ಸೌಜನ್ಯ ಹೆತ್ತವರನ್ನು ಭೇಟಿಯಾದ ಬಿ.ಎಸ್.ಪಿ. ಅಭ್ಯರ್ಥಿ ಸಹಿತ ನಿಯೋಗ: ಸತ್ಯ,ನ್ಯಾಯ ಪರ ಹೋರಾಟದಲ್ಲಿ ನಾವಿದ್ದೇವೆ-ಕಾಂತಪ್ಪ ಆಲಂಗಾರ್  

ಸೌಜನ್ಯ ಹೆತ್ತವರನ್ನು ಭೇಟಿಯಾದ ಬಿ.ಎಸ್.ಪಿ. ಅಭ್ಯರ್ಥಿ ಸಹಿತ ನಿಯೋಗ: ಸತ್ಯ,ನ್ಯಾಯ ಪರ ಹೋರಾಟದಲ್ಲಿ ನಾವಿದ್ದೇವೆ-ಕಾಂತಪ್ಪ ಆಲಂಗಾರ್  

Share

ಬೆಳ್ತಂಗಡಿ : ಮಂಗಳೂರು ಲೋಕಸಭಾ ಕ್ಷೇತ್ರದ ಬಹುಜನ ಸಮಾಜ ಪಕ್ಷ (ಬಿ.ಎಸ್ ಪಿ)ದ ಘೋಷಿತ  ಅಭ್ಯರ್ಥಿ ಕಾಂತಪ್ಪ ಆಲಂಗಾರ್ ಸಹಿತ ಪಕ್ಷದ ಮುಖಂಡರ ನಿಯೋಗವು ಧರ್ಮಸ್ಥಳದ  ಪಾಂಗಾಳ  ‘ಸೌಜನ್ಯ ನಿಲಯ’ ಕ್ಕೆ  ಶನಿವಾರ ಭೇಟಿ ನೀಡಿ ಸೌಜನ್ಯ ಹೆತ್ತವರನ್ನು ಮಾತನಾಡಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದೆ.

ಮಂಗಳೂರು ಲೋಕಸಭಾ ಕ್ಷೇತ್ರದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಕಾಂತಪ್ಪ ಆಲಂಗಾರು ಸೌಜನ್ಯ ತಾಯಿ ಕುಸುಮಾವತಿ ಅವರನ್ನು ಭೇಟಿ ಮಾಡಿ ಸೌಜನ್ಯ ಪ್ರಕರಣದ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭ ಕುಸುಮಾವತಿ ಅವರ ಜೊತೆ ಮಾತನಾಡಿದ ಕಾಂತಪ್ಪ ಆಲಂಗಾರು, “ನಮ್ಮ ಮುಖಂಡರು, ಕಾರ್ಯಕರ್ತರು ಪ್ರಾರಂಭದಿಂದಲೂ  ದ.ಕ. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೌಜನ್ಯಪರ ಹೋರಾಟಗಳಲ್ಲಿ ಭಾಗಿಯಾಗುತ್ತಿದ್ದಾರೆ.ನಮ್ಮ ಪಕ್ಷ ಇದುವರೆಗೂ ನ್ಯಾಯದ ಪರವಾಗಿ ನಿಂತಿದ್ದು ಮುಂದೆಯೂ ನ್ಯಾಯ ಸಿಗುವವರೆಗೂ ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲುತ್ತೇವೆ ತನಿಖೆಗೆ ನಾವೂ ಒತ್ತಾಯಿಸುತ್ತೇವೆ,

ಸೌಜನ್ಯ ಅತ್ಯಾಚಾರ -ಕೊಲೆ ಪ್ರಕರಣದಲ್ಲಿ ಪ್ರಾರಂಭದಿಂದಲೂ ಸತ್ಯ ಮತ್ತು ನ್ಯಾಯದ ಹೋರಾಟದ ಪರ ಕೊನೆವರೆಗೂ ‌ಪಕ್ಷ  ಇರಲಿದೆ’’ ಎಂದು  ಭರವಸೆ ನೀಡಿ ಧೈರ್ಯತುಂಬಿದರು. “ನಮ್ಮ ಪಕ್ಷದ ರಾಷ್ಟ್ರೀಯ ನಾಯಕಿ ಬೆಹನ್ ಜೀ ಮಾಯಾವತಿ ಮತ್ತು ಸಂಸದರನ್ನು ಭೇಟಿ ಮಾಡಿ ಲೋಕಸಭೆಯಲ್ಲಿ ಸೌಜನ್ಯ ಪ್ರಕರಣದ ಬಗ್ಗೆ  ಧ್ವನಿ ಎತ್ತಿ ಮರುತನಿಖೆಗೆ ಒತ್ತಾಯಿಸುವಂತೆ ಮನವೊಲಿಸುತ್ತೇವೆ’’ ಎಂಬುದಾಗಿ ಅಭ್ಯರ್ಥಿ ಕಾಂತಪ್ಪ ಆಲಂಗಾರ್ ಮತ್ತು ಪಕ್ಷದ ಮುಖಂಡರು ಭರವಸೆ ನೀಡಿದರು.

ಸೌಜನ್ಯ ಹೆತ್ತವರನ್ನು ಭೇಟಿ ಮಾಡಿದ ಬಿ.ಎಸ್. ಪಿ. ನಿಯೋಗದಲ್ಲಿ ಅಭ್ಯರ್ಥಿ ಕಾಂತಪ್ಪ ಆಲಂಗಾರ್ , ಜಿಲ್ಲಾಧ್ಯಕ್ಷ ಗೋಪಾಲ್ ಮುತ್ತೂರು, ಉಪಾಧ್ಯಕ್ಷ ಶಿವಪ್ಪ ಗರ್ಡಾಡಿ, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಶ್ರೀನಿವಾಸ್ ಪಿ.ಎಸ್., ಗಣೇಶ್ ಕಾಂಚನ ಇದ್ದರು.

Post Comment

ಟ್ರೆಂಡಿಂಗ್‌