ಬೆಳ್ತಂಗಡಿಯಲ್ಲಿ ಸೌಜನ್ಯ 14ನೇ ವರ್ಷದ ಸಂಸ್ಮರಣೆ ಪ್ರಯುಕ್ತ ‘ನ್ಯಾಯದ ನಡಿಗೆ’ ಮೌನ ಮೆರವಣಿಗೆ


ಅಭಿನಂದನಾ ಸಭೆ ಉದ್ಘಾಟನೆ : ಪ್ರಮುಖ ಹೋರಾಟಗಾರರು ಭಾಗಿ
ಬೆಳ್ತಂಗಡಿ : 2012ರ ಅಕ್ಟೋಬರ್10ಕ್ಕೆ ಧರ್ಮಸ್ಥಳ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಭರ್ತಿ 14 ವರ್ಷಗಳು ತುಂಬಿದ್ದು ಸೌಜನ್ಯಳ 14ನೇ ವರ್ಷದ ಸಂಸ್ಮರಣೆಯ ಪ್ರಯುಕ್ತ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ, ಪ್ರಜಾಪ್ರಭುತ್ವ ವೇದಿಕೆಯ ನೇತೃತ್ವದಲ್ಲಿ ಬೆಳ್ತಂಗಡಿಯಲ್ಲಿ ಸೌಜನ್ಯಪರ ಹೋರಾಟ ಗಾರರು ಅಕ್ಟೋಬರ್ 10ನೇ ಶನಿವಾರ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಆಯೋಜಿಸಿರುವ ‘ನ್ಯಾಯದ ನಡಿಗೆ’ ಎಂಬ ಕಾರ್ಯಕ್ರಮ ನಡೆಯುತ್ತಿದೆ.
ಕುಸುಮಾವತಿ ಚಂದಪ್ಪ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸೌಜನ್ಯ ಹೆತ್ತವರೊಂದಿಗೆ ಬೆಂಬಲವಾಗಿ ನಿಂತು ವಿವಿಧ ಹಂತದ ನ್ಯಾಯಾಲಯಗಳಲ್ಲಿ ಹೋರಾಟದುದ್ದಕ್ಕೂ ಸೌಜನ್ಯ ಕುಟುಂಬದ ಪರವಾಗಿ ನಿಂತು ಉಚಿತವಾಗಿ ವಾದಮಂಡಿಸಿದ ನ್ಯಾಯವಾದಿಗಳಿಗೆ, ಹೋರಾಟವನ್ನು ಜೀವಂತವಾಗಿರಿಸಿದ ಮಾಧ್ಯಮಗಳಿಗೆ, ಇದೀಗ ತನಿಖೆ ಕೈಗೆತ್ತಿಕೊಂಡಿರುವ ಎಸ್ ಐ ಟಿಯ ದಕ್ಷ ಪೊಲೀಸ್ ಅಧಿಕಾರಿಗಳಿಗೆ, ಹೋರಾಟಗಾರರಿಗೆ ಅಭಿನಂದನಾ ನಡೆಯುತ್ತಿದೆ. ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅಧ್ಯಕ್ಷತೆವಹಿಸಿದ್ದರು. ವೇದಿಕೆಯಲ್ಲಿ ಗಿರೀಶ್ ಮಟ್ಟಣವರ್ , ತಮ್ಮಣ್ಣ ಶೆಟ್ಟಿ, ಪ್ರಸನ್ನ ರವಿ, ಜಯಂತ್ ಟಿ, ದಿನೇಶ್ ಗಾಣಿಗ, ಅಹೋರಾತ್ರ, ಹೈಕೋರ್ಟ್ ನ್ಯಾಯವಾದಿಗಳಾದ ಮೋಹಿತ್ ಕುಮರ್ , ವಿಜಯ ವಾಸು ಪೂಜಾರಿ, ನವೀನ್ ಕುಮಾರ್, ಕೃಷ್ಣಪ್ಪ ಗೌಡ ದೇವಸ್ಯ ಮುಂತಾದವರು ಉಪಸ್ಥಿತರಿದ್ದರು. ‘ನ್ಯಾಯದ ನಡೆ’ ಮತ್ತು ಗೌರವದ ಅಭಿನಂದನಾ ಸಭೆಯಲ್ಲಿ ಸಾವಿರಾರು ಸೌಜನ್ಯಪರ ಹೋರಾಟಗಾರರು ಭಾಗವಹಿಸುತ್ತಿದ್ದಾರೆ.















Post Comment