ತುಮಕೂರು ತ್ರಿವಳಿ ಕೊಲೆ: ಕೊನೆಗೂ ಊರು ಸೇರಿದ್ದು  ಕರಟಿದ ಮೃತದೇಹಗಳ ಅವಶೇಷಗಳು

ತುಮಕೂರು ತ್ರಿವಳಿ ಕೊಲೆ: ಕೊನೆಗೂ ಊರು ಸೇರಿದ್ದು  ಕರಟಿದ ಮೃತದೇಹಗಳ ಅವಶೇಷಗಳು

Share
IMG-20240329-WA0031-1-1024x576 ತುಮಕೂರು ತ್ರಿವಳಿ ಕೊಲೆ: ಕೊನೆಗೂ ಊರು ಸೇರಿದ್ದು  ಕರಟಿದ ಮೃತದೇಹಗಳ ಅವಶೇಷಗಳು

ಬೆಳ್ತಂಗಡಿ : ಪಾತಕಿಗಳ ಮೋಸದ ಜಾಲ ನಂಬಿ ನಿಧಿ ಆಸೆಯಿಂದ ತುಮಕೂರಿನ ಕುಚ್ಚಂಗಿ ಕೆರೆಯ ಬಳಿ ಭೀಕರವಾಗಿ ಕೊಲೆಯಾಗಿ ಸುಟ್ಟು ಕರಕಲಾದ ಬೆಳ್ತಂಗಡಿ ತಾಲೂಕಿನ ಮೂವರ ಮೃತದೇಹದ ಅವಶೇಷಗಳ ವಾರದ ಬಳಿಕ ಶುಕ್ರವಾರ ಊರಿಗೆ ತಲುಪಿದೆ. 

ಮಾ.22 ರಂದು ಬೆಳ್ತಂಗಡಿಯ ಮೂವರನ್ನು  ನಿಧಿ ಆಸೆ ಹುಟ್ಟಿಸಿ ತುಮಕೂರಿಗೆ ಕರೆಸಿಕೊಂಡು ಲಕ್ಷಾಂತರ ರೂಪಾಯಿ ವಸೂಲಿ ಮಾಡಿಕೊಂಡು ಭೀಕರವಾಗಿ ಕೊಲೆಗೈದು ಕಾರು ಸಹಿತ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿತ್ತು. 

ಮೂವರನ್ನು ಕೊಲೆಗೈದು ಕಾರಿನಲ್ಲಿ ಸುಟ್ಟ ಪರಿಣಾಮ ದೇಹಗಳನ್ನು ಗುರುತು ಪತ್ತೆ ಹಚ್ಚಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಡಿಎನ್‌ಎ ಪರೀಕ್ಷೆ ಬಳಿಕ ಇದೀಗ ಮೂವರ ಮೃತದೇಹಗಳು 7 ದಿನಗಳ ಬಳಿಕ ಬೆಳ್ತಂಗಡಿಗೆ ತಲುಪಿದೆ. 

ಮಾ.29 ರಂದು ಶುಕ್ರವಾರ ಬೆಳಗ್ಗೆ ಉಜಿರೆಗೆ ತಲುಪಿದ ಮೃತದೇಹವನ್ನು ಅವರವರ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ. ಮೃತರ ಪೈಕಿ ಶಾಹುಲ್ ಹಮೀದ್ ಮತ್ತು ಇಸಾಕ್ ರವರ ಮೃತದೇಹ ಮೊಯ್ಯುದ್ದಿನ್ ಜುಮಾ ಮಸೀದಿ ಹಳೆಪೇಟೆಗೆ ಹಾಗೂ ಸಿದ್ದೀಕ್ ರವರ ಮೃತದೇಹ ಶಿರ್ಲಾಲು ಮಸೀದಿಗೆ ತಲುಪಿದೆ. ಆಯಾ ಮಸೀದಿಗಳಲ್ಲಿ ಧರ್ಮಗುರುಗಳಿಂದ ಮುಸ್ಲೀಮ್ ವಿಧಿವಿಧಾನಗಳನ್ನುನೆರವೇರಿಸಲಾಗಿದೆ.

Post Comment

ಟ್ರೆಂಡಿಂಗ್‌