ಬೆಳ್ತಂಗಡಿಯಲ್ಲಿ ಇಂದು ಸಚಿವ ಯು.ಟಿ. ಖಾದರ್ ಒಡ್ಡೋಲಗ!

ಬೆಳ್ತಂಗಡಿಯಲ್ಲಿ ಇಂದು ಸಚಿವ ಯು.ಟಿ. ಖಾದರ್ ಒಡ್ಡೋಲಗ!

Share
Screenshot_20260805_061233_Google ಬೆಳ್ತಂಗಡಿಯಲ್ಲಿ ಇಂದು ಸಚಿವ ಯು.ಟಿ. ಖಾದರ್ ಒಡ್ಡೋಲಗ!
IMG-20260801-WA0003-1-1024x462 ಬೆಳ್ತಂಗಡಿಯಲ್ಲಿ ಇಂದು ಸಚಿವ ಯು.ಟಿ. ಖಾದರ್ ಒಡ್ಡೋಲಗ!

ಬೆಳ್ತಂಗಡಿ : ಲಾಯಿಲಾ ಗ್ರಾಮದ ಮುಳುಗಡೆ ಪ್ರದೇಶ ವೀಕ್ಷಣೆಗಾಗಿ ಭೇಟಿ ನೀಡಿದ್ದ ದಕ ಜಿಲ್ಲಾಧಿಕಾರಿ ದರ್ಶನ್ ಕೆವಿ ಗುರಿಂಗಾನ ಬಳಿ ಕಿಂಡಿ ಅಣೆಕಟ್ಟು ಸೇತುವೆ ನೋಡಿ ‌ನದಿಯ ಬದಿಯಲ್ಲೇ ಇದ್ದ 9 ಮನೆಗಳನ್ನು ನೋಡದೆ, ಸಂತ್ರಸ್ತರಲ್ಲಿ ಮಾತನಾಡಿಸದೆ ಅಳಲು ಕೇಳದೆ ತರಾತುರಿಯಲ್ಲಿ ಹೋಗಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು ಇದೀಗ ತಾಲೂಕಿನ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಲಿರುವ ಮಾಜಿ ಸ್ಪೀಕರ್‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ಆದರೂ ಮುಳುಗಡೆ ಪ್ರದೇಶದ ಮನೆಗಳಿಗೆ ಭೇಟಿ ನೀಡಿ ಅಳಲು ವಿಚಾರಿಸುತ್ತಾರೆ ಎಂಬ ನಿರೀಕ್ಷೆ ಸಂತ್ರಸ್ತರಲ್ಲಿ ಮೂಡಿದೆ.

IMG-20260615-WA0021-7 ಬೆಳ್ತಂಗಡಿಯಲ್ಲಿ ಇಂದು ಸಚಿವ ಯು.ಟಿ. ಖಾದರ್ ಒಡ್ಡೋಲಗ!


ಲಾಯಿಲಾ ಗ್ರಾಮದಲ್ಲಿ ಕಳೆದ ವಾರ ಭಾರೀ ಮಳೆಗೆ ಗುರಿಂಗಾನ ಪ್ರದೇಶದಲ್ಲಿ ಮುಳುಗಡೆಯಾಗಿದ್ದ ಮತ್ತು ಅಪಾಯದಲ್ಲಿರುವ ಮನೆಗಳ ಪ್ರದೇಶಕ್ಕೆ ದಿಡೀರ್ ಭೇಟಿ ನೀಡಿದ್ದ ದಕ ಜಿಲ್ಲಾಧಿಕಾರಿ ದರ್ಶನ್ ಕೆವಿ ಅವರು
ಕೇವಲ ಸೇತುವೆ ಮೇಲೆ ನಿಂತು ನದಿ ವೀಕ್ಷಣೆ ಮಾಡಿದ್ದು ನದಿ ಬದಿಯಲ್ಲೇ ತಮ್ಮ ಮನೆಗಳಿಗೆ ಬರುತ್ತಾರೆಂದು ಕಾಯುತ್ತಿದ್ದರೂ ಸೌಜನ್ಯಕ್ಕಾದರೂ ಕನಿಷ್ಟ ಒಂದೆರಡು
ಮನೆಗಳಿಗಾದರೂ ಭೇಟಿ ನೀಡದೆ ಸಂತ್ರಸ್ತರ ಕುಂದು ಕೊರತೆ ವಿಚಾರಿಸದೆ 10 ನಿಮಿಷದಲ್ಲಿ ವಾಪಾಸು ಹೋಗಿರುವುದು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
“ಡೀಸಿಯವರು ನಮ್ಮ ಮನೆಗಳಿಗೆ ಬಂದು ನಮ್ಮ ಕಷ್ಟ ವಿಚಾರಿಸುತ್ತಾರೆ, ನಮ್ಮ ಅಪಾಯದ ಪರಿಸ್ಥಿತಿ ನೋಡಿ ಪರಿಹಾರ ದಾರಿ ತೋರಿಸುತ್ತಾರೆ…” ಎಂದು ಕಾಯುತ್ತಿದ್ದೆವು ಆದರೆ ಅವರು ನಾವು ನೋಡುತ್ತಿದ್ದಂತೆಯೇ ಸೇತುವೆ,ನದಿ, ನೋಡಿ ತರಾತುರಿಯಲ್ಲಿ ಹೋದರು, ನಮ್ಮ ಮನೆಗಳು ಅಪಾಯದಲ್ಲಿವೆ, ಮನೆಗೆ ಬಂದು ನಮ್ಮಲ್ಲಿ‌ ವಿಚಾರಿಸುತ್ತಿದ್ದರೆ ನಮ್ಮ ಕಷ್ಟ ಹೇಳಿಕೊಳ್ಳುತ್ತಿದ್ದೆವು… ಅವರಿಗೂ ತಿಳಿಯುತ್ತಿತ್ತು…” ಎಂದು ಗುರಿಂಗಾನ ಪ್ರದೇಶದ ಸಂತ್ರಸ್ತರು ತಮ್ಮ ಅಳಲು ಹೇಳಿಕೊಳ್ಳುತ್ತಿದ್ದಾರೆ.
ಬೆಳ್ತಂಗಡಿ ತಾಲೂಕಿನಾದ್ಯಂತ ಭಾರೀ ಮಳೆಯ ಸಂದರ್ಭ ಲಾಯಿಲಾ ಗ್ರಾಮದ ಕೆಲವೆಡೆ ಸುಮಾರು 9 ಮನೆಗಳು ಮುಳುಗಡೆಯಾಗುವ ಅಪಾಯದಲ್ಲಿದ್ದು ಕುಟುಂಬಗಳನ್ನು ಸ್ಥಳಾಂತರಿಸಲಾಗಿತ್ತು. ಗ್ರಾಮದ ಗುರಿಂಗಾನ, ಪುತ್ರಬೈಲು ಸುತ್ತಮುತ್ತಲಿನ ನದಿ ದಡದಲ್ಲಿ ಸುಮಾರು ಸುಮಾರು 9 ಮನೆಗಳು ಅಪಾಯದಲ್ಲಿದೆ, ಮತ್ತು ಗ್ರಾಪಂ ಆಡಳಿತ ಮತ್ತು ಗ್ರಾಮಾಡಳಿತಾಧಿಕಾರಿ ಗುರುತಿಸಿದ್ದಾರೆ.
ಸ್ಥಳೀಯ ನದಿ ದಡದ 15 ಕುಟುಂಬಗಳನ್ನು ತಾಲೂಕು ಆಡಳಿತದ ಸೂಚನೆಯಂತೆ ಸ್ಥಳಾಂತರಿಸಲಾಗಿತ್ತು.
ಆದರೆ ಸೋಮವಾರ ಲಾಯಿಲಾ ಗ್ರಾಮಕ್ಕೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ದರ್ಶನ್ ಕೆವಿ ಅವರು ನೆರೆ ಸಂತ್ರಸ್ತ ಕುಟುಂಬಗಳ ಮನೆಗಳನ್ನು ವೀಕ್ಷಿಸದೆ, ಕುಟುಂಬಗಳಿಗೆ ಸಾಂತ್ವಾನ ಹೇಳದೆ ಕುಂದು ಕೊರತೆ ವಿಚಾರಿಸದೆ ಗಡಿಬಿಡಿಯಲ್ಲಿ ಹೋಗಿದ್ದು ಜಿಲ್ಲಾಧಿಕಾರಿಗಳ ಜನಪರ ಕಾಳಜಿಯನ್ನೇ ಶಂಕಿಸುವಂತಿತ್ತು ಎಂಬ ಮಾತುಗಳು ಕೇಳಿ ಬರುತ್ತಿದೆ.

IMG-20260804-WA0025-1-683x1024 ಬೆಳ್ತಂಗಡಿಯಲ್ಲಿ ಇಂದು ಸಚಿವ ಯು.ಟಿ. ಖಾದರ್ ಒಡ್ಡೋಲಗ!


ಇನ್ನೊಂದೆಡೆ ಜಿಲ್ಲಾಧಿಕಾರಿಗಳು ಜಿಲ್ಲಾ ಕೇಂದ್ರದಿಂದ ಇಷ್ಟು ದೂರ ಬಂದಿದ್ದು ಕೇವಲ ಕಿಂಡಿ ಅಣೆಕಟ್ಟು, ಸೇತುವೆಗಳನ್ನು ವೀಕ್ಷಿಸುವುದಕ್ಕೋ ಸಂತ್ರಸ್ತರ ಸಂಕಷ್ಟ ವಿಚಾರಿಸುವುದಕ್ಕೋ ಅಥವಾ ಭೇಟಿಯೇ ಕಾಟಾಚಾರಕ್ಕೋ ಎಂಬ ಪ್ರಶ್ನೆಗಳು ಸ್ಥಳೀಯರಿಂದ ಕೇಳಿ ಬಂದಿದ್ದು ಜಿಲ್ಲಾಧಿಕಾರಿಗಳ ಈ ವರ್ತನೆಗೆ ತಾಲೂಕು ಆಡಳಿತದ ವೈಫಲ್ಯವೇ ಕಾರಣವೇ ಎಂಬ ಪ್ರಶ್ನೆಗಳು ಗ್ರಾಮಸ್ಥರಿಂದ ಕೇಳಿ ಬರುತ್ತಿದೆ.
ಇದೀಗ ಇಂದು ಬುಧವಾರ ತಾಲೂಕಿಗೆ ಯು.ಟಿ. ಖಾದರ್ ಅವರು ಆಗಮಿಸುತ್ತಿದ್ದು ಮಳೆ ಹಾನಿ ಪ್ರದೇಶಕ್ಕೆ, ಮನೆ ಮುಳುಗಡೆ ಕಾಲೋನಿಗಳಿಗೆ ಭೇಟಿ ನೀಡುತ್ತಾರೆ ಸಂತ್ರಸ್ತರ ಸಂಕಷ್ಟ ವಿಚಾರಿಸುತ್ತಾರೆ ಎಂಬ ನಿರೀಕ್ಷೆ ಹೆಚ್ಚಿದೆ.

Post Comment

ಟ್ರೆಂಡಿಂಗ್‌

error: Content is protected !!