ಬೆಳಾಲು ಮೀನಂದೇಲು :ಅಕ್ರಮ ಮದ್ಯ ದಾಸ್ತಾನಿರಿಸಿದ್ದ ಗೋಡೌನ್ ಗೆ ಅಬಕಾರಿ ಡಿಸಿ ವಿಶೇಷ ಪತ್ತೆ ದಳ ಸಿಬ್ಬಂದಿ ದಾಳಿ

ಬೆಳ್ತಂಗಡಿ : ಕೆಲವು ಸಮಯಗಳಿಂದ ಅಕ್ರಮವಾಗಿ ಗೋಡೌನ್ ನಲ್ಲಿ ಮದ್ಯವನ್ನು ದಾಸ್ತಾನು ಮಾಡಿಕೊಂಡಿರುವ ಬಗ್ಗೆ ಖಚಿತ ಮಾಹಿತಿಯ ಆಧಾರದಲ್ಲಿ ಮಂಗಳೂರು ಅಬಕಾರಿ ಡಿಸಿ ವಿಶೇಷ ಪತ್ತೆ ದಳ ಸಿಬ್ಬಂದಿ ದಾಳಿ ನಡೆಸಿ ಮದ್ಯ ಸಹಿತ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಮಿನಂದೆಲ್ ನಿವಾಸಿ ಶೀನ ಗೌಡ ಎಂಬವರ ಪುತ್ರ ದಯಾನಂದ ಗೌಡ (47) ಬಂಧಿತ ಆರೋಪಿ.ಬೆಳಾಲು ಗ್ರಾಮದ ಮಿನಂದೆಲ್ ಮನೆಯ ಸಮೀಪದ ಬಾನಿ ಮೆನ್ಸ್ ಪಾರ್ಲರ್ ನ ಹಿಂಭಾಗದ ಗೋಡೌನ್ ನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಬಾರ್ ಅಥವಾ ವೈನ್ ಶಾಪ್ ನಿಂದ ಖರೀದಿಸಿ ಅಕ್ರಮವಾಗಿ ಮದ್ಯವನ್ನು ಶೇಖರಿಸಿಟ್ಟದ್ದ ಬಗ್ಗೆ ಮಂಗಳೂರು ಅಬಕಾರಿ ಡಿಸಿ ವಿಶೇಷ ಪತ್ತೆ ದಳಕ್ಕೆ ಬಂದ ಖಚಿತ ಮಾಹಿತಿ ಸಿಕ್ಕಿತ್ತು.
ಮಂಗಳೂರು ಅಬಕಾರಿ ಡಿಸಿ ವಿಶೇಷ ಪತ್ತೆ ದಳ ಮಾ. 21ರಂದು ಸಂಜೆ 6 ಗಂಟೆಗೆ ದಾಳಿ ನಡೆಸಿದ್ದು ಆರೋಪಿಯಿಂದ 67.950 ಲೀಟರ್ ಮತ್ತು ಬಿಯರ್ 68.680 ಲೀಟರ್ ವಶಕ್ಕೆ ಪಡೆದುಕೊಂಡಿದ್ದಾರೆ.
ವಶಪಡಿಸಿಕೊಂಡ ಅಕ್ರಮ ಮದ್ಯದ ಮೌಲ್ಯ ಸುಮಾರು 45,000 ರೂಪಾಯಿ ಆಗಿದೆ. ಆರೋಪಿ ವಿರುದ್ಧ ಬೆಳ್ತಂಗಡಿ ಅಬಕಾರಿ ದಳದಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಮಂಗಳೂರು ಅಬಕಾರಿ ಡಿಸಿ ವಿಶೇಷ ಪತ್ತೆ ದಳದ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ಪಾಲ್ಗೊಂಡರು.














Post Comment