಹವಾಲ್ದಾರ್ ದೇವಪ್ರಸಾದ್ :

ಭೂಸೇನಾ ಸೇವಾವಧಿ ಪೂರ್ಣಗೊಳಿಸಿ ಹುಟ್ಟೂರಿಗೆ ಆಗಮಿಸುತ್ತಿರುವ ಎ.ಸಿ.ಪಿ. ಹವಾಲ್ದಾರ್ ದೇವಪ್ರಸಾದ್ :

Share

ಬೆಳ್ತಂಗಡಿ : ಮೊಗ್ರು ಗ್ರಾಮದ ಮುಗೇರಡ್ಕ ಬರೆಮೇಲು ನಿವಾಸಿ
ಬಾಬು ಗೌಡ ಮತ್ತು ಮೋನಕ್ಕ ದಂಪತಿ ಪುತ್ರ ಎ.ಸಿ.ಪಿ. ಹವಾಲ್ದಾರ್ ಶ್ರೀ ದೇವಪ್ರಸಾದ್ ಗೌಡರವರು ಭಾರತೀಯ ಭೂಸೇನೆಯಲ್ಲಿ 22 ವರ್ಷಗಳ ಕಾಲ ಸೇವೆಗೈದು ಫೆಬ್ರವರಿ 1ನೇ (2026) ಭಾನುವಾರ ಹುಟ್ಟೂರಿಗೆ ಆಗಮಿಸುತ್ತಿದ್ದು ಹೆಮ್ಮೆಯ ಯೋಧನ ಸ್ವಾಗತ ಸಂಭ್ರಮಕ್ಕೆ ಮೊಗ್ರು ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಪ್ರೀತಿ ಅಭಿಮಾನಗಳೊಂದಿಗೆ ಸಿದ್ಧತೆ ನಡೆಸುತ್ತಿದ್ದಾರೆ.
ಭಾರತೀಯ ಭೂಸೇನೆಯಲ್ಲಿ ಸೇವಾವಧಿ ಪೂರ್ಣಗೊಳಿಸಿ ಹುಟ್ಟೂರಿಗೆ ಆಗಮಿಸುತ್ತಿರುವ ಎ.ಸಿ.ಪಿ. ಹವಾಲ್ದಾರ್
ಶ್ರೀ ದೇವಪ್ರಸಾದ್ ಅವರ ಗೌರವಪೂರ್ವಕ ಸ್ವಾಗತಕ್ಕೆ ಸಿದ್ಧತೆಗಳು ನಡೆಯುತ್ತಿದ್ದು ಭಾನುವಾರ ಸಂಜೆ: 4.30ಕ್ಕೆ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ‌ ಹುಟ್ಟೂರಿಗೆ ಪಯಣಿಸಲಿದ್ದಾರೆ.
ಉಪ್ಪಿನಂಗಡಿಯಿಂದ ವಾಹನ ಮೆರವಣಿಗೆಯ ಮೂಲಕ ದೇಶಾಭಿಮಾನಿ ಬಂಧುಗಳ ಜೊತೆ ಹೊರಡಲಿರುವ ಹವಾಲ್ದಾರ್ ದೇವಪ್ರಸಾದ್ ಅವರು ಕುಪ್ಪೆಟ್ಟಿ- ಉರುವಾಲು – ಪದ್ಮುಂಜ- ಮೈರೋಳ್ತಡ್ಕ – ಮೊಗ್ರು ಅಲೆಕ್ಕಿ ಮಾರ್ಗವಾಗಿ ಮುಗೇರಡ್ಕ ಮೂವರು ದೈವಗಳ ದೈವಸ್ಥಾನದ ವಠಾರಕ್ಕೆ ತಲುಪಲಿದ್ದಾರೆ.
ಸಂಜೆ 5.30 ಕ್ಕೆ ಸರಿಯಾಗಿ ಮುಗೇರಡ್ಕ ದೈವಸ್ಥಾನದ ಬಳಿ ಅಭಿನಂದನಾ ಕಾರ್ಯಕ್ರಮವು ನೆರವೇರಲಿದೆ.
ಯೋಧನ ಸ್ವಾಗತ ಮತ್ತು ಅಭಿನಂದನಾ ಸಮಾರಂಭದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಗಣ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ನಿವೃತ್ತ ಸೇನಾನಿಗಳ ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಸ್ವಾಗತ ಸಮಾರಂಭದಲ್ಲಿ ದೇಶಾಭಿಮಾನಿ ಬಂಧುಗಳು ಪಾಲ್ಗೊಳ್ಳುವಂತೆ ಊರಿನ ಪ್ರಮುಖರು, ಹಾಗೂ ದೇವಪ್ರಸಾದ್ ರವರ ಸಹೋದರ ಆನಂದ ಗೌಡ ಮತ್ತು ಹೇಮಲತಾ ದಂಪತಿ ಹಾಗೂ ಮಕ್ಕಳು ಬರೆಮೇಲು ಕುಟುಂಬದ ಸದಸ್ಯರು ಅಹ್ವಾನಿಸಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!