ಬಿಜೆಪಿ – ಕಾಂಗ್ರೆಸ್  ದ್ವೇಷ ರಾಜಕೀಯಕ್ಕೆ  ಅಸ್ತ್ರವಾದ ಅಟ್ರಾಸಿಟಿ – ಫೋಕ್ಸೋ ಕಾನೂನು..!

ಬಿಜೆಪಿ – ಕಾಂಗ್ರೆಸ್  ದ್ವೇಷ ರಾಜಕೀಯಕ್ಕೆ  ಅಸ್ತ್ರವಾದ ಅಟ್ರಾಸಿಟಿ – ಫೋಕ್ಸೋ ಕಾನೂನು..!

Share
images7-2 ಬಿಜೆಪಿ - ಕಾಂಗ್ರೆಸ್  ದ್ವೇಷ ರಾಜಕೀಯಕ್ಕೆ  ಅಸ್ತ್ರವಾದ ಅಟ್ರಾಸಿಟಿ – ಫೋಕ್ಸೋ ಕಾನೂನು..!
images-7-1 ಬಿಜೆಪಿ - ಕಾಂಗ್ರೆಸ್  ದ್ವೇಷ ರಾಜಕೀಯಕ್ಕೆ  ಅಸ್ತ್ರವಾದ ಅಟ್ರಾಸಿಟಿ – ಫೋಕ್ಸೋ ಕಾನೂನು..!

ಬೆಳ್ತಂಗಡಿ : ಕಳೆಂಜ ಗ್ರಾಮದಲ್ಲಿ ಲೋಕಸಭಾ ಚುನಾವಣಾ  ಫಲಿತಾಂಶದ ದಿನ  ವಿಜಯೋತ್ಸವದಲ್ಲಿ ಬಿಜೆಪಿಗರು ಮಾಡಿಕೊಂಡ ಎಡವಟ್ಟು ಮತ್ತು ಬಳಿಕ ನಡೆದ ಬೆಳವಣಿಗೆ ಇದೀಗ ಎರಡೂ ಪಕ್ಷಗಳ ಪರಸ್ಪರ ಆರೋಪ ಪ್ರತ್ಯಾರೋಪಗಳಿಗೂ ದ್ವೇಷ ಮತ್ತು ಸೇಡಿನ ರಾಜಕೀಯಕ್ಕೂ ವೇದಿಕೆಯಾಗುತ್ತಿದೆ. 

ಈ ಪ್ರಕರಣದಲ್ಲಿ ವಿಜಯೋತ್ಸವ ಸಂದರ್ಭ ಹೊಡೆದಾಟದಲ್ಲಿ ಗಾಯಗೊಂಡ ರಾಜೇಶ್ ಮಲೆಕುಡಿಯ ಅವರು ಕುಶಾಲಪ್ಪ ಗೌಡ ವಿರುದ್ಧ ಗಂಭೀರವಾದ ಪರಿಶಿಷ್ಟರ ದೌರ್ಜನ್ಯ (ಅಟ್ರಾಸಿಟಿ) ತಡೆ ಕಾಯ್ದೆ ಕೇಸು ದಾಖಲಿಸಿದ್ದಾರೆ. ಇನ್ನೊಂದೆಡೆ ಕುಶಾಲಪ್ಪ ಗೌಡ, ರಾಜೇಶ್ ಮಲೆಕುಡಿಯ ವಿರುದ್ಧ ಗಂಭೀರವಾದ ಫೋಕ್ಸೋ ಕೇಸು ದಾಖಲಿಸಿದ್ದಾರೆ.                                                                                                                       

ವಿಜಯೋತ್ಸವ ಉನ್ಮಾದದಲ್ಲಿ ಬಿಜೆಪಿಗರು ಕುಶಾಲಪ್ಪ ಗೌಡ ಅವರ ಮನೆ ಆವರಣದೊಳಗೆ ಪ್ರವೇಶಿಸಿ ಸುಡುಮದ್ದು ಸಿಡಿಸಿ ಕೇಕೆ ಹಾಕಿ ಸಂಭ್ರಮಿಸಿದ್ದೇ ಜಗಳ, ಹೊಡೆದಾಟಗಳಿಗೆ ಕಾರಣವಾಯಿತು ಎಂಬ ಅಭಿಪ್ರಾಯ ಸ್ಥಳೀಯವಾಗಿ ಕೇಳಿ ಬರುತ್ತಿದ್ದು ಅಲ್ಲಿ ನಡೆದಿದ್ದು ಪರಸ್ಪರ ಹೊಡೆದಾಟವಾಗಿದ್ದರೂ ಕುಶಾಲಪ್ಪ ಗೌಡ ಅವರ ಮೇಲೆ ಹಲ್ಲೆ (ಎಟ್ರಾಸಿಟಿ) ದೌರ್ಜನ್ಯ ಪ್ರಕರಣ ದಾಖಲಾಗಿರುವುದು ಹಾಗೂ ಜಗಳದ ವೇಳೆ ಪರಸ್ಪರ ಮಾತಿನ ಚಕಮಕಿ ಹೋ  ನೂಕಾಟ, ತಳ್ಳಾಟ ನಡೆದಿದ್ದರೂ ರಾಜೇಶ್ ಮಲೆಕುಡಿಯ ಅವರ ವಿರುದ್ಧ ಮಾನಭಂಗ ಯತ್ನ – ಫೋಕ್ಸೋ ಪ್ರಕರಣ ದಾಖಲಾಗಿರುವುದು ನೋಡಿದರೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ಮುಖಂಡರು ಎಟ್ರಾಸಿಟಿ ಮತ್ತು ಫೋಕ್ಸೋ ಎಂಬ ಎರಡು ಪರಿಣಾಮಕಾರಿ ಕಾನೂನುಗಳನ್ನು ದುರುಪಯೋಗಪಡಿಸಿಕೊಂಡರೇ? ಎಂಬ ಪ್ರಶ್ನೆಗಳು ಕೇಳಿ ಬರಲು ಕಾರಣವಾಗಿದೆ.                                                                                                                                                                                                      ಹಲ್ಲೆಗೊಳಗಾಗಿ ಗಾಯಗೊಂಡ ರಾಜೇಶ್ ಎಂ.ಕೆ. ಅವರಿಗಾದ ಹಲ್ಲೆ ಘಟನೆಯನ್ನು ಬಳಸಿಕೊಂಡು ಕಾಂಗ್ರೆಸ್ ಕಾರ್ಯಕರ್ತ ಕುಶಾಲಪ್ಪ ಗೌಡ ವಿರುದ್ಧ ದೌರ್ಜನ್ಯ, ಕೊಲೆಯತ್ನ ಪ್ರಕರಣ ದಾಖಲಿಸಿ ಸೇಡು ತೀರಿಸಿಕೊಳ್ಳಲು ಮುಂದಾದರೆ, ಇನ್ನೊಂದೆಡೆ ಜಗಳ ಮಧ್ಯೆ ಮಹಿಳೆಯರು, ಹೆಣ್ಣು ಮಕ್ಕಳ ಮುಂದೆ ಪರಸ್ಪರ ನಡೆದ ಮಾತಿನ ಚಕಮಕಿ ನೂಕಾಟ, ತಳ್ಳಾಟ ಘಟನೆಯನ್ನು ಕಾರಣವಾಗಿಟ್ಟುಕೊಂಡು ಬಿಜೆಪಿ ಮುಖಂಡ ರಾಜೇಶ್ ಎಂ.ಕೆ. ವಿರುದ್ಧ  ಫೋಕ್ಸೋ ಪ್ರಕರಣ ದಾಖಲಿಸಿ ರಾಜಕೀಯ ಸೇಡು ತೀರಿಸಿಕೊಳ್ಳಲು ಮುಂದಾಗಿದೆ. ರಾಜಕೀಯ ದ್ವೇಷಕ್ಕೆ ಬಿಜೆಪಿ ಎಟ್ರಾಸಿಟಿ ಕಾಯ್ದೆಯನ್ನು ಕಾಂಗ್ರೆಸ್ ವಿರುದ್ಧ ಅಸ್ತ್ರವನ್ನಾಗಿ ಮಾಡಿಕೊಂಡರೆ,  ಕಾಂಗ್ರೆಸ್ ಫೋಕ್ಸೋ   ಕಾನೂನನ್ನು ಬಿಜೆಪಿ ವಿರುದ್ಧ  ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಒಂದೆಡೆ ರಾಜೇಶ್ ಮಲೆಕುಡಿಯ  ಘಟನೆಯನ್ನು ಹೊಡೆದಾಟವೆಂದಾಗಲಿ, ಹಲ್ಲೆ ಎಂದಾಗಲಿ ಭಾವಿಸದೆ ಮುಖಂಡರ ಒತ್ತಡದಿಂದಲೋ ಸ್ವಯಂ ಪ್ರೇರಿತನಾಗಿ ಎಟ್ರಾಸಿಟಿ ಪ್ರಕರಣ ದಾಖಲಿಸಿರುವುದು   ಮತ್ತು  ಕುಶಾಲಪ್ಪ ಗೌಡ ನಡೆದ ಘಟನೆಯನ್ನು ಪರಸ್ಪರ ಹೊಡೆದಾಟವೆಂದಾಗಲಿ, ಜಗಳವೆಂದಾಗಲಿ ಪರಿಗಣಿಸದೆ ಮನೆಯ ಅಪ್ರಾಪ್ತ ಹೆಣ್ಣು ಮಗಳ ಮನಸ್ಸಿನ ಮೇಲೆ ಭೀರಬಹುದಾದ ಅವ್ಯಕ್ತ ಪರಿಣಾಮವನ್ನಾಗಲಿ ಯೋಚಿಸದೆ ರಾಜೇಶ್ ವಿರುದ್ಧ ಫೋಕ್ಸೋ ಪ್ರಕರಣ ದಾಖಲಿಸಿರುವುದು ಬಿಜೆಪಿ-ಕಾಂಗ್ರೆಸ್ ಮುಖಂಡರ ಕುಮ್ಮಕ್ಕಿನಿಂದ ನಡೆದಿರಬಹುದೇ ಎಂಬ ಸಂಶಯ ಮೂಡಲು ಕಾರಣವಾಗಿದೆ. 

ಒಂದು ಸಹಜ ರಾಜಕೀಯ ಗಲಾಟೆಯ ಮಧ್ಯೆ ಜಾತಿ ಹೆಸರೆತ್ತಿ ದೌರ್ಜನ್ಯ ಎಸಗಲು ಹೇಗೆ ನೆನಪಾಗಬೇಕು?   ಇಲ್ಲಿ ನಿಜವಾಗಿಯೂ ‘ಜಾತಿ’ಯ ಕಾರಣಕ್ಕಾಗಿ ರಾಜೇಶ್ ಮೇಲೆ ಹಲ್ಲೆ ನಡೆಯಿತೇ? ಹಾಗೂ ಜಗಳದ ಮಧ್ಯೆ ಕುಶಾಲಪ್ಪ ಗೌಡ ಅವರ ಮನೆಯ ಹೆಣ್ಣು ಮಕ್ಕಳ ಮಾನಭಂಗಕ್ಕೆ ಯತ್ನಿಸಲು ಹೇಗೆ ಸಾಧ್ಯ? ಎಂಬ ಮೂಲಭೂತ ಪ್ರಶ್ನೆಗಳು ಗ್ರಾಮಸ್ಥರಿಂದ ಕೇಳಿ ಬರುತ್ತಿದೆ.  ಈ ಘಟನೆಯ ನೆಪದಲ್ಲಿ ಎರಡೂ ಪಕ್ಷಗಳ ಪರಸ್ಪರರ ವಿರುದ್ಧ ಮಾಡಿಕೊಂಡಿರುವುದು ಅಟ್ರಾಸಿಟಿ ಮತ್ತು ಫೋಕ್ಸೋ ಎಂಬ ಎರಡು ಗಂಭೀರ ಕಾನೂನುಗಳ ದುರುಪಯೋಗವಲ್ಲವೇ? ಎಂಬ ಪ್ರಶ್ನೆ ಕೇಳಿ ಬರಲು ಕಾರಣವಾಗಿದೆ.  ಗಂಭೀರ ಸ್ವರೂಪದ ಘಟನೆಗಳಲ್ಲಿ ಉಪಯೋಗಿಸ ಬಳ ಬೇಕಾದ ಇಂಥ ಸೂಕ್ಷ್ಮ ಕಾನೂನು-ಕಾಯ್ದೆಗಳು ಸರಣಿಯಾಗಿ ದುರುಪಯೋಗವಾದಲ್ಲಿ ನೈಜ ಆಟ್ರಾಸಿಟಿ ಮತ್ತು ಫೋಕ್ಸೋ  ಪ್ರಕರಣಗಳಲ್ಲಿ ನೈಜ ಸಂತ್ರಸ್ತರಿಗೆ ಅನ್ಯಾಯವಾಗುವ ಅಥವಾ ಆ ಪ್ರಕರಣಗಳ ಆರೋಪಿಗಳು ಶಿಕ್ಷೆಯಿಂದ ಪಾರಾಗುವ ಅಪಾಯವಿದೆ ಎಂಬುದನ್ನು ದಲಿತರನ್ನು ಎಟ್ರಾಸಿಟಿ ಕಾಯ್ದೆ ಮೂಲಕ ಮತ್ತು ಹೆಣ್ಣು ಮಕ್ಕಳನ್ನು ಫೋಕ್ಸೋ ಕಾಯ್ದೆ ಮೂಲಕ ತಮ್ಮ ರಾಜಕೀಯ ಲಾಭಕ್ಕಾಗಿ ಅಸ್ತ್ರ ಮಾಡಿಕೊಳ್ಳುವ ಬಿಜೆಪಿ-ಕಾಂಗ್ರೆಸ್ ಮುಂತಾದ ರಾಜಕೀಯ ಪಕ್ಷಗಳ ಮುಖಂಡರು ಶೀಘ್ರವಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ: ಇಲ್ಲದಿದ್ದಲ್ಲಿ ಅಟ್ರಾಸಿಟಿ ಮತ್ತು ಫೋಕ್ಸೋದಂಥ ಕಾನೂನುಗಳು ನೈಜ ಪ್ರಕರಣಗಳಲ್ಲಿ ನ್ಯಾಯಯುತವಾಗಿ ಉಪಯೋಗಕ್ಕೆ ಬರುವ ಬದಲಾಗಿ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ವಿರೋಧಿಗಳಿಗೆ ಉಪಯೋಗಿಸುವ ಮತ್ತು ಎಕೈಕ, ಪರಮ ಅಸ್ತ್ರವಾಗಿ ಉಳಿಯುವ ಅಪಾಯವೇ ಹೆಚ್ಚು ಎಂಬ ಆತಂಕ ಜನರಲ್ಲಿದೆ.

IMG-20240528-WA0000-1-1-1024x562 ಬಿಜೆಪಿ - ಕಾಂಗ್ರೆಸ್  ದ್ವೇಷ ರಾಜಕೀಯಕ್ಕೆ  ಅಸ್ತ್ರವಾದ ಅಟ್ರಾಸಿಟಿ – ಫೋಕ್ಸೋ ಕಾನೂನು..!
  • ಕಳೆಂಜ ಪ್ರಕರಣ : ಕಾಂಗ್ರೆಸ್-ಬಿಜೆಪಿ ಪತ್ರಿಕಾಗೋಷ್ಠಿ ಆರೋಪ- ಪ್ರತ್ಯಾರೋಪಗಳೇನು? : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿರುವ ಬಗ್ಗೆ ಕಳೆಂಜ ಗ್ರಾಮದಲ್ಲಿ ಬಿಜೆಪಿ ಮುಖಂಡ ರಾಜೇಶ್ ಎಂ.ಕೆ. ನೇತೃತ್ವದಲ್ಲಿ ಸಂಭ್ರಮಾಚರಣೆ ನೆಪದಲ್ಲಿ ಕುಶಾಲಪ್ಪ ಗೌಡ ಅವರ ಮನೆಯ ಆವರಣದೊಳಗೆ ಅಕ್ರಮ ಪ್ರವೇಶಿಸಿ ಸುಡುಮದ್ದು ಸಿಡಿಸಿ ಸಂಭ್ರಮಿಸಿದ್ದು ಮನೆಯವರು ಮಹಿಳೆಯರಿಗೆ ಅವಾಚ್ಯವಾಗಿ   ನಿಂದಿಸಿ ದೌರ್ಜನ್ಯ ನಡೆಸಿದ್ದು ಈ ಬಗ್ಗೆ ಕುಶಾಲಪ್ಪ ಗೌಡ ಆಕ್ಷೇಪಿಸಿದಾಗ ಮಾತಿಗೆ ಮಾತು ಬೆಳೆದಾಗ ಪರಸ್ಪರ ಹೊಡೆದಾಟ ನಡೆದಿದ್ದು ಚುನಾವಣಾ ನೀತಿ ಸಂಹಿತೆ ಹಾಗೂ 144 ಸೆಕ್ಷನ್ ಹಾರಿಯಲ್ಲಿರುವಾಗ ವಿಜಯೋತ್ಸವ ಆಚರಿಸಿ ಶಾಂತಿ ಕೆಡಿಸಿರುವುದು, ವಿನಾ ಕಾರಣ ರಕ್ಷಿತ್ ಶಿವರಾಮ್ ಮೇಲೆ ಆರೋಪಿಸುತ್ತಿರುವುದು ಖಂಡನೀಯ ಎಂದು ಬೆಳ್ತಂಗಡಿ ತಾಲೂಕು ಗ್ರಾಮೀಣ ಕಾಂಗ್ರೆಸ್ ಪ.ಜಾ. ಮೋರ್ಚಾ ಅಧ್ಯಕ್ಷ ಕೆ.ನೇಮಿರಾಜ್ ಗುರುವಾರ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್  ಕರೆದಿದ್ದ ಪತ್ರಿಕಾ ಗೋಷ್ಟಿಯಲ್ಲಿ ಆರೋಪಿಸಿದ್ದಾರೆ.   ತಾಲೂಕಿನಲ್ಲಿ ಯಾವುದೇ ಘಟನೆಯಾದರೂ ಆ ಘಟನೆಗೆ ರಕ್ಷಿತ್ ಶಿವರಾಮ್ ಹೆಸರು ಹಾಗೂ ಕಾಂಗ್ರೆಸ್ ಪಕ್ಷ , ರಾಜ್ಯ ಸರಕಾರವನ್ನು ಎಳೆದು ತರುವುದು ಶಾಸಕ ಹರೀಶ್ ಪೂಂಜ ಅವರಿಗೆ ಚಾಳಿಯಾಗಿದೆ, ಕಾನೂನು ಸುವ್ಯವಸ್ಥೆ ಬಗ್ಗೆ ಪದೇ ಪದೇ ಮಾತನಾಡುವ ಶಾಸಕರೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ ಎಂದು  ಜಿ.ಪಂ.ಮಾಜಿ ಸದಸ್ಯ, ಜಿಲ್ಲಾ ಕಾಂಗ್ರೆಸ್ ಪ.ಜಾ. ಮೋರ್ಚಾ ಅಧ್ಯಕ್ಷ ಶೇಖರ ಕುಕ್ಕೇಡಿ ಆರೋಪಿಸಿದ್ದಾರೆ.

ಕಾಂಗ್ರೆಸ್ ಪತ್ರಿಕಾ ಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕೆ.ಎಂ., ನಗರ ಬ್ಲಾಕ್ ಅಧ್ಯಕ್ಷ ಸತೀಶ್ ಕೆ. ಬಂಗೇರ, ಕಾಶಿಪಟ್ಟ, ನಗರ ಎಸ್.ಟಿ. ಘಟಕ ಅಧ್ಯಕ್ಷ ಜಯಾನಂದ ಪಿಲಿಕ್ಕಲ, ಅಕ್ರಮ-ಸಕ್ರಮ ಸಮಿತಿ ಸದಸ್ಯ ಶ್ರೀಧರ ಕಳೆಂಜ, ತಾಲೂಕು ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಜೈಸನ್ ಪಟ್ಟೇರಿ, ಮುಖಂಡರಾದ ವಸಂತ್ ಬಿ.ಕೆ. ಭಾಗವಹಿಸಿದ್ದರು ಕುಶಾಲಪ್ಪ ಗೌಡ ಕಾಂಗ್ರೆಸ್ ಕಾರ್ಯಕರ್ತನೇ ಅಲ್ಲ, ಯಾವುದೇ ಚುನಾವಣೆಯಲ್ಲಿ ಪಕ್ಷದ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿಲ್ಲ ಎಂದು ಕಾಂಗ್ರೆಸ್ ವಾದಿಸಿದರೆ ಈ ವ್ಯಕ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ಮನೆಮನೆಗೆ ಹೋಗಿ ಮತ ಯಾಚಿಸಿರುವುದು ಗ್ರಾಮಕ್ಕೆ ತಿಳಿದ ವಿಚಾರ ಎಂದು ಬಿಜೆಪಿ ಮುಖಂಡರು ಪ್ರತಿಕ್ರಿಯಿಸಿದರು. ಆದರೆ ಈ ಜಗಳದ ನೆಪದಲ್ಲಿ ಮನೆಯ ಹೆಣ್ಣು ಮಕ್ಕಳನ್ನು ಮುಂದಿಟ್ಟು ಬಿಜೆಪಿ ಕಾರ್ಯಕರ್ತನ ಮೇಲೆ ಸುಳ್ಳು ಕೇಸು ಹಾಕಿ ಸೇಡು ತೀರಿಸಿಕೊಳ್ಳುತ್ತಿರುವುದು ಕೀಳು ಮಟ್ಟದ ರಾಜಕೀಯ, ಮಾಜಿ ಶಾಸಕ ಕೆ.ವಸಂತ ಬಂಗೇರ ಇರುವಾಗ ಇಂಥ ರಾಜಕೀಯ ಇರಲಿಲ್ಲ, 2018ರಿಂದ ಇದು ಪ್ರಾರಂಭವಾಗಿದೆ ಎಂದ ಶ್ರೀನಿವಾಸ್ ರಾವ್ ಚುನಾವಣಾ ನೀತಿ ಸಂಹಿತೆ ಬಿಜೆಪಿಗೆ ಮಾತ್ರ ಅನ್ವಯವಾಗುತ್ತಾ ; ಇಡೀ ನಗರದಲ್ಲಿ ಫ್ಲೆಕ್ಸ್ ಹಾಕುವಾಗ ನೀತಿ ಸಂಹಿತೆ ಇರಲಿಲ್ಲವೇ ಎಂದು ಬಿಜೆಪಿ ಬೆಳ್ತಂಗಡಿ ಮಂಡಲದ ಅಧ್ಯಕ್ಷ ಶ್ರೀನಿವಾಸ್ ರಾವ್ ಧರ್ಮಸ್ಥಳ ಆರೋಪಿಸಿದ್ದಾರೆ.

ಕಳೆಂಜ ಘಟನೆ ನಡೆದ ಕೂಡಲೇ ಪೊಲೀಸ್ ಠಾಣೆಗೆ ಮಲ್ಲೇಶ್ವರಂನಿಂದ ಬಂದವರ ಕರೆ ಹೋಗುತ್ತದೆ. ಇಡೀ ಘಟನೆಯಲ್ಲಿ ಕಾಂಗ್ರೆಸ್ ಮುಖಂಡರ ಕೈವಾಡವಿದೆ ಎಂದು ಅವರು ಆರೋಪಿಸಿದರು.   ಬಿಜೆಪಿ ಪತ್ರಿಕಾ ಗೋಷ್ಠಿಯಲ್ಲಿ ಮಂಡಲದ ಮಾಜಿ ಅಧ್ಯಕ್ಷ ಜಯಂತ್ ಕೋಟ್ಯಾನ್, ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ, ಮಾಜಿ ಜಿ.ಪಂ.ಸದಸ್ಯ ಕೊರಗಪ್ಪ ನಾಯ್ಕ,  ಮಾಜಿ ತಾ.ಪಂ. ಸದಸ್ಯೆ ವಸಂತಿ, ಜಯಾನಂದ ಗೌಡ, ರಾಜೇಶ್ ಪೆಂರ್ಬುಡ ಉಪಸ್ಥಿತರಿದ್ದರು.

Post Comment

ಟ್ರೆಂಡಿಂಗ್‌

error: Content is protected !!