ಕುಡಿದ ಮತ್ತಿನಲ್ಲಿ ಪಶುವೈದ್ಯನಿಂದ ಹಲ್ಲೆ : ಅಸ್ವಸ್ಥ ವ್ಯಕ್ತಿ ಸಾವು
ಬೆಳ್ತಂಗಡಿ : ಪಶು ವೈದ್ಯರೋರ್ವರು ಮದ್ಯಪಾನದ ಮತ್ತಿನಲ್ಲಿ ಹಲ್ಲೆ ನಡೆಸಿದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕೊಕ್ಕಡದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕು ಪಟ್ರಮೆ ಗ್ರಾಮದ ಮೈಕೆ ನಿವಾಸಿ ಕೃಷ್ಣಪ್ಪ ಯಾನೆ ಕಿಟ್ಟ(55ವ.) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕಿಟ್ಟ ಅವರು ಅನಾರೋಗ್ಯದಿಂದ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಸೋಮವಾರ ಕೊಕ್ಕಡಕ್ಕೆ ಬಂದಿದ್ದು ಕುಡಿದ ಮತ್ತಿನಲ್ಲಿದ್ದ ಕೊಕ್ಕಡ ನಿವಾಸಿ, ಪಶುವೈದ್ಯ ಕುಮಾರ್ ಎಂಬಾತ ಸಿಕ್ಕಿ ಏನೋ ಕ್ಷುಲ್ಲಕ ವಿಚಾರದಲ್ಲಿ ತಗಾದೆ ತೆಗೆದು ಕೈಯಿಂದ ಬಲವಾಗಿ ಹಲ್ಲೆ ನಡೆಸಿದ್ದು ಪರಿಣಾಮ ಕೃಷ್ಣಪ್ಪ ಯಾನೆ ಕಿಟ್ಟ ಸಾವನ್ನಪ್ಪಿರುವುದಾಗಿದೆ.
ಇನ್ನೊಂದೆಡೆ ಕೃಷ್ಣ ಅವರು ಅಸ್ವಸ್ಥಗೊಂಡು ಕುಸಿದು ಬಿದ್ದಿರುವುದೇ ಸಾವಿಗೆ ಕಾರಣವೆಂದು ವಾದಿಸಲಾಗಿದೆ. ಘಟನೆ ಬಗ್ಗೆ ಧರ್ಮಸ್ಥಳ ಠಾಣೆಗೆ ಮೃತರ ಪತ್ನಿ ಭಾರತಿ ನೀಡಿದ ದೂರಿನಂತೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಮುಂದಿನ ತನಿಖಗ ತನಿಖೆ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ಸ್ಥಳೀಯರಲ್ಲಿ ಸಂಶಯ , ಕುತೂಹಲ ಮೂಡಿದೆ.
Post Comment