ಕಾಂಗ್ರೆಸ್ (ಅ)ಭದ್ರಕೋಟೆಯಲ್ಲಿ ಕಾಂಗ್ರೆಸ್ – ಬಿಜೆಪಿ ಜನಪ್ರತಿನಿಧಿಗಳಿಗೆ ಬೇಡವಾದ ಸರಳಿಕಟ್ಟೆ- ಗೋವಿಂದರಗುಳಿ ರಸ್ತೆ !

ಬೆಳ್ತಂಗಡಿ : ಸರಳಿಕಟ್ಟೆ: ಇಲ್ಲಿನ ಜನತಾ ಕಾಲೋನಿಯಿಂದ ಗೋವಿಂದರಗುಳಿವರೆಗಿನ ರಸ್ತೆಯು ತೀರಾ ಹದಗೆಟ್ಟಿದ್ದು ಸಂಚಾರಕ್ಕೆ ಅಯೋಗ್ಯವಾಗಿದ್ದು ಸ್ಥಳೀಯರ ಗೋಳು ಕೇಳುವವರೇ ಇಲ್ಲದಾಗಿದೆ.
ಕುಲಗೆಟ್ಟ ರಸ್ತೆಯ ಇಕ್ಕೆಲಗಳ ಪ್ರದೇಶವು ತೆಕ್ಕಾರು ಮತ್ತು ಬಾರ್ಯ ಗ್ರಾಮಪಂಚಾಯತ್ ಆಡಳಿತ ವ್ಯಾಪ್ತಿಗೊಳಪಟ್ಟ ಪ್ರದೇಶವಾಗಿದ್ದು ಎರಡೂ ಪಂಚಾಯತ್ ಆಡಳಿತಗಳ ದಿವ್ಯ ನಿರ್ಲಕ್ಷ್ಯದ ಪ್ರತಿಫಲವಾಗಿ ಈ ಪ್ರದೇಶದ ಪ್ರಯಾಣಿಕರು ಓಡಾಟಕ್ಕೆ ಪರದಾಡುವಂತಾಗಿದೆ.
ರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸುವ ವಿದ್ಯಾರ್ಥಿಗಳು, ಕಾರ್ಮಿಕರು, ಪ್ರಯಾಣಿಕರು ರಸ್ತೆಯ ದುಸ್ಥಿಯಿಂದ ಬೇಸತ್ತಿದ್ದು ಜನಪ್ರತಿನಿಧಿಗಳ ಪರಮ ಬೇಜವಾವ್ದಾರಿಯ ಬಗ್ಗೆ ಹಿಡಿಶಾಪ ಹಾಕುತ್ತಿದ್ದಾರೆ.
ಸುಮಾರು ಹತ್ತು ವರ್ಷಗಳಿಂದ ಯಾವುದೇ ಪ್ರಗತಿ ಕಾಣದೆ ತೀರಾ ಹದಗೆಟ್ಟಿರುವ ರಸ್ತೆಗೆ ಉದ್ಯೋಗ ಖಾತರಿ ಯೋಜನೆಯಲ್ಲಿ ಗ್ರಾ.ಪಂ. ಆಡಳಿತಗಳಿಗೆ ಐದು ವರ್ಷಗಳ ಅಧಿಕಾರವಧಿಯಲ್ಲಿ ಅನುದಾನ ನೀಡುವ ಅವಕಾಶವಿದ್ದರೂ ಈ ಬಗ್ಗೆ ಯಾವುದೇ ಅನುದಾನಕ್ಕೆ ಪ್ರಯತ್ನಿಸದೆ ಅಥವಾ ಅನುದಾನ ಮೀಸಲಿಡದೆ ಈ ಪ್ರದೇಶವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎಂಬ ಆರೊಪಗಳು ಗ್ರಾಮಸ್ಥರಿಂದ
ಕೇಳಿ ಬರುತ್ತಿದೆ.
ಮುಸ್ಲಿಂ ಬಾಹುಳ್ಯ ಪ್ರದೇಶವಾದ್ದರಿಂದ ಈ ಭಾಗಕ್ಕೆ ಶಾಸಕರು ಅನುದಾನ ತರುವ ಪ್ರಯತ್ನ ಮಾಡುತ್ತಿಲ್ಲ ಎಂಬ ಆರೋಪಗಳು ಒಂದೆಡೆಯಾದರೆ ಕಾಂಗ್ರೆಸ್ ಬೆಂಬಲಿತರ ಅಧಿಕಾರದ ತೆಕ್ಕಾರು ಮತ್ತು ಬಾರ್ಯ ಗ್ರಾ.ಪಂ. ಈ ಪ್ರದೇಶದ ಓಟು ಬ್ಯಾಂಕ್ ಭದ್ರವಾಗಿದೆ ಎಂಬ ಕಾಂಗ್ರೆಸ್ಸಿಗರ ಭ್ರಮೆ ಇನ್ನೊಂದೆಡೆ ರಸ್ತೆಯ ದುಸ್ಥಿತಿಗೆ ಕಾರಣವಾಗಿದೆ ಎಂಬ ಆರೋಪ ನಾಗರಿಕರಿಂದ ಕೇಳಿ ಬರುತ್ತಿದೆ. ಯಾವ ಅಭಿವೃದ್ಧಿ ಕಾರ್ಯ ಮಾಡದಿದ್ದರೂ ಅಧಿಕಾರ ಹಿಡಿಯುವುದು ನಾವೇ ಎಂಬ ಭ್ರಾಂತಿಯಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರಲ್ಲಿದೆ ಎಂಬ ಆರೋಪವು ಈ ರಸ್ತೆಯನ್ನು ನೋಡಿದರೆ ನಿಜವೆನಿಸುತ್ತದೆ.
ಒಟ್ಟಿನಲ್ಲಿ ಕಾಂಗ್ರೆಸ್ – ಬಿಜೆಪಿಯ ನಿರ್ಲಕ್ಷ್ಯ ಮತ್ತು ಕೀಳುಮಟ್ಟದ
ರಾಜಕೀಯದಿಂದ ರಾಜ್ಯ ಈ ಪ್ರದೇಶದಲ್ಲಿ ಎದ್ದುಕಾಣುತ್ತಿದ್ದು ಜನರು ಸಂಕಟ ಅನುಭವಿಸುವಂತಾಗಿದೆ.
ಮೀಸಲಿಟ್ಟ ಸರಕಾರದ ಅನುದಾನದಲ್ಲಿ ನಿರ್ಮಾಣಗೊಂಡ ನೂತನ
ಗ್ರಾ.ಪಂ. ಕಟ್ಟಡವನ್ನು ಕಬಳಿಸಲು ಷಡ್ಯಂತ್ರ ರೂಪಿಸಿ ಕುಮ್ಮಕ್ಕು ನೀಡಿ ಕೈಸುಟ್ಟುಕೊಂಡ ಸ್ಥಳೀಯ ಪುಡಿ ರಾಜಕೀಯ ನಾಯಕರಿಗೆ ಈ ಹದಗೆಟ್ಟ ರಸ್ತೆ ಮೇಲೆ ಯಾಕೆ ಕಾಳಜಿ ಇಲ್ಲ ಎಂಬ ಪ್ರಶ್ನೆ ಕೇಳಿ ಬರುತ್ತಿದೆ.
ಒಂದೇ ಪಕ್ಷದ ಅಧಿಕಾರದಲ್ಲಿದ್ದರೂ ತೆಕ್ಕಾರು – ಬಾರ್ಯ ಗ್ರಾ. ಪಂ. ಜನಪ್ರತಿನಿಧಿಗಳ , ಅಧಿಕಾರಿಗಳ ನಿರ್ಲಕ್ಷದಿಂದ ಪ್ರಯಾಣಿಕರು ನಿತ್ಯ ಚಿತ್ರಹಿಂಸೆ ಅನುಭವಿಸುತ್ತಿದ್ದು ಇನ್ನಾದರೂ ಸಂಬಂಧಪಟ್ಟ ಜನಪ್ರನಿಧಿಗಳು, ಅಧಿಕಾರಿಗಳು ಕಾಂಗ್ರೆಸ್ – ಬಿಜೆಪಿ ನಾಯಕರು ಕುಲಗೆಟ್ಟ ರಸ್ತೆಗೊಮ್ಮೆ ಇಳಿದು ಕಣ್ಣು ಬಿಟ್ಟು ನೋಡಬೇಕಾಗಿದೆ.















Post Comment