ಮೂಡಬಿದ್ರಿ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧದ ಅತ್ಯಾಚಾರ ಪ್ರಕರಣ ತನಿಖೆ ಸಿಐಡಿಗೆ

ಮೂಡಬಿದ್ರಿ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧದ ಅತ್ಯಾಚಾರ ಪ್ರಕರಣ ತನಿಖೆ ಸಿಐಡಿಗೆ

Share

ಬೆಳ್ತಂಗಡಿ : ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ಅಮಾನತು ಬೆನ್ನಲ್ಲೇ ವೇಣೂರು ಠಾಣೆಯಲ್ಲಿ ದಾಖಲಾಗಿದ್ದ ಶಿಕ್ಷಕಿ ಅತ್ಯಾಚಾರ ಪ್ರಕರಣದ ತನಿಖೆಯನ್ನು ಸಿ.ಐ.ಡಿ. ಗೆ ವಹಿಸಿ ಸರಕಾರ ಆದೇಶಿಸಿದೆ.
ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ
ನಿವಾಸಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಮುಖ್ಯ ಶಿಕ್ಷಕಿಯಾಗಿರುವ ಮಹಿಳೆ ಮೇಲೆ 2018 ರಿಂದ 2023ರ ಅವಧಿಯಲ್ಲಿ ಮನೆಗೆ ಬಂದು ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ಬಲವಂತವಾಗಿ ಅತ್ಯಾಚಾರವೆಸಗಿರುವ
ಬಗ್ಗೆ ಮಾ.21 ರಂದು ಸಂಜೆ ವೇಣೂರು ಪೊಲೀಸ್ ಠಾಣೆಯಲ್ಲಿ ನೊಂದ ಮಹಿಳೆ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು.
ಮಹಿಳೆ ನೀಡಿದ ದೂರಿನ ಆಧಾರದಲ್ಲಿ‌ ಪೊಲೀಸರು ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ವಿರುದ್ಧ 376(2)(a)(1),376(2)(n),384,506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಇದೀಗ ಪಿ.ಜಿ. ಸಂದೇಶ್ ವಿರುದ್ಧ ಅತ್ಯಾಚಾರ ಪ್ರಕರಣದ ತನಿಖೆಯನ್ನು‌ ಇದೀಗ ಸಿಐಡಿಗೆ ವಹಿಸಿ‌ ಆದೇಶಿಸಲಾಗಿದೆ.

Previous post

ಮೂಡಬಿದ್ರಿಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧದ ಅತ್ಯಾಚಾರ ಪ್ರಕರಣ ತನಿಖೆ ಸಿಐಡಿಗೆ

Next post

ಪೌರ ಕಾರ್ಮಿಕರಿಗೆ ನ್ಯಾಯಯುತ ವೇತನ, ಪಿ.ಎಫ್., ಇಎಸ್ಐ , ಹೆಲ್ತ್ ಕಾರ್ಡ್ ಒದಗಿಸಬೇಕು: ಪೌರ ಕಾರ್ಮಿಕ ಮುಖಂಡ ಎಸ್ .ಪಿ. ಆನಂದ್ ಒತ್ತಾಯ

Post Comment

ಟ್ರೆಂಡಿಂಗ್‌

error: Content is protected !!