ವೇಣೂರು : ಸೊಸೆ ಮನೆಯವರಿಂದ  ಹಲ್ಲೆ , ಜೀವಬೆದರಿಕೆ : ಗಾಯಗೊಂಡ ಮಾವ ಆಸ್ಪತ್ರೆಗೆ ದಾಖಲು

ವೇಣೂರು : ಸೊಸೆ ಮನೆಯವರಿಂದ  ಹಲ್ಲೆ , ಜೀವಬೆದರಿಕೆ : ಗಾಯಗೊಂಡ ಮಾವ ಆಸ್ಪತ್ರೆಗೆ ದಾಖಲು

Share
Screenshot_20240408_130008-4 ವೇಣೂರು : ಸೊಸೆ ಮನೆಯವರಿಂದ  ಹಲ್ಲೆ , ಜೀವಬೆದರಿಕೆ :                 ಗಾಯಗೊಂಡ ಮಾವ ಆಸ್ಪತ್ರೆಗೆ ದಾಖಲು

ಬೆಳ್ತಂಗಡಿ : ಒಂದು ತಿಂಗಳ ಹಿಂದೆ ಪತಿ ಮತ್ತು ಪತಿಯ ಮನೆಯವರೊಂದಿಗೆ ಗಲಾಟೆ ಮಾಡಿ  ಚಿಕ್ಕ ಮಗನನ್ನು ಕರೆದುಕೊಂಡು  ತವರು ಮನೆಗೆ ಹೋಗಿದ್ದ ಸೊಸೆ ಮತ್ತೆ ದೊಡ್ಡ ಮಗನನ್ನು ಕರೆದುಕೊಂಡು ಹೋಗಲು ಪತಿಯ ಮನೆಗೆ ಬಂದು ಪತಿಯ ಮನೆಯಲ್ಲಿ ಗಲಾಟೆ ಮಾಡಿ  ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಘಟನೆ ಮೂಡುಕೋಡಿ ಗ್ರಾಮದಲ್ಲಿ  ಸೋಮವಾರ ನಡೆದಿದೆ.

ಬೆಳ್ತಂಗಡಿ ತಾಲೂಕು ವೇಣೂರು ಸಮೀಪದ ಮೂಡುಕೋಡಿ ಗ್ರಾಮದ ನಿವಾಸಿ ವೆಂಕಟರಮಣ ಭಟ್ ಎಂಬವರೇ ಹಲ್ಲೆಗೊಳಗಾಗಿದ್ದು ಸೊಸೆ ಮೋಹನಾಕ್ಷಿ  ಹಾಗೂ ಆಕೆಯ ಸಹೋದರ ಹೇಮೇಶ ಎಂಬವರೇ ಮನೆಗೆ ಬಂದು ಅವಾಚ್ಯವಾಗಿ ಬೈಯ್ದು ಹಲ್ಲೆಗೈದು ಜೀವ ಬೆದರಿಕೆಯೊಡ್ಡಿದವರು.

 ಪ್ರಕರಣದ ಆರೋಪಿತೆಯಾದ  ಮೋಹನಾಕ್ಷಿ ಎಂಬವರು, ಸುಮಾರು ಒಂದು ತಿಂಗಳ ಹಿಂದೆ ತನ್ನ ಗಂಡ ಹಾಗೂ ಮನೆಯವರೊಂದಿಗೆ ಗಲಾಟೆ ನಡೆಸಿ ಸಣ್ಣ ಮಗನನ್ನು ಕರೆದುಕೊಂಡು ಆಕೆಯ ತವರು ಮನೆಗೆ ಹೋಗಿದ್ದು ಮೇ 07ರಂದು ಬೆಳಿಗ್ಗೆ, ತನ್ನ ದೊಡ್ಡ ಮಗನನ್ನು ಕರೆದುಕೊಂಡು ಹೋಗುವ ನೆಪದಲ್ಲಿ  ಸಹೋದರನೊಂದಿಗೆ ಮತ್ತೆ ಪತಿಯ ಮನೆಗೆ ಬಂದು ಗಲಾಟೆ ನಡೆಸಿ ಮಾವನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದು  ಹಲ್ಲೆಗೊಳಗಾದ ವೆಂಕಟರಮಣ ಭಟ್  ಈ ಬಗ್ಗೆ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸೊಸೆ ವಸಂತ ಯಾನೆ ಮೋಹನಾಕ್ಷಿ ಮತ್ತು ಆಕೆ ಸಹೋದರ ಹೇಮೇಶ ಎಂಬವರು ಮಗನನ್ನು ಕರೆದುಕೊಂಡು ಹೋಗಲು ತವರು ಮನೆಯಿಂದ ಪತಿಯ ಮನೆಗೆ ಬಂದಿದ್ದು  ಇದೇ ಸಂದರ್ಭ ಮಾವ ವೆಂಕಟರಮಣ ಭಟ್ ಅವರಲ್ಲಿ ಗಲಾಟೆ ಮಾಡಿ ಅವಾಚ್ಯವಾಗಿ ಬೈಯ್ದು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ.

 ಹಲ್ಲೆಯಿಂದ ಗಾಯಗೊಂಡ ವೆಂಕಟರಮಣ ಭಟ್  ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ  ದಾಖಲಾಗಿದ್ದಾರೆ. ಈ ಬಗ್ಗೆ  ವೇಣೂರು ಪೊಲೀಸ್  ಠಾಣೆಯಲ್ಲಿ  ಪ್ರಕರಣ ದಾಖಲಿಸಿಕೊಂಡಿದ್ದು  ತನಿಖೆ ನಡೆಸುತ್ತಿದ್ದಾರೆ.

Previous post

ವೇಣೂರು : ಸೊಸೆ ಮನೆಯವರಿಂದ  ಹಲ್ಲೆ , ಜೀವಬೆದರಿಕೆ : ಗಾಯಗೊಂಡ ಮಾವ ಆಸ್ಪತ್ರೆಗೆ ದಾಖಲು

Next post

ಮಾಜಿ ಶಾಸಕ, ಜನಪ್ರಿಯ ರಾಜಕಾರಣಿ ಕೆ.ವಸಂತ ಬಂಗೇರ ಆಸ್ಪತ್ರೆಯಲ್ಲಿ ನಿಧನ: ಬೆಳ್ತಂಗಡಿ ರಾಜಕೀಯದಲ್ಲಿ ಮುಗಿದು ಹೋದ ‘ವಸಂತ’ ಕಾಲ.!

Post Comment

ಟ್ರೆಂಡಿಂಗ್‌

error: Content is protected !!