ನವವಿವಾಹಿತ ಕೆರೆಗೆ ಜಾರಿ ಬಿದ್ದು ಸಾವು

ಬೆಳ್ತಂಗಡಿ : ನವ ವಿವಾಹಿತನೊಬ್ಬ ಮನೆಯ ಕೆರೆಗೆ ಆಕಸ್ಮಿಕವಾಗಿ ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ ಗರ್ಡಾಡಿ ಗ್ರಾಮದ ನಂದಿಬೆಟ್ಟದಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನಂದಿಬೆಟ್ಟದ ಹೊಸಹೊಕ್ಕು ನಿವಾಸಿ ಸದಾಶಿವ ಶೆಟ್ಟಿ ಎಂಬವರ ಮಗ ಆರು ತಿಂಗಳ ಹಿಂದೆಯಷ್ಟೆ ವಿವಾಹವಾಗಿದ್ದ ಕೃಷಿ ಕೆಲಸ ಮಾಡಿಕೊಂಡಿರುವ ಶೈಲೇಶ್ ಶೆಟ್ಟಿ (38) ಎಂಬವರು ತನ್ನ ಮನೆಯ ಕೆರೆಗೆ ಶನಿವಾರ ರಾತ್ರಿ ಸುಮಾರು 8:30 ಕ್ಕೆ ಜಾರಿ ಬಿದ್ದು ಕೆಸರಿನಲ್ಲಿ ಸಿಲುಕಿ ಮುಳುಗಿ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಧಾವಿಸಿ ಶವವನ್ನು ಮೇಲಕ್ಕೆತ್ತಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಬೆಳ್ತಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತನಿಖೆ ತಿಳಿಯಬೇಕಾಗಿದೆ.
Post Comment