ಕಕ್ಕಿಂಜೆ ಸೈಂಟ್‌ ಜೋಸೆಫ್‌ ಆಸ್ಪತ್ರೆಗೆ ನುಗ್ಗಿ ಸೀಲು ಕದ್ದ ಕಳ್ಳರು

ಕಕ್ಕಿಂಜೆ ಸೈಂಟ್‌ ಜೋಸೆಫ್‌ ಆಸ್ಪತ್ರೆಗೆ ನುಗ್ಗಿ ಸೀಲು ಕದ್ದ ಕಳ್ಳರು

Share
IMG-20240528-WA0000-1-2-1024x562 ಕಕ್ಕಿಂಜೆ ಸೈಂಟ್‌ ಜೋಸೆಫ್‌ ಆಸ್ಪತ್ರೆಗೆ ನುಗ್ಗಿ ಸೀಲು ಕದ್ದ ಕಳ್ಳರು

ಬೆಳ್ತಂಗಡಿ : ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಸೈಂಟ್‌ ಜೋಸೆಫ್‌ ಆಸ್ಪತ್ರೆಯ  ಹಿಂಭಾಗದಿಂದ ಏಣಿಯ ಮೂಲಕ ಒಂದನೇ  ಮಹಡಿಗೆ ಹೋದ ಇಬ್ಬರು ಯುವಕರು  ಸ್ಟೇರ್‌ ಕೇಸ್ ಮೂಲಕ ಕಂಪ್ಯೂಟರ್ ರೂಮಿಗೆ ಹೋಗಿ  ಆಸ್ಪತ್ರೆಗೆ ಸಂಬಂಧಿಸಿದ ಎರಡು ಸೀಲ್ ಗಳನ್ನು ಕಳವು ಮಾಡಿದ ಕುತೂಹಲಕರ ಘಟನೆ ಮೇ 22ರಂದು ನಡೆದಿದೆ.  ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಎಂಬಲ್ಲಿರುವ ಸೇಂಟ್ ಜೋಸೆಫ್ ಆಸ್ಪತ್ರೆಯಲ್ಲಿ ಇಬ್ಬರು ಯುವಕರು ಆಸ್ಪತ್ರೆಯ ಗೇಟಿನ ಮೂಲಕ ಒಳ ಬಂದು ಆಸ್ಪತ್ರೆಯ ಒಳ ಹೋಗಲು ಪ್ರಯತ್ನಿಸಿದ್ದು ಇದೇ ವೇಳೆ ಫಾ||ಟೋಮ್‌ ಎಂಬವರು ಯುವಕರನ್ನು ಪ್ರಶ್ನಿಸಿರುತ್ತಾರೆ.

ಆದರೆ ಅದೇ ಯುವಕರು ಸ್ವಲ್ಪ ಸಮಯದ ಬಳಿಕ  ಯಾರಿಗೂ ತಿಳಿಯದಂತೆ ಆಸ್ಪತ್ರೆಯ ಹಿಂಭಾಗಕ್ಕೆ ಹೋಗಿ  ಅಲ್ಲಿ ಇರಿಸಿದ್ದ ಏಣಿಯ ಮೂಲಕ ಒಂದನೇ ಮಹಡಿಗೆ ಹೋಗಿ ಸ್ಟೇರ್‌ ಕೇಸ್ ಮೂಲಕ ಕಂಪ್ಯೂಟರ್ ರೂಮಿಗೆ ಹೋಗಿ ಅಲ್ಲಿದ್ದ ಆಸ್ಪತ್ರೆಗೆ ಸಂಬಂಧಿಸಿದ ಎರಡು ಸೀಲ್ ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಘಟನೆ ಕುತೂಹಲ , ಸಂಶಯ ಮೂಡಿಸಿದೆ.ಕಳವಾದ 2 ಸೀಲ್ ಗಳ ಒಟ್ಟು ಮೌಲ್ಯ 600/- ರೂ ಆಗಬಹುದೆಂದು ಅಂದಾಜಿಸಲಾಗಿದೆ.ಇದೇ ಆರೋಪಿಗಳು ಆಸ್ಪತ್ರೆಯಿಂದ ಹೋಗುವಾಗ ಸಂಸ್ಥೆಯ ಸಿಬ್ಬಂದಿಗಳಿಗೆ ಕೊಲೆ ಬೆದರಿಕೆ  ಹಾಕಿರುತ್ತಾರೆ. ಈ ಬಗ್ಗೆ  ಆಸ್ಪತ್ರೆಯ ನಿರ್ದೇಶಕರಾದ ಫಾ| ಯೋಹನನ್‌ ಕೆ.ಜೆ. ಬಿನ್‌ ಜೋಸೆಫ್‌ ಅವರು ನೀಡಿರುವ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ 44/2024 ಕಲಂ:454,380,506 ಜೊತೆಗೆ 34 ಐ ಪಿ ಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Post Comment

ಟ್ರೆಂಡಿಂಗ್‌

error: Content is protected !!