“ತುರ್ತು ಪರಿಹಾರ ಇನ್ನೂ ಯಾಕೆ ಕೊಟ್ಟಿಲ್ಲ? ಇದಕ್ಕೂ ಡೀಸಿ ಮತ್ತು ನಾನು ಬರಬೇಕಾ..?ತಹಶಿಲ್ದಾರ್ ಮೇಲೆ ಸಚಿವ ಯು.ಟಿ. ಖಾದರ್ ಗರಂ!

“ತುರ್ತು ಪರಿಹಾರ ಇನ್ನೂ ಯಾಕೆ ಕೊಟ್ಟಿಲ್ಲ? ಇದಕ್ಕೂ ಡೀಸಿ ಮತ್ತು ನಾನು ಬರಬೇಕಾ..?ತಹಶಿಲ್ದಾರ್ ಮೇಲೆ ಸಚಿವ ಯು.ಟಿ. ಖಾದರ್ ಗರಂ!

Share
IMG-20260806-WA0010 "ತುರ್ತು ಪರಿಹಾರ ಇನ್ನೂ ಯಾಕೆ ಕೊಟ್ಟಿಲ್ಲ?    ಇದಕ್ಕೂ ಡೀಸಿ ಮತ್ತು ನಾನು ಬರಬೇಕಾ..?ತಹಶಿಲ್ದಾರ್ ಮೇಲೆ ಸಚಿವ ಯು.ಟಿ. ಖಾದರ್ ಗರಂ!

ಬೆಳ್ತಂಗಡಿ : ಮಳೆ ಹಾನಿ, ಪ್ರಕೃತಿ ವಿಕೋಪಗಳಾದ ಸಂದರ್ಭದಲ್ಲಿ ಸಂತ್ರಸ್ತರಿಗೆ ಯಾವುದೇ ತುರ್ತು ಪರಿಹಾರವನ್ನು ಅದೇ ದಿನ‌ ವಿತರಣೆ ಮಾಡಬೇಕೆಂದು ಸರಕಾರದ ನಿರ್ದೇಶನವಿದೆ, ನೀವು ತುರ್ತು ಪರಿಹಾರ ಧನವನ್ನು ವಿತರಿಸುವುದಕ್ಕೂ ನಾನು ಡೀಸಿ ಬರುವವರೆಗೆ ಕಾಯಬೇಕಾ ? ಅದು ತುರ್ತು ಪರಿಹಾರವನ್ನು ಇಷ್ಟು ದಿನಗಳಾದರೂ ಯಾಕೆ ವಿತರಿಸಿಲ್ಲ , ತುರ್ತು ಪರಿಹಾರ ಕೊಡುವುದು ಮುಳುಗಡೆಯಾದ ಮನೆಗಳಲ್ಲಿ ಆಹಾರ ಸಾಮಾಗ್ರಿ, ಬಟ್ಟೆ ಬರೆ ಹಾಳಾಗಿರುವಾಗ ಅನುಕೂಲವಾಗಲಿ, ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಡಿ, ಹೃದಯವಂತಿಕೆಯಿಂದ ಕೆಲಸ ನಾಡಿ
ಎಂದು ಉಸ್ತುವಾರಿ ಸಚಿವ ಯು.ಟಿ. ಖಾದರ್ ಬೆಳ್ತಂಗಡಿ ತಹಶಿಲ್ದಾರ್ ಎಸ್.ಎನ್. ನರಗುಂದ ಮತ್ತಿತರ ತಾಲೂಕು ಮಟ್ಟದ ಅಧಿಕಾರಿಗಳ ಮೇಲೆ ಗರಂ ಆದರು.
ಜಿಲ್ಲಾ ಉಸ್ತುವಾರಿ .ಸಚಿವ ಯು.ಟಿ. ಖಾದರ್
ಲಾಯಿಲಾ ಗ್ರಾಮದ ನೆರೆ ಪೀಡಿತ ಪ್ರದೇಶದ ವೀಕ್ಷಣೆಗಾಗಿ
ಆಗಮಸಿ ಮನೆ ಮುಳುಗಡೆ ಸಂತ್ರಸ್ತರ ಅಳಲು ಆಲಿಸಿದರು. ಗುರಿಂಗಾನ ಬಳಿ ಕಿಂಡಿ ಅಣೆಕಟ್ಟು ಸೇತುವೆ ಪರಿಸರದಲ್ಲಿ 9 ಮನೆಗಳು ಭಾಗಶ: ಮುಳುಗಡೆಯಾಗಿದ್ದು ಕುಟುಂಬಗಳ ಆಹಾರ ಸಾಮಾಗ್ರಿ, ಬಟ್ಟೆ ಬರೆ ಮುತ್ತಿತರ ವಸ್ತುಗಳು ಜಲಾವೃತಗೊಂಡು ಹಾನಿಯಾಗಿತ್ತು.

IMG-20260615-WA0021-8 "ತುರ್ತು ಪರಿಹಾರ ಇನ್ನೂ ಯಾಕೆ ಕೊಟ್ಟಿಲ್ಲ?    ಇದಕ್ಕೂ ಡೀಸಿ ಮತ್ತು ನಾನು ಬರಬೇಕಾ..?ತಹಶಿಲ್ದಾರ್ ಮೇಲೆ ಸಚಿವ ಯು.ಟಿ. ಖಾದರ್ ಗರಂ!


ನದಿ ದಡದಲ್ಲಿ ಸ್ಥಳೀಯರು ನಡೆದು ಹೋಗುತ್ತಿದ್ದ ದಾರಿ ಮುಳುಗಡೆಯಾಗಿ ಕೊಚ್ಚಿಕೊಂಡು ಹೋಗಿದ್ದು ಕೂಡಲೇ ದುರಸ್ತಿ ಕಾಮಗಾರಿ ಮುಗಿಸಿ ಅನುಕೂಲ ಮಾಡಿಕೊಡುವಂತೆ ಸಚಿವರು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಳುಗಡೆಗೊಂಡಿದ್ದ ಮನೆಗಳನ್ನು ವೀಕ್ಷಿಸಿದ ಸಚಿವರು ಸಂತ್ರಸ್ತರ ಅಳಲು ಆಲಿಸಿದ್ದು ತಹಶೀಲ್ದಾರರ ಮೂಲಕ ತುರ್ತು ಪರಿಹಾರ ತಲುಪಿಸುವ ಭರವಸೆ ನೀಡಿದರು.

IMG-20260804-WA0025-2-683x1024 "ತುರ್ತು ಪರಿಹಾರ ಇನ್ನೂ ಯಾಕೆ ಕೊಟ್ಟಿಲ್ಲ?    ಇದಕ್ಕೂ ಡೀಸಿ ಮತ್ತು ನಾನು ಬರಬೇಕಾ..?ತಹಶಿಲ್ದಾರ್ ಮೇಲೆ ಸಚಿವ ಯು.ಟಿ. ಖಾದರ್ ಗರಂ!

Post Comment

ಟ್ರೆಂಡಿಂಗ್‌

error: Content is protected !!