ಕಡಬ : ತಮಿಳುನಾಡು ಮೂಲದ ಕಾರ್ಮಿಕ ಮಲಗಿದಲ್ಲೇ ಸಾವು
ಕಡಬ : ಬಾಡಿಗೆ ಮನೆಯಲ್ಲಿ ವಾಸವಿದ್ದ ತಮಿಳುನಾಡಿನ ಮೂಲದ ಕೂಲಿ ಕಾರ್ಮಿರೊಬ್ಬರು ರಾತ್ರಿ ಮಲಗಿದ್ದು ಬೆಳಿಗ್ಗೆ ಎದ್ದೇಳದೆ ಮಲಗಿದಲ್ಲೇ ಮೃತಪಟ್ಟ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ನೂಜಿಬಾಳ್ತಿಲ ಗ್ರಾಮದಲ್ಲಿ ನಡೆದಿದೆ.
ಕಡಬ ತಾಲೂಕು ನೂಜಿಬಾಳ್ತಿಲಾ ಗ್ರಾಮದ ಕಣ್ವರೆ ಎಂಬಲ್ಲಿನ ನಿವಾಸಿ ಚೆನ್ನಪ್ಪಗೌಡ ಎಂಬವರ ಮಾಲಕತ್ವದ ಬಾಡಿಗೆ ಮನೆಯಲ್ಲಿ ವಾಸವಿದ್ದ ತಮಿಳುನಾಡು ಮೂಲದ ಸುಜಿನ್ ಅಲ್ಭನ್ ಎಂಬಾತ ಹಿಂದಿನ ದಿನ ರಾತ್ರಿ ಎಂದಿನಂತೆ ಮಲಗಿದ್ದವನು ಬೆಳಿಗ್ಗೆ ನೋಡಿದಾಗ ಮಲಗಿದಲ್ಲೇ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.
ಚೆನ್ನಪ್ಪಗೌಡ ಎಂಬವರು ತಮಿಳುನಾಡಿನ ವಿಜಿನ್ .ವಿ. ಎಂಬಾತನಿಗೆ ತಮ್ಮ ಬಾಡಿಗೆ ಮನೆಯನ್ನು ನೀಡಿದ್ದು ವಿಜಿನ್ ಜೇನುಸಾಕಣೆಯ ಕೆಲಸಕ್ಕಾಗಿ ತಮಿಳುನಾಡಿನಿಂದ ಅಭಿನೇಷ್, ವಿನ್ನರ್.ಎ ಹಾಗೂ ಸುಜಿನ್ ಅಲ್ಭನ್ ಎಂಬವರುಗಳನ್ನು ಕರೆತಂದು ಇದೇ ಬಾಡಿಗೆ ಮನೆಯಲ್ಲಿ ವಾಸವಿದ್ದು ಕೆಲಸ ಮಾಡಿಕೊಂಡಿದ್ದರು.ಮಾ27ನೇ ಬುಧವಾರ ರಂದು ಪಿರ್ಯದುದಾರರ ಬಾಡಿಗೆ ಮನೆಯಲ್ಲಿ ವಾಸವಿದ್ದವರ ಪೈಕಿ ಸುಜಿನ್ ಅಲ್ಭನ್ ಎಂಬಾತನು ಹಿಂದಿನ ದಿನ ರಾತ್ರಿ ಮಲಗಿಕೊಂಡಿದ್ದವನು ಬೆಳಿಗ್ಗೆ ನೋಡಿದಾಗ ಮೃತಪಟ್ಟಿರುವುದಾಗಿ ಆತನೊಂದಿಗಿದ್ದವರು ತಿಳಿಸಿರುತ್ತಾರೆ.
ಆದರೆ ಮೃತನ ಮರಣಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಚೆನ್ನಪ್ಪ ಗೌಡ ಅವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ- 09/2024 ಕಲಂ:174 (3),(iv) CrPC ರಂತೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಯುತ್ತಿದೆ.
Post Comment