ಚಿಕ್ಕಮಗಳೂರು ಶಿಕಾರಿ ಮಿಸ್ ಫೈರ್ ಗೆ ಯುವಕ ಬಲಿ! ಆಕಸ್ಮಿಕವೇ ? ಪೂರ್ವಯೋಜಿತ ಕೊಲೆಯೇ?

ಚಿಕ್ಕಮಗಳೂರು ಶಿಕಾರಿ ಮಿಸ್ ಫೈರ್ ಗೆ ಯುವಕ ಬಲಿ! ಆಕಸ್ಮಿಕವೇ ? ಪೂರ್ವಯೋಜಿತ ಕೊಲೆಯೇ?

Share
IMG-20240517-WA0002-1-1024x768 ಚಿಕ್ಕಮಗಳೂರು ಶಿಕಾರಿ ಮಿಸ್ ಫೈರ್ ಗೆ ಯುವಕ ಬಲಿ!                                          ಆಕಸ್ಮಿಕವೇ ? ಪೂರ್ವಯೋಜಿತ ಕೊಲೆಯೇ?

ಚಿಕ್ಕಮಗಳೂರು : ಶಿಕಾರಿಗೆ ತೆರಳಿದ್ದ ಯುವಕನೋರ್ವ ಬೇಟೆಗಾರನ ಮಿಸ್ ಫೈರ್ ಗೆ ಸ್ಥಳದಲ್ಲೇ ಬಲಿಯಾದ ಘಟನೆ  ಚಿಕ್ಕಮಗಳೂರು ಸಮೀಪದ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚಿಕ್ಕಮಗಳೂರು ಬಳಿಯ ಕೆರೆಮಕ್ಕಿ ಗ್ರಾಮದ ನಿವಾಸಿ ದಿ. ಜೂಲೇಗೌಡರ ಮಗ ಸಂಜು (33) ಎಂಬಾತನೇ ಎದೆ ಭಾಗಕ್ಕೆ ಕೋವಿಯ ಗುಂಡು ತಗುಲಿ ಸಾವಿಗೀಡಾದ ಯುವಕ. ಅವಿವಾಹಿತ ಯುವಕ ಸಂಜು ಮೃತದೇಹ ಉಳುವಾಗಿಲು ಸಮೀಪ ಮುಖ್ಯರಸ್ತೆಯಲ್ಲಿ ಪತ್ತೆಯಾಗುವ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರಿನ  ಉಳುವಾಗಿಲು ಗ್ರಾಮದಲ್ಲಿಗುರುವಾರ  ರಾತ್ರಿ ಶಿಕಾರಿ ಫೈರ್ ಎಡವಟ್ಟು ನಡೆದಿದೆ. ಗುರುವಾರ  ರಾತ್ರಿ ಮೂವರು ಯುವಕರು ಶಿಕಾರಿಗೆ ತೆರಳಿದ್ದ ವೇಳೆ ಈ ಅವಘಡ ನಡೆದಿದೆ ಎಂದು ತಿಳಿದು ಬಂದಿದೆ.ಮೃತದೇಹದ ಸಮೀಪ ತೋಟದ ಬೇಲಿಯಲ್ಲಿ ತೋಟೆ ಕೋವಿಯೊಂದು ಪತ್ತೆಯಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ.  ಮೇಲ್ನೋಟಕ್ಕೆ ಶಿಕಾರಿಗೆ ತೆರಳಿದ ಸಂದರ್ಭದಲ್ಲಿ  ಪ್ರಾಣಿಗೆ ಹೊಡೆದ ಗುಂಡು ಯುವಕನ ಎದೆಗೆ ಬಿದ್ದು ಸಾವಿಗೆ ಕಾರಣವಾಯಿತೇ ಎಂಬ ಪ್ರಶ್ನೆಯೂ ಮೂಡಿದೆ. ದುರಂತ ನಡೆದಿರಬಹುದೆಂದು ಶಂಕಿಸಲಾಗಿದ್ದರೂ  

ಯುವಕನ ಬಲಿ ಪಡೆದ ಗುಂಡೇಟು ಯುವಕನಿಗೆ ಆಕಸ್ಮಿಕವಾಗಿ ತಗುಲಿತೇ  ಬೇಟೆಗೆ ಹೋದ ಯುವಕರು ಕುಡಿದ ಮತ್ತಿನಲ್ಲಿ ಫೈರ್ ಮಾಡಿ ಯುವಕನ ಸಾವಿಗೆ ಕಾರಣವಾಯಿತೇ? ಅಥವಾ ಇದೊಂದು ಶಿಕಾರಿ ನೆಪದ ಪೂರ್ವಯೋಜಿತ ಕೊಲೆಯೇ ಎಂಬ ಸಂಶಯ, ಕುತೂಹಲವೂ ಸ್ಥಳೀಯರಲ್ಲಿ ಬಲವಾಗಿ ಮೂಡಲು ಕಾರಣವಾಗಿದೆ. ಈ ಬಗ್ಗೆ ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Previous post

ಕೊಕ್ಕಡ: ಹಲ್ಲೆಯಿಂದ ವ್ಯಕ್ತಿ ಮೃತಪಟ್ಟ ಪ್ರಕರಣ- ಆರೋಪಿ ಪಶು ವೈದ್ಯಕೀಯ  ಪರೀಕ್ಷಕನಿಗೆ ನ್ಯಾಯಾಂಗ ಬಂಧನ

Next post

ಕಳೆಂಜ: ನಂದಗೋಕುಲ ಗೋಶಾಲೆಯಲ್ಲಿ ಮೇ 26ರಂದು  ‘ನಂದಗೋಕುಲ ದೀಪೋತ್ಸವ’ “ಪುಣ್ಯಕೋಟಿಗೆ ಒಂದುಕೋಟಿ, ಗೋಮಾತೆಗೆ ಕೋಟಿಯ ನಮನ” ವಿಶಿಷ್ಟ ಕಾರ್ಯಕ್ರಮ

Post Comment

ಟ್ರೆಂಡಿಂಗ್‌