ಪಿಎಫ್ಐ ಪ್ರತಿಭಟನೆಯಲ್ಲಿ ಪ್ರಚೋದನಾಕಾರಿ ಭಾಷಣ ಪ್ರಕರಣ:

ಪಿಎಫ್ಐ ಪ್ರತಿಭಟನೆಯಲ್ಲಿ ಪ್ರಚೋದನಾಕಾರಿ ಭಾಷಣ ಪ್ರಕರಣ:

Share
IMG-20260804-WA0022-1 ಪಿಎಫ್ಐ ಪ್ರತಿಭಟನೆಯಲ್ಲಿ ಪ್ರಚೋದನಾಕಾರಿ ಭಾಷಣ ಪ್ರಕರಣ:

ಬೆಳ್ತಂಗಡಿ : 2025ನೇ ಜುಲೈ 23 ರಂದು ಬೆಳ್ತಂಗಡಿ ತಾಲೂಕು ಕಛೇರಿ ಬಳಿ ಪಿಎಫ್ಐ (ಪಾಪ್ಯುಲ್ಲರ್ ಫ್ರಂಟ್ ಆಫ್ ಇಂಡಿಯಾ) ಬೆಳ್ತಂಗಡಿ ವಲಯ ಸಮಿತಿ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತೆ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಹಮ್ಮದ್ ರಿಯಾಜ್ ಫರಂಗಿಪೇಟೆ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 315/2015, ಕಲಂ: 153(A)295(A) ಭಾ.ದಂ.ಸಂ (IPC)ರಂತೆ ಪ್ರಕರಣ ದಾಖಲಾಗಿತ್ತು.

IMG-20260615-WA0021-6 ಪಿಎಫ್ಐ ಪ್ರತಿಭಟನೆಯಲ್ಲಿ ಪ್ರಚೋದನಾಕಾರಿ ಭಾಷಣ ಪ್ರಕರಣ:

ಪ್ರಕರಣದ ತನಿಖೆ ನಡೆಸಿದ ಅಂದಿನ ಬೆಳ್ತಂಗಡಿ ಠಾಣಾ ಪೊಲೀಸ್ ಉಪನಿರೀಕ್ಷಕರು ಹಾಗೂ ಪ್ರಕರಣದ ತನಿಖಾಧಿಕಾರಿಗಳಾಗಿದ್ದ ರವಿ ಬಿ.ಎಸ್ ಅವರು ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ ಮಾನ್ಯ ನ್ಯಾಯಾಲಯಕ್ಕೆ ದೊಷಾರೊಪಣಾ ಪಟ್ಟಿ ಸಲ್ಲಿಸಿದ್ದು ಮಾನ್ಯ ಪ್ರಿನ್ಸಿಪಲ್ ಸಿಜೆ ಮತ್ತು ಜೆಎಮ್ ಎಫ್ ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಆರೋಪಿತನ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ರಾಮಲಿಂಗಪ್ಪರವರು ಕಲಂ : 153(A) ಅಡಿಯಲ್ಲಿ 6 ತಿಂಗಳ ಸಾದಾ ಕಾರಾಗೃಹ ವಾಸ ಮತ್ತು 10,000 ದಂಡ ವಿಧಿಸಿ ಅದೇಶಿಸಿರುತ್ತಾರೆ.
ಸರಕಾರಿ ಅಭಿಯೋಜಕರಾದ ಆಶೀತ ಅವರು ವಾದಮಂಡನೆ ನಡೆಸಿರುತ್ತಾರೆ.

IMG-20260804-WA0025-683x1024 ಪಿಎಫ್ಐ ಪ್ರತಿಭಟನೆಯಲ್ಲಿ ಪ್ರಚೋದನಾಕಾರಿ ಭಾಷಣ ಪ್ರಕರಣ:

Post Comment

ಟ್ರೆಂಡಿಂಗ್‌

error: Content is protected !!