ವಸಂತ ಬಂಗೇರ ಐದು ಭಾರಿ ಶಾಸಕರಾಗಿದ್ದರೂ ಮಂತ್ರಿಗಿರಿಗಾಗಿ ಲಾಬಿ ಮಾಡಿದವರಲ್ಲ : ಸೀಎಂ ಸಿದ್ದರಾಮಯ್ಯ

ವಸಂತ ಬಂಗೇರ ಐದು ಭಾರಿ ಶಾಸಕರಾಗಿದ್ದರೂ ಮಂತ್ರಿಗಿರಿಗಾಗಿ ಲಾಬಿ ಮಾಡಿದವರಲ್ಲ : ಸೀಎಂ ಸಿದ್ದರಾಮಯ್ಯ

Share
IMG-20240521-WA0155-1 ವಸಂತ ಬಂಗೇರ ಐದು ಭಾರಿ ಶಾಸಕರಾಗಿದ್ದರೂ ಮಂತ್ರಿಗಿರಿಗಾಗಿ ಲಾಬಿ ಮಾಡಿದವರಲ್ಲ : ಸೀಎಂ ಸಿದ್ದರಾಮಯ್ಯ

ಬೆಳ್ತಂಗಡಿ ನೂತನ ‘ಕೆ.ಎಸ್.ಆರ್.ಟಿ.ಸಿ  ಬಸ್ ನಿಲ್ದಾಣ ಮತ್ತು ಒಂದು ವೃತ್ತಕ್ಕೆ ದಿ.ಕೆ. ವಸಂತ ಬಂಗೇರ  ಹೆಸರು ಘೋಷಿಸಿದ ಸೀಎಂ

ಬೆಳ್ತಂಗಡಿ :  ಮೊದಲ ಭಾರಿ ಶಾಸಕರಾದರೂ ಕೆಲವರು ಮಂತ್ರಿಗಿರಿ ಕೇಳಿ ಲಾಬಿ ಮಾಡುತ್ತಾರೆ ಆದರೆಐದು ಭಾರಿ ಶಾಸಕರಾಗಿದ್ದರೂ ಮಂತ್ರಿ ಮಾಡುವಂತೆ  ಎಂದೂ ಲಾಬಿ ಮಾಡಿದವರಲ್ಲ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರೆ ಅವರು ಮಂತ್ರಿಯಾಗುತ್ತಿದ್ದರು ಎಂದು ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅವರು ಗುರುವಾಯನಕೆರೆ ಮಂಜಿಬೆಟ್ಟು ಎಫ್.ಎಮ್ ಗಾರ್ಡನ್ ಸಭಾಭವನದಲ್ಲಿ ನಡೆದಮಾಜಿ ಶಾಸಕ ದಿ.ಕೆ. ವಸಂತ ಬಂಗೇರ ಅವರ ಉತ್ತರಕ್ರಿಯೆಯಲ್ಲಿ ನುಡಿನಮನ  ಕಾರ್ಯಕ್ರಮದಲ್ಲಿ ಮಂಗಳವಾರ ಭಾಗವಹಿಸಿದರು.ವಸಂತ ಬಂಗೇರ ವೈಯ್ಯಕ್ತಿಕ ಕೆಲಸಕ್ಕಾಗಿ ಯಾವತ್ತೂ ಬಂದವರಲ್ಲ, ಸತ್ಯದಪರ, ಬಡವರಪರ ನಿಷ್ಠುರ , ನೇರ ನುಡಿಯ ವ್ಯಕ್ತಿತ್ವ ಹೊಂದಿದ್ದವರು.ಯಾವ ಸತ್ಯವನ್ನು  ಹೇಳಲೂ ಹಿಂಜರಿಯುತ್ತಿರಲಿಲ್ಲ,  ಯಾವುದೇ ಸಂದರ್ಭ, ಸನ್ನಿವೇಶ ಇರಲಿ ಸತ್ಯವನ್ನು ನೇರವಾಗಿ ಹೇಳುವ ವಿಶೇಷ ಗುಣ ಹೊಂದಿದ್ದವರು ಎಂದ ಸೀಎಂ ಸಿದ್ದರಾಮಯ್ಯ  ವಸಂತ ಬಂಗೇರ  ನಮ್ಮನ್ನು ಇಷ್ಟು ಬೇಗ ಅಗಲುವರು  ಅಂದು ಕೊಂಡಿರಲಿಲ್ಲ. ಅತ್ಯಂತ ದುಃಖದಿಂದ  ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. 

ನಾನು ಪಕ್ಷೇತರನಾಗಿ ಮೊದಲ ಭಾರಿ ವಿಧಾನಸಭೆ ಪ್ರವೇಶಿಸಿದ್ದೆ ಅಂದಿನಿಂದ ಶುರುವಾದ  ನಮ್ಮಿಬ್ಬರ ಧೀರ್ಘಕಾಲದ ಸ್ನೇಹ ಕೊನೆವರೆಗೂ ಇತ್ತು. ಒಬ್ಬ ಪ್ರೀತಿಯ ಸ್ನೇಹಿತನನ್ನು ನಾನು ಕಳೆದುಕೊಂಡಿದ್ದೇನೆ ಎಂದು ವಿಷಾದಿಸಿ ಕುಟುಂಬಸ್ಥರಿಗೆ, ಅಭಿಮಾನಿಗಳಿಗೆ ದುಃಖವನ್ನು ತಡೆಯುವ ಶಕ್ತಿ ದೇವರು ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. ವಸಂತ ಬಂಗೇರ ಅವರ ಅಭಿಮಾನಿಗಳು ನೀಡಿದ ಮನವಿಗೆ ಸ್ಪಂದಿಸಿದ ಸೀಎಂ   ಸಿದ್ದರಾಮಯ್ಯ ಅವರು ಬೆಳ್ತಂಗಡಿಯ ನೂತನ ‘ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಮತ್ತು ಒಂದು ವೃತ್ತಕ್ಕೆ ದಿ.ಕೆ. ವಸಂತ ಬಂಗೇರ ಅವರ ಹೆಸರಿಡುವುದು, ಜೊತೆಗೆ ಅವರ ಪ್ರತಿಮೆ ನಿರ್ಮಿಸುವುದು  ಇದೆಲ್ಲವನ್ನು ಸರಕಾರದಿಂದ ಮಾಡಿಕೊಡಲಾಗುವುದು ಎಂದು ಘೋಷಿಸಿದರು.

Previous post

ಬಂಧಿತ ಗಣಿದಂಧೆಕೋರನ ಬಂಧನ ವಿರೋಧಿಸಿ ಪೊಲೀಸ್ ಠಾಣೆಯೊಳಗೆ ಪ್ರತಿಭಟನೆ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಕೇಸು ದಾಖಲು 

Next post

ಬಣಕಲ್ ಬಳಿ ಭೀಕರ ಅಪಘಾತ: ಧರ್ಮಸ್ಥಳ ಯಾತ್ರೆ ಮುಗಿಸಿ ವಾಪಾಸಾಗುತ್ತಿದ್ದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು

Post Comment

ಟ್ರೆಂಡಿಂಗ್‌

error: Content is protected !!