ಲಾಯಿಲಾ ಎಂಬ ಅಕ್ರಮ ಕಟ್ಟಡಗಳ ಸ್ವರ್ಗದಲ್ಲಿ ಕರೀಮಜ್ಜನ ಕೈಚಳಕದ ಹಿಂದೆ ‘ಶ್ರೀನಿವಾಸ’ಮಹಾತ್ಮೆ!

ಲಾಯಿಲಾ ಎಂಬ ಅಕ್ರಮ ಕಟ್ಟಡಗಳ ಸ್ವರ್ಗದಲ್ಲಿ ಕರೀಮಜ್ಜನ ಕೈಚಳಕದ ಹಿಂದೆ ‘ಶ್ರೀನಿವಾಸ’ಮಹಾತ್ಮೆ!

Share
IMG-20260806-WA0017-2-1024x576 ಲಾಯಿಲಾ ಎಂಬ ಅಕ್ರಮ ಕಟ್ಟಡಗಳ ಸ್ವರ್ಗದಲ್ಲಿ ಕರೀಮಜ್ಜನ ಕೈಚಳಕದ ಹಿಂದೆ 'ಶ್ರೀನಿವಾಸ'ಮಹಾತ್ಮೆ!

ಬೆಳ್ತಂಗಡಿ : ಲಾಯಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಭೂಪರಿವರ್ತನೆಯಾಗದ ಜಾಗದಲ್ಲಿ ಹೊಟೇಲ್ ಉದ್ಯಮ ನಡೆಸಲು ಕಾನೂನು ಬಾಹಿರವಾಗಿ ವಾಣಿಜ್ಯ ವ್ಯವಹಾರದ ಪರವಾನಿಗೆ ನೀಡಿರುವ ಬಗ್ಗೆ ಲಾಯಿಲಾ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿರುದ್ಧ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಆಯಿಶಾ ಕೋಂ ಎಚ್.ಅಬ್ದುಲ್ ಕರೀಮ್ ಎಂಬವರ ಸ.ನಂ: 164/2B1B ರಲ್ಲಿ 0.01.50 ಎಕ್ರರೆ ಜಾಗವನ್ನು
ಭೂಪರಿವರ್ತನೆ ಮಾಡದೇ ‘ನ್ಯೂ ಮೈನಾ’ ಹೊಟೇಲ್ ಹೆಸರಿನಲ್ಲಿರುವ ವಾಣಿಜ್ಯ ವ್ಯವಹಾರದ ಉದ್ದೇಶಕ್ಕಾಗಿ ಜಾಗದ ಮಾಲಕಿ (ಪತ್ನಿ) ಆಯಿಶಾ ಎಂಬವರಾಗಿದ್ದರೂ ಪತಿ ಹೊಟೇಲ್ ಮಾಲೀಕ ಎಚ್.ಅಬ್ದುಲ್ ಕರೀಂ ಎಂಬವರಿಗೆ 30/09/2025 ರಂದು ಲಾಯಿಲಾ ಗ್ರಾಮ ಪಂಚಾಯತ್ ನಲ್ಲಿ ಪ್ರಭಾರ ಅಭಿವೃದ್ಧಿ ಅಧಿಕಾರಿ(ಪಿಡಿಒ) ಆಗಿದ್ದ ಶ್ರೀನಿವಾಸ.ಡಿ.ಪಿ. ಅವರು ಕಾನೂನು ಬಾಹಿರವಾಗಿ ಲೈಸೆನ್ಸ್ ನೀಡುದ್ದಾರೆ.

IMG-20260804-WA0025-6-683x1024 ಲಾಯಿಲಾ ಎಂಬ ಅಕ್ರಮ ಕಟ್ಟಡಗಳ ಸ್ವರ್ಗದಲ್ಲಿ ಕರೀಮಜ್ಜನ ಕೈಚಳಕದ ಹಿಂದೆ 'ಶ್ರೀನಿವಾಸ'ಮಹಾತ್ಮೆ!


ಭೂಪರಿವರ್ತನೆಯಾಗದೆ ಮತ್ತು 9/11 ಸೃಜನೆಯಾಗದೆ ಅನಧಿಕೃತವಾಗಿ ವಾಣಿಜ್ಯ ಉದ್ದೇಶಕ್ಕೆ ಶ್ರೀನಿವಾಸ.ಡಿ.ಪಿ. ಅವರು ಕಾನೂನು ಬಾಹಿರವಾಗಿ ವಾಣಿಜ್ಯ ಉದ್ದೇಶಕ್ಕೆ ಲೈಸೆನ್ಸ್ ನೀಡಿ ಕಾನೂನು ಬಾಹಿರ ಕೃತ್ಯ ಎಸಗಿರುವುದರಿಂದ ತಕ್ಷಣ ಈ ಬಗ್ಗೆ ತನಿಖೆ ನಡೆಸಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಆಗಿದ್ದ ಶ್ರೀನಿವಾಸ.ಡಿ.ಪಿ ಹಾಗೂ ಕಾನೂನು ಪ್ರಕಾರ ಯಾವುದೇ ದಾಖಲೆಗಳಿಲ್ಲದೆ ಲೈಸೆನ್ಸ್ ಮಾಡಿಸಿಕೊಂಡ ಆಯಿಶಾ ಮತ್ತು ಹೊಟೇಲ್ ಮಾಲೀಕ ಎಚ್.ಅಬ್ದುಲ್ ಕರೀಂ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ರಾಯಿಸಿ ಲಾಯಿಲ ಗ್ರಾಮಸ್ಥರೊಬ್ಬರು ಆ.6 ರಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತೃಪ್ತಿಕರ ಕಪ್ಪ ಕಾಣಿಕೆ ಒಪ್ಪಿಸಿದರೆ ದುರಸ್ತಿಯ ಹೆಸರಿನಲ್ಲಿ ಗ್ರಾಮ ಪಂಚಾಯತ್ ಕಾರ್ಯಾಲಯದ ಆವರಣ ಗೋಡೆಗೆ ಅಂಟಿಕೊಂಡೇ ಅಕ್ರಮವಾಗಿ ವಾಣಿಜ್ಯ ಕಟ್ಟಡ ಕಟ್ಟಲು ಸಂಪೂರ್ಣ ಅಭಯ ಹಸ್ತ ನೀಡುವ
ಭ್ರಷ್ಟ ಅಧಿಕಾರಿಗಳು ತಾಲೂಕು ಪಂಚಾಯತ್ ನಲ್ಲೂ ಗ್ರಾಮಪಂಚಾಯತ್ ನಲ್ಲಿದ್ದರೆ ಈ ಕರೀಮ್ , ಸಿಕ್ವೇರಾದಿಯಾಗಿ ಇನ್ನಷ್ಟು ಪ್ರಭಾವಿಗಳು ಅಕ್ರಮ ಕಟ್ಟಡಗಳ ಮಾಲಕರಾಗುವ ಸುವರ್ಣವಕಾಶ ಒದಗಿ ಬರಬಹುದು.!

IMG-20260615-WA0021-12 ಲಾಯಿಲಾ ಎಂಬ ಅಕ್ರಮ ಕಟ್ಟಡಗಳ ಸ್ವರ್ಗದಲ್ಲಿ ಕರೀಮಜ್ಜನ ಕೈಚಳಕದ ಹಿಂದೆ 'ಶ್ರೀನಿವಾಸ'ಮಹಾತ್ಮೆ!


ಆದರೆ ಅಂಗೈ ಅಗಲ ನಿವೇಶನದಲ್ಲಿ ಬಡವರು ವಾಸಕ್ಕೊಂದು ಮನೆ ಕಟ್ಟಿಕೊಂಡರೆ ಡೋರ್ ನಂಬ್ರ ಕೇಳಿದ್ರೆ ಮಾತ್ರ ಈ ಭ್ರಷ್ಟ ಅಧಿಕಾರಿಗಳಿಗೆ ಮತ್ತು (ಕೆಲವು) ಸ್ಥಳೀಯ ಜನಪ್ರತಿನಿಧಿಗಳ ಮುಖವಾಡದ ಸರಕಾರಿ ನಿವೇಶನ ಮಾರಾಟ ದಂಧೆಕೋರರಿಗೆ ಕಾನೂನು, ಪ್ರೊಸೀಜರ್ ಅಡ್ಡ ಬರುತ್ತದೆ ಎಂಬುದು ಸ್ಥಳೀಯರ
ಅಭಿಪ್ರಾಯವಾಗಿದೆ.

Post Comment

ಟ್ರೆಂಡಿಂಗ್‌

error: Content is protected !!