ಮೇ31ರಂದು 2024-25ನೇ ಸಾಲಿನ ಶಾಲಾ ಪ್ರಾರಂಭೋತ್ಸವ: ತಳಿರುತೋರಣ, ರಂಗೋಲಿಗಳ ಅಲಂಕಾರಗಳಿಂದ ವಿದ್ಯಾರ್ಥಿಗಳಲ್ಲಿ ಉತ್ಸಾಹ ಮೂಡಿಸಲು ತಯಾರಿ
ಬೆಳ್ತಂಗಡಿ : 2024-25ನೇ ಸಾಲಿನ ರಾಜ್ಯ ಪಠ್ಯಕ್ರಮದ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಪ್ರಾರಂಭೋತ್ಸವ ಮತ್ತು ಪೂರ್ವಸಿದ್ಧತೆ ಕುರಿತು 2024-25ನೇ ಸಾಲಿನ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರಕಾರಿ,ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಪ್ರಾರಂಭೋತ್ಸವ ಮತ್ತು ಪೂರ್ವಸಿದ್ಧತೆಗಾಗಿ ಈ ಕೆಳಕಂಡ ಅಂಶಗಳನ್ನು ಅನುಷ್ಠಾನಗೊಳಿಸಲು ಅಗತ್ಯ ಕ್ರಮವಹಿಸುವಂತೆ ಶಿಕ್ಷಣ ಇಲಾಖೆ ಆಯಾ ಶಾಲೆಗಳಿಗೆ (ಉಲ್ಲೇಖ: ಮಾನ್ಯ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರ ಸುತ್ತೋಲೆ ಸಂಖ್ಯೆ:ಸಿ4(8) 01/2023-24 00:28.03.2024) ಸುತ್ತೋಲೆ ಮೂಲಕ ಸೂಚಿಸಿದ್ದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲೂಕು ಹಂತದಲ್ಲಿ ಸಿ.ಆರ್.ಪಿ. ಬಿ.ಆರ್.ಪಿ. ಹಾಗೂ ಶಾಲಾ ಮುಖ್ಯಶಿಕ್ಷಕರ ಸಭೆ ನಡೆಸಿ ಶಾಲೆ ಪ್ರಾರಂಭದ ಪೂರ್ವ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಕ್ರಮವಹಿಸುವಂತೆ ತಿಳಿಸಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲೂಕು ಹಂತದಲ್ಲಿ ಮಿಂಚಿನ ಸಂಚಾರ ತಂಡಗಳನ್ನು ರಚಿಸಿ, ಇಲಾಖೆಯ ನಿಯಮಾನುಸಾರ ಶಾಲೆಗಳಿಗೆ ಭೇಟಿ ನೀಡಿ ಸೂಕ್ತ ಮಾರ್ಗದರ್ಶನ ನೀಡುವುದು. ದಿನಾಂಕ : 29/05/2024 ರಂದು ಶಾಲಾ ಮುಖ್ಯಶಿಕ್ಷಕರು, ಎಲ್ಲಾ ಶಿಕ್ಷಕರು ಶಾಲೆಗೆ ಹಾಜರಾಗಿ ತರಗತಿ ಕೋಣೆಗಳು ಮತ್ತು ಶಾಲಾ ಪರಿಸರದ ಸ್ವಚ್ಛತೆಗೆ ಕ್ರಮ ಕೈಗೊಳ್ಳುವುದು, ಶಾಲಾ ಸ್ವಚ್ಛತಾ ಕಾರ್ಯ ಮತ್ತು ಶಾಲಾ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳುವುದು.
(ತರಗತಿ/ಸಿಬ್ಬಂದಿ ಕೊಠಡಿ, ಶಾಲಾ ಮೈದಾನ, ನೀರಿನ ಟ್ಯಾಂಕ್, ಅಡುಗೆ ಕೋಣೆ, ಅಹಾರ ಧಾನ್ಯಗಳ ಸ್ವಚ್ಛತೆ ಅಡುಗೆ ತಯಾರಿ ಪರಿಕರಗಳನ್ನು (ಪಾತ್ರೆಗಳು) ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುವುದು, ದಿನಾಂಕ : 29/05/2024 & 30/05/2024ರ ದಿನಾಂಕಗಳಂದು ಶಾಲಾ ಮುಖ್ಯಶಿಕ್ಷಕರು. ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ ಸಭೆ ನಡೆಸಿ ಚರ್ಚಿಸಿ ಶಾಲಾ ಪ್ರಾರಂಭೋತ್ಸವಕ್ಕೆ ಪೂರ್ವ ತಯಾರಿಯನ್ನು ಮಾಡಿಕೊಳ್ಳುವುದು.
ದಿನಾಂಕ 30/05/2024 ಶಿಕ್ಷಕರು ವರ್ಷದ ಶೈಕ್ಷಣಿಕ ಚಟುವಟಿಕೆ ಕುರಿತು ಶಾಲಾ/ ತರಗತಿ/ಶಿಕ್ಷಕರ ವೇಳಾ ಪಟ್ಟಿ, ವಾರ್ಷಿಕ ಕ್ರಿಯಾ ಯೋಜನೆ, ಶಿಕ್ಷಕರ ಪಾಠ ಯೋಜನೆ ತಯಾರಿಸಿಕೊಳ್ಳುವುದು. ದಿನಾಂಕ 29/05/2024 ಮತ್ತು 30/05/2024ರಂದು ಶಾಲಾ ಪ್ರಾರಂಭೋತ್ಸವ ಕುರಿತು ಪೂರ್ವ ಸಿದ್ಧತೆ ಮಾಡಿಕೊಳ್ಳುವುದು. ಶಾಲೆಯನ್ನು ತಳಿರುತೋರಣ ಹಾಗೂ ರಂಗೋಲಿಗಳಿಂದ ಅಲಂಕರಿಸಿ ದಿನಾಂಕ 31/05/2024 ರಂದು ಶಾಲಾ ಪ್ರಾರಂಭೋತ್ಸವ ನಡೆಸುವುದು. ದಿನಾಂಕ 31/05/2024 ರಂದು ನಡೆಯುವ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಎಸ್.ಡಿ.ಎಂ.ಸಿ. ಸದಸ್ಯರು ಮತ್ತು ಪೋಷಕರನ್ನು ಆಹ್ವಾನಿಸುವುದು. ದಿನಾಂಕ:31/05/2024 ರಂದು ಶಾಲೆಗೆ ಬರುವ ವಿದ್ಯಾರ್ಥಿಗಳನ್ನು ಅತ್ಯಂತ ಉತ್ಸಾಹದಿಂದ ಮುಖ್ಯಶಿಕ್ಷಕರು. ಸಹಶಿಕ್ಷಕರು, ಎಸ್.ಡಿ.ಎಂ.ಸಿ ಹಾಗೂ ಪೋಷಕರು ಸೇರಿ ವಿಶೇಷವಾಗಿ ಸ್ವಾಗತಿಸುವುದು, ವಿದ್ಯಾರ್ಥಿಗಳಿಗೆ ಸಿಹಿ ಊಟ ನೀಡುವುದು. ದಿನಾಂಕ : 31/05/2024 ರಂದು ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ಎಸ್.ಡಿ.ಎಂ.ಸಿ. ಸದಸ್ಯರಿಂದ ವಿದ್ಯಾರ್ಥಿಗಳಿಗೆ ವಿತರಿಸುವುದು. ದಿನಾಂಕ 29/05/2024 ಮತ್ತು 30/05/2024ರಂದು ಶಾಲಾ ಪ್ರಾರಂಭೋತ್ಸವ ಕುರಿತು ಪೂರ್ವ ಸಿದ್ಧತೆ ಮಾಡಿಕೊಳ್ಳುವುದು. ಶಾಲೆಯನ್ನು ತಳಿರುತೋರಣ ಹಾಗೂ ರಂಗೋಲಿಗಳಿಂದ ಅಲಂಕರಿಸಿ ದಿನಾಂಕ 31/05/2024 ರಂದು ಶಾಲಾ ಪ್ರಾರಂಭೋತ್ಸವ ನಡೆಸುವುದು. ದಿನಾಂಕ 31/05/2024 ರಂದು ನಡೆಯುವ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಎಸ್.ಡಿ.ಎಂ.ಸಿ. ಸದಸ್ಯರು ಮತ್ತು ಪೋಷಕರನ್ನು ಆಹ್ವಾನಿಸುವುದು.
ದಿನಾಂಕ:31/05/2024 ರಂದು ಶಾಲೆಗೆ ಬರುವ ವಿದ್ಯಾರ್ಥಿಗಳನ್ನು ಅತ್ಯಂತ ಉತ್ಸಾಹದಿಂದ ಮುಖ್ಯಶಿಕ್ಷಕರು. ಸಹಶಿಕ್ಷಕರು, ಎಸ್.ಡಿ.ಎಂ.ಸಿ ಹಾಗೂ ಪೋಷಕರು ಸೇರಿ ವಿಶೇಷವಾಗಿ ಸ್ವಾಗತಿಸುವುದು, ವಿದ್ಯಾರ್ಥಿಗಳಿಗೆ ಸಿಹಿ ಊಟ ನೀಡುವುದು. ದಿನಾಂಕ : 31/05/2024 ರಂದು ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ಎಸ್.ಡಿ.ಎಂ.ಸಿ. ಸದಸ್ಯರಿಂದ ವಿದ್ಯಾರ್ಥಿಗಳಿಗೆ ವಿತರಿಸುವುದು. ಶಾಲಾಭಿವೃದ್ಧಿ ಯೋಜನೆ (SDP/SAP) ಶಾಲಾ ಪಂಚಾಂಗ ತಯಾರಿಸಿಕೊಳ್ಳುವುದು. ಮುಖ್ಯಶಿಕ್ಷಕರು ಸಹಶಿಕ್ಷಕರಿಗೆ ವಿವಿಧ ಕಾರ್ಯಗಳ ಪ್ರಭಾರ ಹಂಚಿಕೆ ಮಾಡಿ ತರಗತಿ ಶಿಕ್ಷಕರನ್ನು ನೇಮಿಸಿಕೊಳ್ಳುವುದು.
ಶಾಲಾ ವ್ಯಾಪ್ತಿಯ ಪ್ರದೇಶಗಳಲ್ಲಿ ಶಾಲೆ ಬಿಟ್ಟಿರುವ ಮಕ್ಕಳನ್ನು ಗುರುತಿಸಿ, ವಿಶೇಷ ದಾಖಲಾತಿ ಅಂದೋಲನ, ಜಾಥಾ, ಮನೆ ಭೇಟಿ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಜೂನ್ ಮೊದಲನೇ ವಾರ ಶಾಲಾ ದಾಖಲಾತಿ/ವಿಶೇಷ ದಾಖಲಾತಿ ಆಂದೋಲನ ನಡೆಸುವುದು.ತೀವ್ರ ಮಳೆಯಾಗಿ ಶಾಲಾ ನಿರ್ವಹಣೆಗೆ ತೊಂದರೆ ಉಂಟಾಗುವ ಸಂದರ್ಭ ಬಂದಲ್ಲಿ ಎಸ್.ಡಿ.ಎಂ.ಸಿ., ಗ್ರಾಮಪಂಚಾಯತಿ/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆ ಸಹಕಾರ ಪಡೆದು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು. ತೀವ್ರ ಮಳೆಯಾಗಿ ಪ್ರವಾಹ ಉಂಟಾಗುವ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಎಸ್.ಡಿ.ಎಂ.ಸಿ. ಅನುಮತಿ ಪಡೆದು ಶಾಲೆಗೆ ರಜೆ ಘೋಷಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವುದು.
ಮಳೆಗಾಲದಲ್ಲಿ ದೂರದ ಊರುಗಳಿಂದ ಬರುವ ಮಕ್ಕಳು ಕಾಲುಸಂಕಗಳಿಂದ ಬರುವಂತಿದ್ದರೆ ಸಾಮೂಹಿಕವಾಗಿ ಜಾಗರೂಕತೆಯಿಂದ ಬರಲು ತಿಳಿಸುವುದು. ಶಾಲಾ ಆವರಣದಲ್ಲಿ ವಿದ್ಯುತ್ ತಂತಿ, ಮರಗಳ ರೆಂಬೆಗಳು, ಹಳೆಯ ಮರಗಳಿಂದ ಮಕ್ಕಳ ಸುರಕ್ಷತೆಗೆ ಅಪಾಯವಿದ್ದರೆ ನಿಯಮಾನುಸಾರ ತೆರವುಗೊಳಿಸಲು ಕ್ರಮವಹಿಸುವುದು. ಶಿಥಿಲಾವಸ್ಥೆಯಲ್ಲಿರುವ ಕೊಠಡಿಯಲ್ಲಿ ಮಕ್ಕಳನ್ನು ಕೂರಿಸದೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು. ದಿನಾಂಕ 01/06/2024ರಿಂದ ದಿನಾಂಕ 30/06/2024ರವರೆಗೆ ಸೇತುಬಂಧ ಕಾರ್ಯಕ್ರಮ ನಡೆಸುವುದು. ದಿನಾಂಕ 05/06/2024ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ದಿನವನ್ನು ಆಚರಿಸಿ ಶಾಲೆಯ ಸುತ್ತಲೂ ಗಿಡಗಳನ್ನು ನೆಡುವುದು. ಮಾನ್ಯ ಆಯುಕ್ತರು ದಿನಾಂಕ 28/03/2024 ರಂದು ಹೊರಡಿಸಿದ ಸುತ್ತೋಲೆಯನ್ವಯ ಮತ್ತು 2024-25ರ ಶೈಕ್ಷಣಿಕ ಮಾರ್ಗಸೂಚಿಯಂತೆ ಕ್ರಮವಹಿಸಿ ಯಾವುದೇ ಲೋಪವಾಗದಂತೆ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಎಲ್ಲಾ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಅಗತ್ಯ ಕ್ರಮವಹಿಸಲು ಸೂಚಿಸಿದೆ.
ಈ ಬಗ್ಗೆ ಉಪನಿರ್ದೇಶಕರು (ಆಡಳಿತ) /2024 ಶಾಲಾ ಶಿಕ್ಷಣ ಇಲಾಖೆ ದ.ಕ. ಮಂಗಳೂರು ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಿಗೆ ಅಗತ್ಯ ಕ್ರಮಕ್ಕಾಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಎಲ್ಲಾ ಶಾಲಾ ಮುಖ್ಯಶಿಕ್ಷಕರಿಗೆ ಸುತ್ತೋಲೆ ಹೊರಡಿಸಲಾಗಿದೆ.
Post Comment