ಕುಂಟಾಲಪಲ್ಕೆ ಸ.ಹಿ.ಪ್ರಾ. ಶಾಲಾ ಎಸ್.ಡಿ.ಎಂ.ಸಿ ಪುನರ್ ರಚನೆ

ಬಂದಾರು : ಇಲ್ಲಿನ ಕುಂಟಾಲಪಲ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ಪುನರ್ ರಚಿಸಲಾಯಿತು. ಎಸ್.ಡಿ.ಎಂ.ಸಿ. ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಗೌಡ ನೆಲ್ಲಿಗೇರು ಮತ್ತು ಉಪಾಧ್ಯಕ್ಷೆಯಾಗಿ ಶಶಿಕಲಾ ಪಿಲಿಕ್ಕೋ ಇವರನ್ನು ಆಯ್ಕೆ ಮಾಡಲಾಯಿತು. ಸದಸ್ಯರಾಗಿ ರಮೇಶ್ ಗೌಡ ನೆಲ್ಲಿಗೇರು, ಬಾಲಕೃಷ್ಣ ಗೌಡ ಪಿಲಿಕ್ಕೋ, ವಿಶ್ವನಾಥ ಗೌಡ ನೆಲ್ಲಿಗೇರು, ಧರ್ಣಪ್ಪ ಗೌಡ ಹಳೆಮನೆ, ಜಾರಪ್ಪ ಗೌಡ ಅಂತರ, ವಾಸಪ್ಪ ಗೌಡ ಎರ್ಮುಡೇಲು, ಸಾಂತಪ್ಪ ಗೌಡ ಬನದಮಜಲು, ಲಲಿತಾ ಬದ್ಯಾರು, ನಯನಾ ಪಿಲಿಕ್ಕೋ, ಕುಸುಮಾ ಅರ್ತಿದಡಿ , ಧನ್ಯ ನೆಡಿಲು , ಕಿನ್ಯಮ್ಮ ಕೆರೆಕೋಡಿ,ಲೀಲಾವತಿ ಮಾಲೆಸರ, ಭವಿತಾ ಬೊಳ್ಜೆ, ಶ್ರೀನಿವಾಸ ಗೌಡ ಕುಂಟಾಲಪಲ್ಕೆ ,ತ್ರಿವೇಣಿ ಪಿಲಿಕ್ಕೋ ಆಯ್ಕೆಯಾದರು. ಶಾಲಾ ಮುಖ್ಯ ಶಿಕ್ಷಕಿ ಗಾಯತ್ರಿ ಕೆ., ಬಂದಾರು ಗ್ರಾಮ ಪಂಚಾಯತ್ ಸದಸ್ಯೆ ಭಾರತಿ ಕೊಡ್ಯೇಲು, ಎಸ್.ಡಿ.ಎಂ.ಸಿ. ನಿಕಟಪೂರ್ವ ಅಧ್ಯಕ್ಷ ಬಾಲಕೃಷ್ಣ ಗೌಡ ಪಿಲಿಕ್ಕೋ, ಸದಸ್ಯ ಶ್ರೀನಿವಾಸ ಗೌಡ ಕುಂಟಾಲಪಲ್ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕವೃಂದ ಹಾಗೂ ಪೋಷಕರು ಪಾಲ್ಗೊಂಡಿದ್ದರು.
Post Comment