ಮುಗೇರಡ್ಕ ಸರಕಾರಿ ಶಾಲೆಗೆ ಮೊಗ್ರು ಸರಕಾರಿ ಶಾಲಾ ಸೇವಾ ಟ್ರಸ್ಟ್ ನಿಂದ ರೂ.7.25 ಲಕ್ಷ ದೇಣಿಗೆ ವಿನಿಯೋಗ

ಬೆಳ್ತಂಗಡಿ : ಮೊಗ್ರು ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ಮೊಗ್ರು ಬೆಳ್ತಂಗಡಿ ಇವರು ದತ್ತು ಸ್ವೀಕರಿಸಿದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಮೊಗ್ರು ಇದರ ಅಭಿವೃದ್ಧಿಗಾಗಿ ಟ್ರಸ್ಟ್ ನ ನೇತೃತ್ವದಲ್ಲಿ 2025-26ರ ಶೈಕ್ಷಣಿಕ ಅವಧಿಯಲ್ಲಿ ವಿವಿಧ ಅಭಿವೃದ್ಧಿ
ಕಾರ್ಯಗಳಿಗಾಗಿ ಹಾಗೂ ಇಬ್ಬರು ಆಂಗ್ಲ ಮಾಧ್ಯಮ ಶಿಕ್ಷಣ ಬೋಧಕರ ವೇತನ ಪಾವತಿ ಸೇರಿದಂತೆ ಶಾಲಾಭಿವೃದ್ಧಿಯ ಮಹತ್ವದ ಉದ್ದೇಶಗಳಿಗೆ ಸುಮಾರು 7ಲಕ್ಷ 25 ಸಾವಿರ ರೂಪಾಯಿಯನ್ನು ವಿನಿಯೋಗಿಸಲಾಗಿದೆ ಎಂದು ಮುಗೇರಡ್ಕ ಸರಕಾರಿ ಸರಕಾರಿ ಶಾಲಾ ಸೇವಾ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಯೋಗ ಗುರು ಕುಶಾಲಪ್ಪ ಗೌಡ ನೆಕ್ಕರಜೆ ಮಾಹಿತಿ ನೀಡಿದರು. ಅವರು ಶಾಲಾಭಿವೃದ್ಧಿ ಟ್ರಸ್ಟಿನ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭ ಮೊಗ್ರು ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಪ್ರಾರಂಭಿಕ ಹಂತದಲ್ಲಿ ಶಾಲಾ ವಠಾರ, ಶಾಲಾ ಛಾವಣಿ ರಿಪೇರಿ, ಶಾಲಾ ಕೊಠಡಿಗಾಗಿ ವಿಭಜಕ, ಹೊಸ ಡೆಸ್ಕ್ ಹಾಗೂ ಆಕರ್ಷಕ ಬೆಂಚು, ಮೇಜು ಕುರ್ಚಿ, ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಮನೋಹರ ಗೌಡ ಅಂತರ ಮಾಹಿತಿ ನೀಡಿದರು.















Post Comment