ಬೆಳ್ತಂಗಡಿ ವಿದ್ಯಾರ್ಥಿ ಸುಮಂತ್ ಕೊಲೆ ಪ್ರಕರಣ:

ಬೆಳ್ತಂಗಡಿ ವಿದ್ಯಾರ್ಥಿ ಸುಮಂತ್ ಕೊಲೆ ಪ್ರಕರಣ:

Share
IMG-20260217-WA0005-1-1024x463 ಬೆಳ್ತಂಗಡಿ ವಿದ್ಯಾರ್ಥಿ ಸುಮಂತ್ ಕೊಲೆ ಪ್ರಕರಣ:

ಬೆಳ್ತಂಗಡಿ : ಮಂಗಳೂರಿನಲ್ಲಿ ಕರ್ನಾಟಕ ಸರಕಾರದ ಗೃಹ ಸಚಿವರಾದ ಮಾನ್ಯ ಡಾ.ಜಿ.ಪರಮೇಶ್ವರವರನ್ನು ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಸಂಬೋಳ್ಯ ಎಂಬಲ್ಲಿ ಗೇರುಕಟ್ಟೆ
ಪ್ರೌಢ ಶಾಲೆಯ 9ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿ ಸುಮಂತ್ ನಾಳ ದೇವಸ್ಥಾನಕ್ಕೆ ಧನುಪೂಜೆಗೆ ಹೋಗುವ ತೋಟದ ಕೆರೆಯಲ್ಲಿ ಶವವಾಗಿ ಜ.14ರಂದು ಪತ್ತೆಯಾಗಿರುವ ಪ್ರಕರಣದ ತನಿಖೆಯು ನಿಧಾನಗತಿಯಲ್ಲಿ ಸಾಗುತ್ತಿದೆ. ಕೂಡಲೇ ಆರೋಪಿಗಳನ್ನು ಪತ್ತೆಹಚ್ಚಿ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಬಾಲಕನ ಪೋಷಕರು ಫೆ.17ರಂದು ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.

ಸಚಿವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಅವರನ್ನು ಮತ್ತು ಪಶ್ಚಿಮ ವಲಯದ ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್ ಅವರಿಂದ ಎಲ್ಲಾ ತನಿಖಾ ವಿವರಗಳನ್ನು ಕೇಳಿ ತಿಳಿದುಕೊಂಡರು. ಈ ಸಂದರ್ಭ ಎಸ್ .ಪಿ.ಅರುಣ್ ಕುಮಾರ್ ಅವರು ಪ್ರತ್ಯೇಕ ತಂಡ ಇದುವರೆಗೂ ನಡೆಸಿರುವ ತನಿಖೆಯ ಪ್ರಗತಿ ಬಗ್ಗೆ ಗೃಹಸಚಿವರಿಗೆ ಮಾಹಿತಿ ನೀಡಿದರು.
ಸಚಿವರು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸುವುದರ ಬಗ್ಗೆ ನಿರ್ದೇಶನವನ್ನು ನೀಡಿದರು ಮತ್ತು ನೊಂದ ಪೋಷಕರಿಗೆ ಸಾಂತ್ವನ ಹೇಳಿದರು.

Post Comment

ಟ್ರೆಂಡಿಂಗ್‌

error: Content is protected !!