2020ರ ಕಲ್ಮಂಜ ದರೋಡೆ ಪ್ರಕರಣ ಭೇದಿಸಿದ ಧರ್ಮಸ್ಥಳ ಪೊಲೀಸರು: ದರೋಡೆಗೈದ ಚಿನ್ನಾಭರಣ ಮಾರಲು ಹೋಗಿ ಸಿಕ್ಕಿಬಿದ್ದ  ಆರೋಪಿಗಳು 

2020ರ ಕಲ್ಮಂಜ ದರೋಡೆ ಪ್ರಕರಣ ಭೇದಿಸಿದ ಧರ್ಮಸ್ಥಳ ಪೊಲೀಸರು: ದರೋಡೆಗೈದ ಚಿನ್ನಾಭರಣ ಮಾರಲು ಹೋಗಿ ಸಿಕ್ಕಿಬಿದ್ದ  ಆರೋಪಿಗಳು 

Share
IMG-20240528-WA0000-1-1024x562 2020ರ ಕಲ್ಮಂಜ ದರೋಡೆ ಪ್ರಕರಣ ಭೇದಿಸಿದ ಧರ್ಮಸ್ಥಳ ಪೊಲೀಸರು: ದರೋಡೆಗೈದ ಚಿನ್ನಾಭರಣ ಮಾರಲು ಹೋಗಿ ಸಿಕ್ಕಿಬಿದ್ದ  ಆರೋಪಿಗಳು 

ಬೆಳ್ತಂಗಡಿ : 2020ರಲ್ಲಿ ಅಂದರೆ ನಾಲ್ಕು ವರ್ಷಗಳ ಹಿಂದೆ ಕಲ್ಮಂಜ ಗ್ರಾಮದ ಮಿಯಾ ನಿವಾಸಿ ಉಜಿರೆಯ ಅಡಿಕೆ ವ್ಯಾಪಾರಿ ಅಚ್ಚುತ ಭಟ್ ಎಂಬವರ ಮನೆಗೆ ನುಗ್ಗಿ ನಡೆದ ದರೋಡೆ ಪ್ರಕರಣವನ್ನು ಭೇದಿಸಿದ ಧರ್ಮಸ್ಥಳ ಪೊಲೀಸರು  ಇಬ್ಬರು ಸಹೋದರರು ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಮಿಯಾ ನಿವಾಸಿ ಉಜಿರೆಯ ಅಡಿಕೆ ವ್ಯಾಪಾರಿ ಅಚ್ಚುತ ಭಟ್ ಎಂಬವರ ಮನೆಗೆ ನುಗ್ಗಿ ಮನೆಯವರನ್ನು ಕಟ್ಟಿಹಾಕಿ ರೂ 8,42,240 ರೂಪಾಯಿ ಚಿನ್ನಾಭರಣ ಹಾಗೂ ಹಣವನ್ನು ದರೋಡೆ ಮಾಡಿದ್ದು ಮೂರು ಮಂದಿ ದರೋಡೆಕೋರರನ್ನು ನಾಲ್ಕು ವರ್ಷದ ಸತತ ಹುಡುಕಾಟದ ನಂತರ ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ ಎಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ದ.ಕ ಜಿಲ್ಲಾ ಎಸ್.ಪಿ ರಿಷ್ಯಂತ್ ತಿಳಿಸಿದ್ದಾರೆ.

ಬೆಳ್ತಂಗಡಿ ತಾಲೂಕು, ಕಲ್ಮಂಜ ಗ್ರಾಮದ ಮಿಯಾ ಎಂಬಲ್ಲಿ ದರೋಡೆ ಮಾಡಿ ಚಿನ್ನಾಭರಣ ಹಾಗೂ ಹಣವನ್ನು ತೆಗೆದುಕೊಂಡು ಹೋಗಿರುವ ವಿಚಾರವನ್ನು ಮೇ 22 2024 ರಂದು ಆರೋಪಿತರು ತನ್ನ ಸ್ವ ಇಚ್ಚಾ ಹೇಳಿಕೆಯ ಸಮಯ ಒಪ್ಪಿಕೊಂಡಿರುತ್ತಾರೆ.  ಅದರಂತೆ ಈ ಪ್ರಕರಣದಲ್ಲಿ  ಒಟ್ಟು 104 ಗ್ರಾಂ ಬಂಗಾರದ ಆಭರಣಗಳ ಅದರ ಅಂದಾಜು ಮೌಲ್ಯ ಸುಮಾರು  7,87,000 ರೂ/-  ಆಗಬಹುದು ,288 ಗ್ರಾಂ ಬೆಳ್ಳಿ  ಅದರ ಅಂದಾಜು ಮೌಲ್ಯ ಸುಮಾರು  30,240 ರೂ/- ಆಗಬಹುದು , ಟಿವಿಎಸ್‌ ಕಂಪೆನಿಯ ಅಪಾಚೆ ಮೋಟರ ಬೈಕ್‌ -1 ಅದರ ಅಂದಾಜು ಮೌಲ್ಯ ಸುಮಾರು  25,000/- ಆಗಬಹುದು ಒಟ್ಟು ಮೌಲ್ಯ 8,42,240/- ಆಗಬಹುದು ಹಾಗೂ ವಶಪಡಿಸಿಕೊಂಡು ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತೇವೆ ಎಂದರು.

2020ರ ಜೂ26ರಂದು ಬೆಳಿಗ್ಗೆ 8.15 ಗಂಟೆಗೆ ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ ಮಿಯಾ ನಿವಾಸಿ ದೂರುದಾರರಾದ ಅಚ್ಯುತ್ ಭಟ್ (56) ಎಂಬವರು ಧರ್ಮಸ್ಥಳ ಪೊಲೀಸ್‌ ಠಾಣೆಗೆ ನೀಡಿದ ಲಿಖಿತ ದೂರಿನಂತೆ, ಅಡಿಕೆ ವ್ಯಾಪಾರಿ,  ಕೃಷಿಕರೂ ಆಗಿರುವ  ಅಚ್ಯುತ್ ಭಟ್ ಮನೆಯಲ್ಲಿ ಜೂ26 2020ರಂದು ಬೆಳಗ್ಗಿನ ಜಾವ ಸುಮಾರು 02.50 ಗಂಟೆಗೆ ನಾಯಿ ಬೊಗಳುವ ಶಬ್ದ ಕೇಳಿ ಎಚ್ಚರಗೊಂಡು ಮನೆಯ ಬಾಗಿಲು ತೆರೆದು ಹೊರಗೆ ಬಂದಾಗ ಇಬ್ಬರು ಸುತ್ತುವರಿದು  ಬಲವಾಗಿ ಹಿಡಿದುಕೊಂಡು ಕುತ್ತಿಗೆಯನ್ನು ಅದುಮಿದರು.

 ಅದೇ ಸಮಯ  ಬೊಬ್ಬೆ ಹಾಕಿದಾಗ ಅಚ್ಯುತ್ ಭಟ್ ಅವರ ತಮ್ಮನ ಹೆಂಡತಿ ವಿದ್ಯಾಕುಮಾರಿ ಮನೆಯ ಇನ್ನೊಂದು ಬದಿಯಲ್ಲಿದ್ದ ಬಾಗಿಲು ತೆರೆದಾಗ ಅಲ್ಲಿಂದ ಇಬ್ಬರು ಒಳ ನುಗ್ಗಿದರು. ಇದೇ  ಸಮಯ ಮನೆಯಲ್ಲಿದ್ದ  ಅಚ್ಯುತ್ ಭಟ್ ಅವರ ತಾಯಿಯೂ ಎಚ್ಚರಗೊಂಡರು. ಆಗ ಮನೆಗೆ ಬಂದವರುಎಲ್ಲರೂ ಸೇರಿ ಅಚ್ಯುತ್ ಭಟ್ ಹಾಗೂ ಅವರ ತಾಯಿ ಮತ್ತು ತಮ್ಮನ ಹೆಂಡತಿಯನ್ನು ಎಳೆದುಕೊಂಡು ಬಂದು ಮನೆಯ ಚಾವಡಿಯಲ್ಲಿ ಕೂಡಿ ಹಾಕಿ ದೂಡಿ ಬಟ್ಟೆಯಿಂದ ಕೈಕಾಲು ಕಟ್ಟಿ ಹಾಕಿ ಕೈಯಿಂದ ಹಲ್ಲೆಗೈದು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ನೀಡುವಂತೆ ಗದರಿಸಿ ನಗದು ರೂ 25,000 ರೂಪಾಯಿಯನ್ನು ತೆಗೆದುಕೊಂಡರು. ಬಳಿಕ  30 ರಿಂದ 35 ಪವನ್ ತೂಕದ ಚಿನ್ನದ ಒಡವೆ ಹಾಗೂ ಸುಮಾರು 1 ಕೆ ಜಿ ತೂಕದ ಬೆಳ್ಳಿ ಒಡವೆಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದು  ಸುಮಾರು ಚಿನ್ನಾಭರಣ ಹಾಗೂ ನಗದು ಹಣ ಸೇರಿ ಒಟ್ಟು ಸುಮಾರು 12,40,000/-  ರೂ ಮೌಲ್ಯದ ನಗದು, ಒಡವೆ ದರೋಡೆ ಮಾಡಿದರು ಎಂದು ದೂರಿನಲ್ಲಿ ತಿಳಿಸಿದ್ದರು.

ಈ ಬಗ್ಗೆ ಪಿ.ಎಸ್.ಐ ಚಂದ್ರಶೇಖರ ರವರು  ತಮ್ಮ ಠಾಣಾ ಅ.ಕ್ರ 43/2020 ಕಲಂ 448, 427, 506, 394 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿತ್ತು.  ಅಂದು ಚಿನ್ನಾಭರಣ ಹಾಗೂ ಹಣವನ್ನು ನೀಡುವಂತೆ ಗದರಿಸಿದರು. ಅಚ್ಯುತ್ ಭಟ್ ಅವರ ತಮ್ಮನ ಹೆಂಡತಿಯ ಕುತ್ತಿಗೆಯಿಂದ ಒಂದು ಚಿನ್ನದ ಕರಿಮಣಿ ಸರ ಹಾಗೂ ತಾಯಿಯ ಕೈಯಲ್ಲಿದ್ದ 2 ಚಿನ್ನದ ಬಳೆಗಳನ್ನು ಕಿತ್ತುಕೊಂಡರು,  ಅಲ್ಲದೇ ಮನೆಯಲ್ಲಿ ಹುಡುಕಾಡಿ ಕಬ್ಬಿಣದ ಕಪಾಟನ್ನು ಬಲತ್ಕಾರವಾಗಿ ತೆರೆದು ಅದರಲ್ಲಿದ್ದ ಬೆಳ್ಳಿಯ 4 ತಂಬಿಗೆ, ತಾಯಿಯ ಚಿನ್ನದ ಸರ ಮತ್ತು ಒಂದು ಉಂಗುರವನ್ನು ಹಾಗೂ ನಗದು ರೂ 25,000/- ವನ್ನು ತೆಗೆದುಕೊಂಡರು ಅಲ್ಲದೇ ನನ್ನ ತಮ್ಮನ ಹೆಂಡತಿ ಬ್ಯಾಗ್ ನಲ್ಲಿದ್ದ 3 ಮಕ್ಕಳ ಸಣ್ಣ ಚೈನ್, ಒಂದು ದೊಡ್ಡ ಚೈನ್, ನೆಕ್ಲೇಸ್, 5 ಸೆಟ್ ಕಿವಿಯ ಬೆಂಡೋಲೆ, 3 ಉಂಗುರ,4 ಬಳೆಗಳನ್ನು ತೆಗೆದುಕೊಂಡು ಹೋಗಿರುತ್ತಾರೆ. ಅಲ್ಲದೇ ದೂರುದಾರರ ಒಂದು ಮೊಬೈಲ್ ಮತ್ತು ತಮ್ಮ ಹೆಂಡತಿಯ 2 ಮೊಬೈಲ್ ಸೆಟ್ ಗಳನ್ನು ನೆಲಕ್ಕೆ ಹೊಡೆದು ಹಾನಿಗೊಳಿಸಿರುತ್ತಾರೆ.  ಆರೋಪಿತರುಗಳು ಈ ಬಗ್ಗೆ ಪೊಲೀಸರಿಗೆ ತಿಳಿಸಿದರೆ ನಿಮ್ಮನ್ನು ಕೊಂದು ಮನೆಗೆ ಬೆಂಕಿ ಹಾಕುವುದಾಗಿ ಬೆದರಿಸಿರುತ್ತಾರೆ.

 ಈ ಘಟನೆ ನಡೆಯುವಾಗ ಈ ದಿನ ಬೆಳಿಗ್ಗಿನ ಜಾವ 02.50 ಗಂಟೆಯಿಂದ ಸುಮಾರು 03.30 ಗಂಟೆಯ ಮಧ್ಯೆ ಸಂಭವಿಸಿರುತ್ತದೆ. ಆರೋಪಿಗಳು  30 ರಿಂದ 35 ಪವನ್ ತೂಕದ ಚಿನ್ನದ ಒಡವೆ ಹಾಗೂ ಸುಮಾರು 1 ಕೆ ಜಿ ತೂಕದ  ಬೆಳ್ಳಿ ಒಡವೆಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದು ಒಟ್ಟು ಸುಮಾರು ಚಿನ್ನಾಭರಣ ಹಾಗೂ ನಗದು ಹಣ ಸೇರಿ ಸುಮಾರು 12,40,000/- ರೂಪಾಯಿಗಳಾಗಬಹುದು ಎಂಬಿತ್ಯಾದಿ ಮಾಹಿತಿ ನೀಡಿದ್ದರು ಎಂದು ಎಸ್.ಪಿ ರಿಷ್ಯಂತ್ ತಿಳಿಸಿದರು.

ಇದೊಂದು ಘೋರ ಅಪರಾಧ ಪ್ರಕರಣವಾಗಿದ್ದರಿಂದ ಮುಂದಿನ ತನಿಖೆಯನ್ನು ಬೆಳ್ತಂಗಡಿ ಠಾಣಾ ವೃತ್ತ ನಿರೀಕ್ಷಕ ಸಂದೇಶ್ ಪಿ ಜಿ ರವರು ವಹಿಸಿಕೊಂಡು ತನಿಖೆ ಮುಂದುವರಿಸಿದ್ದು ಬಳಿಕ ಈ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರುಗಳು ವಿವಿಧ ಆಯಾಮಗಳಲ್ಲ ತನಿಖೆಯನ್ನು ನಡೆಸಿದರು.

 ಆರೋಪಿತರುಗಳ ಮತ್ತು ಸೊತ್ತು ಪತ್ತೆಯಾಗದೇ ಇದ್ದುದರಿಂದ ಆರೋಪಿ ಹಾಗೂ ಸೊತ್ತು ಪತ್ತೆಯಾಗದ ಪ್ರಕರಣವೆಂದು ಮಾನ್ಯ ನ್ಯಾಯಾಲಯಕ್ಕೆ ತಾತ್ಕಾಲಿಕವಾಗಿ ‘ಸಿ’ ರಿಪೋರ್ಟ್  ಸಲ್ಲಿಸಲಾಗಿತ್ತು ಎಂದು ಮಾಹಿತಿ ನೀಡಿದರು. ಆದರೆ ಬಳಿಕ ಆರೋಪಿಗಳ ಬಗ್ಗೆ  ಗುಪ್ತ ಮಾಹಿತಿ ಮೇ.22 ರಂದು ಸಮಯ ಸುಮಾರು  3 ಗಂಟೆಗೆ ಧರ್ಮಸ್ಥಳ ಪೊಲೀಸ್ ಠಾಣಾ  ಉಪನಿರೀಕ್ಷಕ ಅನಿಲ್ ಕುಮಾರ್ ಅವರಿಗೆ ಪೊಲೀಸ್‌ ಮಾಹಿತಿದಾರರಿಂದ ಕಲ್ಮಂಜ ದರೋಡೆ ಪ್ರಕರಣದಲ್ಲಿ ಸಂಶಾಸ್ಪದ ವ್ಯಕ್ತಿಯು ಈ ಪ್ರಕರಣದಲ್ಲಿ ದರೋಡೆ ಮಾಡಿ ದೋಚಿಕೊಂಡ ಚಿನ್ನ ಮಾರಾಟ ಮಾಡಲು ತೆರಳುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಆರೋಪಿತ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಕೂಳೂರು ಮನೆಯ ಯು.ಎಸ್.ಇಸ್ಮಾಯಿಲ್ ಅವರ ಮಗ ರಿಯಾಜ್(40) ಎಂಬಾತನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಅವನು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ ದರೋಡೆ ಪ್ರಕರಣದಲ್ಲಿ ಆರೋಪಿಯೆಂದು ತಪ್ಪೊಪ್ಪಿಕೊಂಡಿರುತ್ತಾನೆ ಎಂದರು.

2024ರ ಮೇ 22ರಂದು ಸಮಯ ಸುಮಾರು 15.00 ಗಂಟೆಗೆ ಧರ್ಮಸ್ಥಳ ಪೊಲೀಸ್ ಠಾಣಾ ಎಸೈ ಅನೀಲಕುಮಾರ್ ರವರಿಗೆ ಪೊಲೀಸ್‌ ಬಾತ್ಮೀದಾರರಿಂದ ಅಪರಾಧ ಕ್ರಮಾಂಕ; ಅ ಕ್ರ 43/2020 ಕಲಂ:448,427,506,394 ಜೊತೆಗೆ 34 ಐಪಿಸಿ ಪ್ರಕರಣದಲ್ಲಿ ಸಂಶಾಸ್ಪದ ವ್ಯಕ್ತಿಯು  ಈ ಪ್ರಕರಣದಲ್ಲಿ ದರೋಡೆಮಾಡಿ ದೋಚಿಕೊಂಡ ಚಿನ್ನ ಮಾರಾಟ ಮಾಡಲು ತೆರಳುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಆರೋಪಿತ ರಿಯಾಜ್ ಎಂಬಾತನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಅವನು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ; ಅ ಕ್ರ 43/2020 ಕಲಂ:448,427,506,394 ಜೊತೆಗೆ 34 ಐಪಿಸಿ ಯಂತೆ ಪ್ರಕರಣದಲ್ಲಿ ಆರೋಪಿ ಎಂದು ತಪ್ಪೊಪ್ಪಿಕೊಂಡಿರುತ್ತಾನೆ. 

ಮತ್ತು ಪ್ರಕರಣದ ಇನ್ನಿಬ್ಬರು ಆರೋಪಿಗಳಾದ  ಮುಂಡಾಜೆ ನಿವಾಸಿ ನವಾಝ್ (38), ಕೃಷ್ಣ (37),  ಬೆಂಗಳೂರು ಎಂಬವರು ಧರ್ಮಸ್ಥಳದಲ್ಲಿ ಇರುವುದಾಗಿ ಆಪಾದಿತ ರಿಯಾಜ್ ತಿಳಿಸಿದಂತೆ ಅವರನ್ನು ಕೂಡ ವಶಕ್ಕೆ ಪಡೆದುಕೊಂಡಿರುತ್ತೇವೆ. ಅವರ ಜೊತೆ ಅವರು ಎರಡು ಜನ ಸ್ನೇಹಿತರು ಕೂಡ ಭಾಗಿಯಾಗಿರುವುದಾಗಿ ತಿಳಿಸಿರುತ್ತಾರೆ ಎಂದರು. ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರುಗಳಾದ  ಎಂ ಜಗದೀಶ್‌ ಮತ್ತು  ರಾಜೇಂದ್ರ ಡಿ ಎಸ್ ಮತ್ತು ಪೊಲೀಸ್‌ ಉಪಾಧೀಕ್ಷಕರು  ಬಂಟ್ವಾಳ  ವಿಜಯ ಪ್ರಸಾದ್‌ ಎಸ್‌ ರವರ ನಿರ್ದೆಶನದಂತೆ, ವಸಂತ್‌ ಆರ್‌ ಆಚಾರ್ ಪೊಲೀಸ್‌ ವೃತ್ತ ನಿರೀಕ್ಷಕರು ಬೆಳ್ತಂಗಡಿ ಗ್ರಾಮಾಂತರ ವೃತ್ತ,  ನಾಗರಾಜ್ ಹೆಚ್.ಇ, ಪೊಲೀಸ್ ನಿರೀಕ್ಷಕರು, ವಿಟ್ಲ ಪೊಲೀಸ್ ಠಾಣೆ, ಮತ್ತು ಸುಬ್ಬಾಪುರ ಮಠ, ಪೊಲೀಸ್ ನಿರೀಕ್ಷಕರು ಬೆಳ್ತಂಗಡಿ ಪೊಲೀಸ್ ಠಾಣೆ  ರವರ ಮಾರ್ಗದರ್ಶದಂತೆ  ಧರ್ಮಸ್ಥಳ ಪೊಲೀಸ್‌ ಠಾಣಾ ಪೋಲಿಸ್‌ ಉಪ-ನಿರೀಕ್ಷಕರುಗಳಾದ ಅನಿಲ್‌ ಕುಮಾರ ಡಿ, ಸಮರ್ಥರ ಗಾಣಿಗೇರ ಹಾಗೂ ಸಿಂಬಂಧಿಗಳಾದ ಹೆಚ್.ಸಿ ರಾಜೇಶ ಎನ್‌  , ಹೆಚ್.ಸಿ ಪ್ರಶಾಂತ್‌ ಎಂ , ಹೆಚ್.ಸಿ ಸತೀಶ್‌ ನಾಯ್ಕ್ , ಮ.ಹೆಚ್.ಸಿ ಪ್ರಮೋದಿನಿ , ಹೆಚ್.ಸಿ ಶೇಖರ್‌ ಗೌಡ , ಹೆಚ್‌ಸಿ ಕೃಷ್ಣಪ್ಪ, ಆನಿಲ್‌ ಕುಮಾರ್‌, ಜಗದೀಶ್‌, ಮಲ್ಲಿಕಾರ್ಜುನ್‌, ವಿನಯ್‌ ಪ್ರಸನ್ನ , ಗೋವಿಂದರಾಜ್‌, ಭಿಮೇಶ್‌,  ನಾಗರಾಜ್‌ ಬುಡ್ರಿ ಹಾಗೂ ಹುಲಿರಾಜ್‌ ಪತ್ತೆ  ಕಾರ್ಯಾಚರಣೆಯಲ್ಲಿ ಭಾಗಿಯಾಗಿರುತ್ತಾರೆ ಎಂದು  ದಕ ಎಸ್.ಪಿ ರಿಷ್ಯಂತ್ ತಿಳಿಸಿದರು.

Post Comment

ಟ್ರೆಂಡಿಂಗ್‌

error: Content is protected !!