ಗುರುವಾಯನಕೆರೆ; ವಿವಾದಿತ ಜಾಗದಲ್ಲಿ ‘ಭೂಪರಿವರ್ತನೆ’ ಇಲ್ಲದೆ ಅನಧಿಕೃತ ಕಟ್ಟಡ ನಿರ್ಮಾಣ:

ಬೆಳ್ತಂಗಡಿ : ಭೂಪರಿರ್ವತಿತವಲ್ಲದ ಮತ್ತು ಖಾಸಗಿ ವಿವಾದಿತ ಜಮೀನಿನಲ್ಲಿ ವ್ಯಕ್ತಿಯೋರ್ವರು ಸ್ಥಳೀಯ ಗ್ರಾಮಪಂಚಾಯತ್ ನಿಂದ ಹೊಸ ಕಟ್ಟಡ ರಚನೆಗಾಗಲಿ ಅಥವಾ ಕಟ್ಟಡ ದುರಸ್ತಿಗಾಗಲಿ ಯಾವುದೇ ಅನುಮತಿಯನ್ನು ಪಡೆಯದೆ ಅನಧಿಕೃತವಾಗಿ ಕಟ್ಟಡ ನಿರ್ಮಿಸುತ್ತಿರುವ ಪ್ರಕರಣವೊಂದು ಕುವೆಟ್ಟು ಗ್ರಾಮದಲ್ಲಿ ಬೆಳಕಿಗೆ ಬಂದಿದ್ದು ಅನಧಿಕೃತ ಕಟ್ಟಡ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಇದೀಗ ಗ್ರಾಮಪಂಚಾಯತ್ ಆಡಳಿತ ನೋಟೀಸ್ ನೀಡಿದೆ.

ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಸ.ನಂ.21/4, 25/12 ಹಾಗೂ 17/12ರಲ್ಲಿರುವ ನ್ಯಾಯಾಲಯದಲ್ಲಿ ವಿವಾದದಲ್ಲಿರುವ ಖಾಸಗಿ ಜಮೀನಿನಲ್ಲಿ ಗುರುವಾಯನಕೆರೆ ನಿವಾಸಿ ಗಾಡ್ ಫ್ರೀ ಡಿಕುನ ಎಂಬವರು
ಗ್ರಾಮಪಂಚಾಯತ್ ನಿಂದ ಯಾವುದೇ ಅನುಮತಿಯನ್ನು ಪಡೆಯದೆ ಅನಧಿಕೃತ ಕಟ್ಟಡವನ್ನು ನಿರ್ಮಿಸುತ್ತಿರುವ ಬಗ್ಗೆ ವ್ಯಕ್ತಿಯೊಬ್ಬರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕುವೆಟ್ಟು ಗ್ರಾಮಪಂಚಾಯತ್ ಆಡಳಿತವು, ಯಾವುದೇ ಅನಧಿಕೃತ ಕಟ್ಟಡದ ರಚನೆಯಾಗಲಿ, ದುರಸ್ತಿಯಾಗಲಿ ಮಾಡಬಾರದೆಂದು ಎಚ್ಚರಿಕೆ ನೋಟೀಸ್ ನೀಡಿದೆ.

ಸೂಚನೆ ಮೀರಿ ನಿಯಮ ಉಲ್ಲಂಘಿಸಿ ಉದ್ದೇಶಿತ ಅನಧಿಕೃತ ಕಾಮಗಾರಿಯನ್ನು ಮತ್ತೆ ಮುಂದುವರಿಸಿದಲ್ಲಿ ಕಟ್ಟಡವನ್ನು ನಿಯಮಾನುಸಾರ ತೆರವುಗೊಳಿಸುವ
ಬಗ್ಗೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಗ್ರಾಮಪಂಚಾಯತ್ ನೋಟೀಸ್ ನಲ್ಲಿ ಖಡಕ್ ಸೂಚನೆ ನೀಡಿದೆ.















Post Comment