ವೇಣೂರುಕಾರಿನಲ್ಲಿ ಬಂದ ತಂಡದಿಂದ ಮನೆ ಮುಂದೆಯೇ ಯುವಕರ ಮೇಲೆ ಹಲ್ಲೆ
◻️News ಕೌಂಟರ್
ಬೆಳ್ತಂಗಡಿ : ಕೆಲಸ ಮಾಡಿದ ತಮ್ಮ ಸಂಬಳ ಕೇಳಿದಾಗ ಸತಾಯಿಸಿದ್ದು ತಮ್ಮನ ಸಂಬಳ ಕೇಳಲು ಮನೆಗೆ ಹೋದ ಅಣ್ಣನಿಗೆ ” ಅವನ ಸಂಬಳ ಕೇಳಲು ನೀನ್ಯಾರು, ಕೊಡದಿದ್ರೆ ಏನ್ಮಾಡ್ತಿ ?” ಎಂದು ದಬಾಯಿಸಿ ಕಳಿಸಿದ್ದು ಮಾತ್ರವಲ್ಲದೆ ಸ್ವಲ್ಪ ಹೊತ್ತಲ್ಲಿ ತಂಡ ಕಟ್ಟಿಕೊಂಡು ಕಾರಿನಲ್ಲಿ ಮನೆಗೆ ಬಂದು ಸಂಬಳ ಕೇಳಲು ಹೋದ ಯುವಕನಿಗೆ ಮನೆಯ ಮುಂದೆ , ಮಹಿಳೆಯರು, ಮಕ್ಕಳ ಎದುರು ಸಾರ್ವಜನಿಕವಾಗಿ ಗಂಭೀರ ಹಲ್ಲೆಗೈದು ಬಿಡಿಸಲು ಬಂದವರಿಗೂ ಹಲ್ಲೆ ಮಾಡಿ ಪರಾರಿಯಾದ ಘಟನೆ ವೇಣೂರು ಸಮೀಪದ ಕೇತೇಲ್ ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.
ಸಂಬಳ ಕೇಳಿದ ಕಾರಣಕ್ಕಾಗಿ ಮಾಲಕನಿಂದ ಹಲ್ಲೆಗೊಳಗಾದ ಯುವಕರು ಪರಿಶಿಷ್ಟ ಜಾತಿಗೆ ಸೇರಿದ ಕೂಲಿ ಕಾರ್ಮಿಕರೆಂದು ತಿಳಿದು ಬಂದಿದೆ.
ಬೆಳ್ತಂಗಡಿ ತಾಲೂಕು ವೇಣೂರು ಸಮೀಪದ ಕೈತೇಲ್ ನಿವಾಸಿ ಶ್ರೀಧರ್ ಎಂಬವರ ಪುತ್ರ ಸುಜೀವನ್ (22) ಎಂಬಾತನೇ ತನ್ನ ತಮ್ಮ ಸುದರ್ಶನ್ ಎಂಬವನು ದುಡಿದ ಸಂಬಳ ಕೇಳಿದ ಕಾರಣಕ್ಕಾಗಿ ದುಡಿಸಿದ ಮಾಲಿಕನಿಂದ ಹಲ್ಲೆಗೊಳಗಾದ ಯುವಕನಾಗಿದ್ದಾನೆ.
ಮನೆಯ ಮುಂದೆ ಹಲ್ಲೆ ನಡೆಸಿದ ಸಂದರ್ಭ ಸ್ಥಳದಲ್ಲಿದ್ದ ಬಾಬು ಎಂಬವರ ಪುತ್ರ ಸತೀಶ್ (24) , ಶಿವಪ್ಪ ಎಂಬವರ ಪುತ್ರ ಹರೀಶ್ (29) ಎಂಬವರೇ ಹಲ್ಲೆ ಬಿಡಿಸಲು ಹೋಗಿ ಮನೆಗೆ ಕಾರಿನಲ್ಲಿ ಬಂದ ಡೋಲ್ಫಿ ಮತ್ತಿತರರ ತಂಡದಿಂದ ಹಲ್ಲೆಗೊಳಗಾದವರು.
ತಂಡದಿಂದ ಹಲ್ಲೆಗೊಳಗಾದ ಸುಜೀವನ್ ಮತ್ತಿತರರು ಹಲ್ಲೆಗೊಳಗಾದ ಕೂಡಲೇ ಸೋಮವಾರ ರಾತ್ರಿ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ಆರೋಪಿಗಳ ವಿರುದ್ಧ ಕೇಸು ದಾಖಲಿಸಲು ಮೀನ-ಮೇಷ ನೋಡುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ.
ಬೆಳ್ತಂಗಡಿ ತಾಲೂಕು ನಾರಾವಿ ನಿವಾಸಿ, ಬಜಿರೆಯ ‘ಜ್ಯೋತಿ ಅರೆಂಜರ್ಸ್’ ಮಾಲಕ ಡೋಲ್ಫಿ ಡಯಾಸ್ ಎಂಬಾತನೇ ಸುದರ್ಶನ್ ಎಂಬ ಯುವಕನನ್ನು ತನ್ನ ಮಾಲಕತ್ವದ ಜ್ಯೋತಿ ಅರೆಂಜರ್ಸ್ ಕೆಲಸಕ್ಕೆ ಕರೆದಿದ್ದು ಕೊಡಬೇಕಾಗಿದ್ದ ಸಂಬಳ ಕೊಡದೆ ಸತಾಯಿಸಿದ್ದ.
ಈ ಬಗ್ಗೆ ಸುದರ್ಶನ್ ಸಹೋದರ ಸುಜೀವನ್ ಎಂಬಾತ ಮಾಲಕ ಡೋಲ್ಫಿ ಡಯಾಸ್ ನಲ್ಲಿ ತಮ್ಮನಿಗೆ ಕೊಡಬೇಕಾಗಿದ್ದ ಸಂಬಳ ಕೇಳಿದ್ದು ಕೆಲಸ ಮಾಡಿಸಿದಾತ ಸಂಬಳ ಕೊಡುವುದಿಲ್ಲ ಏನ್ ಮಾಡ್ತಿ ? ಎಂದು ದಬಾಯಿಸಿ ಕಳಿಸಿದ್ದಲ್ಲದೆ ಸಂಬಳ ಕೇಳಲು ಮನೆಗೆ ಬಂದ ಕೋಪದಲ್ಲಿ ಮಾಲಿಕ ಬಳಿಕ ಕಾರಿನಲ್ಲಿ ಗುಂಪು ಕಟ್ಟಿಕೊಂಡು ಸುದರ್ಶನ್ ಮನೆ ಮುಂದೆ ಬಂದು ಸುಜೀವನ್ , ಹರೀಶ್ , ಸತೀಶ್ ಎಂಬವರಿಗೆ ಗಂಭೀರ ಹಲ್ಲೆ ವನಡೆಸಿದ್ದಾನೆ ಎಂದು ಆರೋಪಿಸಲಾಗಿದೆ .
ಸೋಮವಾರ ರಾತ್ರಿ ಸುಮಾರು 9.30ರ ಹೊತ್ತಿಗೆ ಜ್ಯೋತಿ ಅರೆಂಜರ್ಸ್ ಮಾಲಕ ಡೋಲ್ಫಿ ಡಯಾಸ್ ತನ್ನ ಜೊತೆ ಮಾರುತಿ ಸುಜ್ ಕೀ ಇಗ್ನೇಸ್ ಕಾರಿನಲ್ಲಿ ವೇಣೂರಿನ ಕೊಪ್ಪದ ಬಾಕಿಮಾರ್ ನಿವಾಸಿ ಸುನೀಲ್, ಬಜಿರೆ ಗ್ರಾಮದ ನಿವಾಸಿ ಹರಿಪ್ರಸಾದ್ , ಸುಧೀಶ್ ಹೆಗ್ಡೆ ಬಾಡಾರು ಎಂಬವರನ್ನು ಕೈತೇಲ್ ಎಂಬಲ್ಲಿಗೆ ಕರೆದುಕೊಂಡು ಬಂದು ಸುಜೀವನ್ ಎಂಬ ಯುವಕನ ತಲೆ , ಎದೆ ಭಾಗಗಳಿಗೆ ಗಂಭೀರ ಹಲ್ಲೆ ನಡೆಸಿರುವುದಾಗಿದೆ.
ಮೊದಲಿಗೆ ಸುಜೀವನ್ , ಡೋಲ್ಫಿ ಡಯಾಸ್ ಕಾರಿನಲ್ಲಿ ಸುಜೀವನ್ ಮನೆ ಮುಂದೆ ಬಂದು ಹಲ್ಲೆ ಮಾಡುವಾಗ ಯಾಕೆ ಹೊಡೆಯುತ್ತಿರಿ ಎಂದು ಪ್ರಶ್ನಿಸಿದ ಹರೀಶ್ ಹಾಗೂ ಸತೀಶ್ ಹಲ್ಲೆ ಬಿಡಿಸಲು ಮುಂದಾಗಿದ್ದು ಈ ಸಂದರ್ಭ ಸುಧೀಶ್ , ಹರಿಪ್ರಸಾದ್ ಹಾಗೂ ಸುನೀಲ್ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದವರು ತಿಳಿಸಿದ್ದಾರೆ.
ಹಲ್ಲೆಯ ಪರಿಣಾಮ ಸುಜೀವನ್ ತಲೆ ಮತ್ತಿತರ ಭಾಗಗಳಿಗೆ ಗಂಭೀರ ಏಟಾಗಿದ್ದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಲು ಬಂದಿದ್ದು ತಲೆಗಾದ ಏಟಿನ ಬಗ್ಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಹೋಗುವಂತೆ ವೈದ್ಯರು ಸೂಚಿಸಿದ್ದಾರೆ.
ಘಟನೆಯಲ್ಲಿ ಹಲ್ಲೆ ಬಿಡಿಸಲು ಹೋಗಿ ಹಲ್ಲೆಗೊಳಗಾದ ಹರೀಶ್ ಹಾಗೂ ಸತೀಶ್ ಎಂಬಿಬ್ಬರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ.
ದೌರ್ಜನ್ಯಕ್ಕೊಳಗಾದವರು ರಾತ್ರಿಯೇ ಲಿಖಿತ ದೂರು ನೀಡಿದ್ದರೂ ವೇಣೂರು ಪೊಲೀಸರ ವರ್ತನೆ ಸಂಶಯಕ್ಕೆ ಕಾರಣವಾಗಿದೆ.
Post Comment