ಮೈರೋಳ್ತಡ್ಕ ಶಾಲಾ ಅಮೃತ ಮಹೋತ್ಸವ: ನಿರ್ಮಾಣ ಹಂತದ ನೂತನ ತರಗತಿ ಕೊಠಡಿ ಕಾಮಗಾರಿ ಪ್ರಗತಿ ವೀಕ್ಷಣೆ

ಬಂದಾರು : ಮೈರೋಳ್ತಡ್ಕ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ವರ್ಷಾಚರಣೆಯ ಸವಿ ನೆನಪಿನಲ್ಲಿ ಶಾಲಾ ಹಿರಿಯ ವಿದ್ಯಾರ್ಥಿಗಳು ದಾನಿಗಳು, ವಿದ್ಯಾಭಿಮಾನಿಗಳ ಪ್ರಾಯೋಜಕತ್ವ ಮತ್ತು ಸಹಕಾರದೊಂದಿಗೆ ಸುಮಾರು 26 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ತರಗತಿ ಕೊಠಡಿಯ ಕಾಮಗಾರಿಯ ಪ್ರಗತಿಯು 50%ದತ್ತ ಸಾಗುತ್ತಿದೆ.
ಪ್ರಗತಿಯಲ್ಲಿರುವ ನೂತನ ತರಗತಿ ಕೊಠಡಿಯ ಕಾಮಗಾರಿಯನ್ನು ಎಸ್.ಡಿ.ಎಂ.ಸಿ., ಹಿರಿಯ ವಿದ್ಯಾರ್ಥಿ ಸಂಘ ಮತ್ತು ಅಮೃತ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ವೀಕ್ಷಿಸಿದರು.

ಈ ಸಂದರ್ಭ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪ್ರಶಾಂತ್ ನಿರುಂಬುಡ, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷರಾದ ಕೃಷ್ಣಯ್ಯ ಆಚಾರ್ಯ, ಸಿ.ಎ.ಬ್ಯಾಂಕ್ ನಿವೃತ್ತ ಮೆನೇಜರ್
ಪಿ.ತಿಮ್ಮಯ್ಯ ಗೌಡ, ಸಿ.ಎ.ಬ್ಯಾಂಕ್ ನಿವೃತ್ತ ಮೆನೇಜರ್ ರಘುಪತಿ ಭಟ್ ಅನಾಬೆ, ಮುಂಡೂರು ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಆನಂದ ಗೌಡ, ಪ್ರಗತಿಪರ ಕೃಷಿಕರಾದ ಧರ್ಣಪ್ಪ ಗೌಡ ಬಾನಡ್ಕ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗುರುಪ್ರಸಾದ್, ಕೋಶಾಧಿಕಾರಿ ಯಶೋಧಾ, ಮುಖ್ಯೋಪಾಧ್ಯಾಯ ಶೀನಪ್ಪ ಗೌಡ, ಸಹ ಶಿಕ್ಷಕ ಶ್ರೀಧರ್, ಶಿವ ಗೆಳೆಯರ ಬಳಗದ ಅಧ್ಯಕ್ಷ ಜಗದೀಶ್ ಗೌಡ ಕೊಂಬೇಡಿ, ಕಾರ್ಯದರ್ಶಿ ಚೇತನ್ ಕುರಿಯಾಳ, ಶ್ರೀಧರ ಗೌಡ ಡೊಂಬಯ್ಯ ಗೌಡ, ಮೋಹನ್ ಬಂಗೇರ, ಚಂದಪ್ಪ ಗೌಡ ನಡುಮಜಲು, ಎಸ್.ಡಿ.ಎಂ.ಸಿ. ಸದಸ್ಯೆ ಹರಿಣಾಕ್ಷಿ ನವಶ್ರೀ ಯುವತಿ ಮಂಡಲದ ಸದಸ್ಯೆಯರು, ಪೋಷಕರು ಇದ್ದರು.
















Post Comment