ವಿಎಚ್ ಪಿ – ಶಾಸಕ ಅಶೋಕ್ ರೈ ಸಖ್ಯ  ವಿಚಾರ : ಕಾಂಗ್ರೆಸ್ ಸ್ಪಷ್ಟೀಕರಣ ನೀಡಲಿ : ಸಿಪಿಐಎಂ ಮುಖಂಡ ಬಿ.ಎಂ. ಭಟ್ ಆಗ್ರಹ

ವಿಎಚ್ ಪಿ – ಶಾಸಕ ಅಶೋಕ್ ರೈ ಸಖ್ಯ  ವಿಚಾರ : ಕಾಂಗ್ರೆಸ್ ಸ್ಪಷ್ಟೀಕರಣ ನೀಡಲಿ : ಸಿಪಿಐಎಂ ಮುಖಂಡ ಬಿ.ಎಂ. ಭಟ್ ಆಗ್ರಹ

Share
IMG-20241024-WA0000 ವಿಎಚ್ ಪಿ - ಶಾಸಕ ಅಶೋಕ್ ರೈ ಸಖ್ಯ  ವಿಚಾರ : ಕಾಂಗ್ರೆಸ್ ಸ್ಪಷ್ಟೀಕರಣ ನೀಡಲಿ : ಸಿಪಿಐಎಂ ಮುಖಂಡ ಬಿ.ಎಂ. ಭಟ್ ಆಗ್ರಹ

◻️ News ಕೌಂಟರ್

ಬೆಳ್ತಂಗಡಿ : ಪುತ್ತೂರು ಶಾಸಕರಾದ ಅಶೋಕ ರೈ ಅವರು ಬಿಜೆಪಿ, ಸಂಫಪರಿವಾರಕ್ಕೆ ಸೇರಿದ ವಿಶ್ವಹಿಂದು ಪರಿಷತ್ ಕಾರ್ಯಕ್ರಮದಲ್ಲಿ ಭಾಗವಹಿರುವುದು ಖಂಡನೀಯ ಎಂದು ಬೆಳ್ತಂಗಡಿಯ ವಕೀಲ ಸಿಪಿಐಎಂ ಮುಖಂಡ ಬಿ.ಎಂ.ಭಟ್ ಎಂದಿದ್ದಾರೆ.
ಪುತ್ತೂರು ಶಾಸಕರು ಬಿಜೆಪಿಯಿಂದ ವಲಸೆ ಬಂದವರಾಗಿದ್ದರೂ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ಕಾರಣದಿಂದ ಕ್ಷೇತ್ರದ ಜಾತ್ಯಾತೀತ ಮತದಾರರು, ಅಲ್ಪಸಂಖ್ಯಾತ ಸಮುದಾಯಗಳ ಮತದಾರರು ಕೋಮುವಾದಿಗಳಿಗೆ, ಕೋಮುವಾದಕ್ಕೆ ಹಿನ್ನಡೆ ಉಂಟುಮಾಡಲೆಂದೇ ಅವರಿಗೆ ಒಗ್ಗಟ್ಟಿನಿಂದ ಮತ ನೀಡಿದ್ದರು.  ಎಂದ ಬಿ.ಎಂ.ಭಟ್ “ಕಾಂಗ್ರೇಸ್ ಪಕ್ಷದ ಮತಗಳ ಜೊತೆಗೆ ಈ ಎಲ್ಲಾ ವಿಭಾಗಗಳ ಒಗ್ಗಟ್ಟಿನ ಮತ ಚಲಾವಣೆಯಿಂದ ಮಾತ್ರ ಅವರು ಗೆಲುವು ಕಂಡಿದ್ದಾರೆ. ಹೀಗಿರುವಾಗ ಅವರು ತಮಗೆ ಮತ ನೀಡಿದ ಮತದಾರರ ಭಾವನೆಗಳಿಗೆ ಪೂರಕವಾಗಿ ವರ್ತಿಸುವುದನ್ನು ಸಹಜವಾಗಿ ನಿರೀಕ್ಷಿಸಲಾಗುತ್ತದೆ. ಕಾಂಗ್ರೆಸ್ ಪಕ್ಷವು ಅದರ ಜಾತ್ಯಾತೀತ ಸಿದ್ದಾಂತದಂತೆ ಸಂಘಪರಿವಾರದ ಕೋಮುವಾದದ ವಿರುದ್ದ ನಿಲ್ಲುತ್ತದೆ ಎಂಬ ನಂಬಿಕೆಯೂ ಅಶೋಕ್ ರೈ ಪರ ಮತ ಚಲಾವಣೆಗೆ ಕಾರಣವಾಗಿತ್ತು‌.  ಆದರೆ ಅವರು ಈಗಲೂ  ಬಿಜೆಪಿ ಪರಿವಾರದ ಸಂಘಟನೆಗಳ, ಕೋಮುವಾದಿ ಸಂಘಟನೆಗಳ ಸಭೆಗಳಲ್ಲಿ ಭಾಗವಹಿಸುವುದು, ಆತ್ಮೀಯ ಒಡನಾಟ ಹೊಂದಿರುವುದು ಅವರ ಪರವಾಗಿ ಮತ ಚಲಾಯಿಸಿದ ಅಲ್ಪಸಂಖ್ಯಾತ ಸಮುದಾಯಗಳ, ಜಾತ್ಯಾತೀತ ಮನೋಭಾವದ ಮತದಾರರಿಗೆ ಆಘಾತ ಉಂಟುಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ವಿಶ್ವ ಹಿಂದು ಪರಿಷತ್, ಹಿಂದೂ ಜಾಗರಣ ವೇದಿಕೆ, ಹಿಂದೂ ಯುವ ಸೇನೆ ಹೀಗೆ ಹಿಂದೂ ಧರ್ಮದ ಹೆಸರನ್ನು ಇಟ್ಟುಕೊಂಡು ಬಿಜೆಪಿ ಪರಿವಾರದ ಹಲವು ಸಂಘಟನೆಗಳಿವೆ. ಹಿಂದೂ ಶಬ್ದ ಇದ್ದ ಮಾತ್ರಕ್ಕೆ ಅವರು ಹಿಂದೂಗಳ ಪ್ರತಿನಿಧಿ ಸಂಘಟನೆಗಳೇನಲ್ಲ. ಅವೆಲ್ಲವೂ ಸಂಘಪರಿವಾರದ ಅಂಗ ಸಂಸ್ಥೆಗಳು ಮಾತ್ರ. ಹಿಂದು ಧರ್ಮಕ್ಕೂ, ಬಿಜೆಪಿ ಜೊತೆಗಿರುವ ಈ ಸಂಘಟನೆಗಳಿಗೂ ಯಾವುದೇ ಸಂಬಂಧ ಇಲ್ಲ‌.  ಸಂಘಟನೆಗಳು ಹಿಂದು ಧರ್ಮದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿಗೆ ರಾಜಕೀಯ ಲಾಭ ತಂದುಕೊಡುವ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡುತ್ತಾ ಬಂದಿರುವುದು ರಾಜಕೀಯದ ಪ್ರಾಥಮಿಕ ತಿಳುವಳಿಕೆಯುಳ್ಳ ಎಲ್ಲರಿಗೂ ತಿಳಿದಿದೆ.
ಬಹು ಸಂಖ್ಯಾತ ಹಿಂದುಗಳು ಬಿಜೆಪಿಯ ಈ ವರ್ತುಲದಿಂದ ಹೊರಗಿದ್ದಾರೆ, ಈ ಕಟು ವಾಸ್ತವ ಸತ್ಯವನ್ನು ಅರ್ಥ ಮಾಡಿಕೊಳ್ಳದ ಕಾಂಗ್ರೇಸ್ ಅಥವಾ ಇತರ ಜಾತ್ಯಾತೀತ ಪಕ್ಷಗಳ ನಾಯಕರುಗಳೇ ಅಂತಹಾ ಕೋಮುವಿಷ ಬೀಜ ಬಿತ್ತುವ ಸಂಘಟನೆಗಳನ್ನು ಪರೋಕ್ಷವಾಗಿ ಬೆಳೆಸುತ್ತಿರುವುದಾಗಿದೆ. ಪುತ್ತೂರು ಶಾಸಕರ ಈ ವರ್ತನೆ ಖಂಡನೀಯವಾಗಿದೆ. ಕೋಮುವಾದಿ ಸಂಘಟನೆಗಳನ್ನು ಬೆಂಬಲಿಸುವ ಶಾಸಕ ಅಶೋಕ ರೈ ಅವರ  ನಡವಳಿಕೆಯ ಹೊಣೆಗಾರಿಕೆ ಕಾಂಗ್ರೇಸ್ ಪಕ್ಷಕ್ಕೂ ಇದೆ. ಅಲ್ಪಸಂಖ್ಯಾತರು, ಜಾತ್ಯಾತೀತರು, ಎಡ ಸಂಘಟನೆಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂಬ ನೆಲೆಯಲ್ಲಿ ಮತಚಲಾಯಿಸಿದೆಯೆ ಹೊರತು ಅಶೋಕ್ ರೈ ಅಂತಲ್ಲ ಎಂದು ವಿಶ್ಲೇಷಿರುವ ಬಿ.ಎಂ.ಭಟ್ ವಿಶ್ವಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ಅಶೋಕ್ ರೈ ಅವರ ಈ ನಡೆಯ ಕುರಿತು ಕಾಂಗ್ರೆಸ್ ಪಕ್ಷ  ಸ್ಪಷ್ಟೀಕರಣ ನೀಡಬೇಕು ಎಂದು ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Previous post

ಟ್ರಯಲ್ ನೋಡಲು ಹೋಗಿ ರಿಯಲ್ ಸುಟ್ಟು ಹೋದ ಕಾರು : ಸುಟ್ಟ ಗಾಯಗಳೊಂದಿಗೆ ಇಬ್ಬರು ಅಪಾಯದಿಂದ ಪಾರು!

Next post

ಮುರುಕುಂಬಿ ಸೆಲೂನ್- ಹೋಟೆಲ್ ಅಸ್ಪೃಶ್ಯತಾ ದೌರ್ಜನ್ಯ ಪ್ರಕರಣ 98 ಅಪರಾಧಿಗಳಿಗೆ ಜೀವಾವಧಿ, ಮೂವರಿಗೆ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್

Post Comment

ಟ್ರೆಂಡಿಂಗ್‌