ನಡ ಗ್ರಾಮಸಭೆ:ಗೈರಾದ ಇಲಾಖಾಧಿಕಾರಿಗಳು!

ಬೆಳ್ತಂಗಡಿ : ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ತೀವ್ರ ಪ್ರಮುಖ ಚರ್ಚೆ ನಡೆಸುತ್ತಿದ್ದರೂ ಗ್ರಾಮಸಭೆಯ ನೋಡಲ್ ಅಧಿಕಾರಿ ಬಾಯಿಗೆ ಬೀಗ ಹಾಕಿಕೊಂಡಂತೆ ಕುಳಿತುಕೊಂಡು ಚರ್ಚೆಯ ಬಗ್ಗೆ ನಿರ್ಲಕ್ಷ್ಯವಹಿಸಿದ ಘಟನೆ ನಡ ಗ್ರಾಮಸಭೆಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕು ಮಹಾತ್ಮಾ ಗಾಂಧಿ ನಡ ಗ್ರಾಮ ಪಂಚಾಯತ್ 2026 -27 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಅ 03 ರಂದು ನಡೆಯಿತು. ಈ ವೇಳೆ ಸಭೆಯ ಪ್ರಾರಂಭದಲ್ಲೆ ವಿವಿಧ ಇಲಾಖೆಗಳ ಅಧಿಕಾರಿಗಳ ಗೈರು ಗ್ರಾಮಸ್ಥರ ಅಸಾಮಾಧಾನಕ್ಕೆ ಕಾರಣವಾಯಿತು. ಅಧಿಕಾರಿಗಳು ಬಾರದಿದ್ದರೆ ಗ್ರಾಮ ಸಭೆ ನಡೆಸುವ ಅಗತ್ಯತೆ ಏನಿದೆ. ಗ್ರಾಮ ಸಭೆಯಲ್ಲಿ ನಡೆಯುವ ಚರ್ಚೆಗಳಿಗೆ ಉತ್ತರಿಸುವವರು ಯಾರು?
ಗ್ರಾಮಸ್ಥರು ಕೆಲವೊಂದು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಉದ್ಧೇಶದಿಂದ ಸಭೆಯಲ್ಲಿ ಭಾಗವಹಿಸಿದರೂ ಅಧಿಕಾರಿಗಳು ಬಾರದಿದ್ದರೆ ಸಮಸ್ಯೆ ಬಗೆಹರಿಸುವವರು ಯಾರು? ರಸ್ತೆ ಬದಿ ಚರಂಡಿ ದುರಸ್ತಿಗೊಳ್ಳದೇ ರಸ್ತೆಯಲ್ಲಿ ನೀರು ಹರಿದು ಅನೇಕ ಅನಾಹುತ ಸಂಭವಿಸುತ್ತಿವೆ. ಪಿಡಬ್ಲ್ಯುಡಿ ಅಧಿಕಾರಿಗಳು ಎಲ್ಲಿ ಎಂದು ಪ್ರಶ್ನಿಸಿದ ಗ್ರಾಮಸ್ಥರು ಅಧಿಕಾರಿಳನ್ನು ಸಭೆಗೆ ಕರೆಸಿ ಎಂದು ಪಟ್ಟು ಹಿಡಿದರು.

ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಜಿ.ಪಂ. ಇಂಜಿನಿಯರಿಂಗ್ ಆರೋಗ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ ಮತ್ತಿತರ ಇಲಾಖಾಧಿಕಾರಿಗಳು ಗೈರಾಗಿದ್ದೇ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು. ಬಹುತೇಕ ಇಲಾಖೆಗಳು ಗೈರಾಗಿದ್ದು ಗ್ರಾಮಸ್ಥರು ಈ ಬಗ್ಗೆ ತೀವ್ರವಾಗಿ ಪ್ರಶ್ನಿಸಿದರೂ, ಗ್ರಾಮಸಭೆಯಲ್ಲಿ ಪ್ರಮುಖ ವಿಚಾರಗಳು ತೀವ್ರ ಚರ್ಚೆಗೆ ಕಾರಣವಾಗಿದ್ದರೂ
ನೋಡಲ್ ಅಧಿಕಾರಿ ಒಂದು ಮಾತು ಬಾಯಿ ಬಿಡಲೇ ಇಲ್ಲ!
















Post Comment