ವಾಕರ್ ನಲ್ಲಿ ಚರಂಡಿ ದಾಟಲು ಪರದಾಡಿದ ವಿಕಲಚೇತನ !

ವಾಕರ್ ನಲ್ಲಿ ಚರಂಡಿ ದಾಟಲು ಪರದಾಡಿದ ವಿಕಲಚೇತನ !

Share

IMG-20241212-WA0006 ವಾಕರ್ ನಲ್ಲಿ ಚರಂಡಿ ದಾಟಲು ಪರದಾಡಿದ ವಿಕಲಚೇತನ !
20241212_101103-1024x557 ವಾಕರ್ ನಲ್ಲಿ ಚರಂಡಿ ದಾಟಲು ಪರದಾಡಿದ ವಿಕಲಚೇತನ !

ಬೆಳ್ತಂಗಡಿ : ನಗರದ ಐಬಿ ರಸ್ತೆಯ ಬದಿಯಲ್ಲಿರುವ ಖಾಸಗಿ ವಾಣಿಜ್ಯ ಸಂಕೀರ್ಣದ ಸುತ್ತಲೂ ರಸ್ತೆ ಬದಿಯ ಚರಂಡಿಯ ಚಪ್ಪಡಿ ಕಲ್ಲುಗಳನ್ನು ತೆಗೆದು ಜೆಸಿಬಿಯಿಂದ ಚರಂಡಿ ಅಗೆದು ತೆರೆದ ಚರಂಡಿಯನ್ನು ಮುಚ್ಚದೆ ಹಾಗೆಯ ಬಿಟ್ಟು ಎರಡು ವಾರಗಳೇ ಕಳೆದಿದ್ದು ಗುರುವಾರ ನೋಟರಿ ವಕೀಲರೊಬ್ಬರ ಕಚೇರಿಗೆಂದು ಬಂದ ವಿಕಲಚೇತನರೊಬ್ಬರು ಚರಂಡಿ ದಾಟಿ ಹತ್ತಿ ಬರಲು ಪರದಾಡಬೇಕಾಯಿತು.
ನಗರದ ಪ್ರವಾಸಿ ಮಂದಿರ ರಸ್ತೆಯ ಬದಿಯ ಚರಂಡಿಯನ್ನು ಅಗೆದು ಚಪ್ಪಡಿ ಕಲ್ಲುಗಳನ್ನು ತೆರೆದು ಮುಚ್ಚದೆ ಹಾಗೆಯೇ ತೆರದಿಡಲಾಗಿದ್ದು ನಾಗರಿಕರು ವಾಣಿಜ್ಯ ಸಂಕೀರ್ಣದ ಬಾಡಿಗೆದಾರರು ತೊಂದರೆ ಅನುಭವಿಸುವಂತಾಗಿದೆ. ಅಗೆದ ಚರಂಡಿ ಅವ್ಯವಸ್ಥೆ ಬಗ್ಗೆ ನಾಗರಿಕರು ವಿಚಾರಿಸಿದರೆ ಕಟ್ಟಡ ಮಾಲಕರಿಗೆ ದೂರು ಹಾಕಿ ಜಾರಿಕೊಳ್ಳಲು ವಿಫಲ ಯತ್ನ ನಡೆಸುತ್ತಿದ್ದಾರೆ.
” ಕಟ್ಟಡ ಮಾಲಕರಿಗೆ ಅನೇಕ ಭಾರಿ ನೋಟೀಸ್ ಗಳನ್ನು ನೀಡಲಾಗಿದೆ. ಕಟ್ಟಡ ಮಾಲಕರು ಸಮರ್ಪಕವಾಗಿ ಚರಂಡಿ ವ್ಯವಸ್ಥೆಯನ್ನು ಮಾಡದಿರುವುದೇ ಚರಂಡಿ ಸಮಸ್ಯೆಗಳಿಗೆ ಕಾರಣವಾಗಿದೆ” ಎಂಬ ಸಮಜಾಯಿಷಿ ಪಟ್ಟಣ ಪಂಚಾಯತ್ ಆಡಳಿತದ್ದು! ಆದರೆ ಚರಂಡಿ ಉದ್ಧಾರ ಮಾಡಬೇಕಾದ ಸಮಯದಲ್ಲಿ ಕೊಳಚೆ ತುಂಬಿ ತುಳುಕುತ್ತಿದ್ದ ಪ್ರಮುಖ ಚರಂಡಿಗಳತ್ತ ಇಣುಕಿಯೂ ನೋಡದೆ ಕಾಲಹರಣ ಮಾಡುತ್ತಿದ್ದ ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಇದೀಗ ಆಯ್ದ ಚರಂಡಿಗಳ ಮೇಲೆ ಮಾತ್ರ ವಿಪರೀತ ಕಾಳಜಿ ಹುಟ್ಟಿರುವುದು ಸ್ವಾರಸ್ಯಕರವಾಗಿದೆ.
ಕೋರ್ಟ್ ರಸ್ತೆ ಬದಿಯಲ್ಲಿ ಚರಂಡಿ ಅಗೆದು ತೆರೆದಿಟ್ಟು ಗುಂಡಿ ತೆಗೆದಿಟ್ಟು ಎರಡು ವಾರಗಳೇ ಕಳೆಯಿತು. ತರಾತುರಿಯಲ್ಲಿ ಚರಂಡಿ ಅಗೆದ ಪಟ್ಟಣ ಪಂಚಾಯತ್ ಆಡಳಿತವಾಗಲಿ ಕಟ್ಟಡದ ಮಾಲಕರಾಗಲಿ ನಾಗರಿಕರು ತೊಂದರೆ ಅನುಭವಿಸುತ್ತಿರುವುದನ್ನು ಮಜಾ ನೋಡುತ್ತಿದ್ದಾರೆ. ಕಟ್ಟಡ ಮಾಲಕರಂತೂ ಎರಡು ವಾರಗಳಾದರೂ ಬಾಡಿಗೆದಾರರ ಸಂಕಷ್ಟ ಕೇಳಲೇ ಇಲ್ಲ, ಬಾಡಿಗೆದಾರರಂತೂ ದಾರಿ ತೋಚದೆ ಅಡಕತ್ತರಿಯಲ್ಲಿ ಸಿಲುಕಿದಂತಾಗಿದ್ದಾರೆ. ಕಟ್ಟಡದ ಮಾಲಕರು ನಿಯಮಗಳನ್ನು ಪಾಲಿಸಿಲ್ಲ, ನೈರ್ಮಲ್ಯ ಕ್ರಮಗಳನ್ನು ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸಿಲ್ಲ, ನಿಯಮ ಪ್ರಕಾರ ಚರಂಡಿ, ಪಾರ್ಕಿಂಗ್ ವ್ಯವಸ್ಥೆ ಮಾಡಿಲ್ಲ , ಕಟ್ಟಡ ಮಾಲಕರು ಮಾಡಬೇಕಾಗಿದ್ದ ಕೆಲಸವನ್ನು ನಾವು ಮಾಡಿದ್ದೇವೆ, ಎಲ್ಲಾ ಸಮಸ್ಯೆಗಳಿಗೆ ಕಟ್ಟಡ ಕಾರಣ” ಎಂಬ ರೆಡಿಮೇಡ್ ಸಮರ್ಥನೆ ಕೊಡುತ್ತಾ ಜಾರಿ ಕೊಳ್ಳುತ್ತಿರುವ ಪಟ್ಟಣ ಪಂಚಾಯತ್ ಕಟ್ಟಡ ನಿರ್ಮಾಣ ಹಂತದಲ್ಲಿ ಅಥವಾ ಬಳಿಕ ಯಾಕೆ ಸೂಕ್ತ ಕ್ರಮಕೈಗೊಂಡಿಲ್ಲ? ಸಂಬಂಧಪಟ್ಟ ಇಲಾಖೆ ಅಥವಾ ಆಡಳಿತ ಎಚ್ಚರವಾಗಿರುತ್ತಿದ್ದರೆ ನಾಲ್ಕೈದು ಮಹಡಿಗಳ ಕಟ್ಟಡ ಪಟ್ಟಣ ಪಂಚಾಯತ್ ಮೂಗಿನಡಿಯಲ್ಲೇ ನಿಯಮ ಪಾಲಿಸದೆ ಎದ್ದು ನಿಲ್ಲಲು ಸಾಧ್ಯ?

ಅಚ್ಚರಿಯ ಸಂಗತಿ ಎಂದರೆ ಅಂದು ಕಟ್ಟಡ ನಿರ್ಮಾಣವಾದಾಗ ಅಧಿಕಾರದಲ್ಲಿದ್ದ ಸದಸ್ಯರೇ ಇಂದು ವಿರೋಧ ಪಕ್ಷದಲ್ಲಿದ್ದು
ಈಗ ಚರಂಡಿ ಅಗೆದು ಹಾಕಲು ಈಗಿನ ಆಡಳಿತದಲ್ಲಿ ಮತ್ತು ಅಧಿಕಾರಿಗಳಲ್ಲಿ ಒತ್ತಡ ಹಾಕಿರವುದು. ಸದಸ್ಯರೊಬ್ಬರ ಒತ್ತಡವೇ ಚರಂಡಿ ಅಗೆದು ಹಾಕಲು ಕಾರಣವೆಂದು ಹೇಳಲಾಗುತ್ತಿದ್ದು ಚರಂಡಿ ಅಗೆಯಲು ಒತ್ತಡ ಹಾಕಿದ ಸದಸ್ಯರನ್ನು ಮುಂದಿಟ್ಟು
“ಕೋಲು ಮುರಿಯಬಾರದು, ಹಾವು ಸಾಯಬಾರದು…” ಎಂಬಂತೆ ಪಟ್ಟಣ ಪಂಚಾಯತ್ ಆಡಳಿತ ಆಡುತ್ತಿರುವ ‘ಛದ್ಮವೇಷ’ಕ್ಕೆ ಕಟ್ಟಡ ಮಾಲಕರು ಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ ಹಾಗೂ ಈ ಚರಂಡಿಯ ಮೂಲಕ ಪಟ್ಟಣ ಪಂಚಾಯತ್ ಆಡಳಿತ ನಾಗರಿಕರ ತಾಳ್ಮೆ ಪರೀಕ್ಷೆ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.
ಒಟ್ಟಿನಲ್ಲಿ ಅಗೆದು ಹಾಕಿ ತೆರೆದಿಟ್ಟ ತಬ್ಬಲಿ ಚರಂಡಿಗೆ ನಿಜವಾದ ವಾರಸುದಾರರು ಕಟ್ಟಡ ಮಾಲಕರೋ ಪಟ್ಟಣ ಪಂಚಾಯತ್ ಆಡಳಿತವೋ ಎಂಬುದು ಶೀಘ್ರವಾಗಿ ನಿರ್ಧಾರವಾಗದಿದ್ದರೆ ನಾಗರಿಕರ ತಾಳ್ಮೆಯ ಕಟ್ಟೆ ಒಡೆಯುವ ದಿನ ದೂರವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ.
ಕಂದಾಯ ನಿರೀಕ್ಷಕರ, ಗ್ರಾಮಕರಣಿಕರ ಕಚೇರಿಗಳಿಗೆ ದಿನ ನಿತ್ಯ ವಯಸ್ಕರು, ಮಹಿಳೆಯರು ಸೇರಿ ನೂರಾರು ಜನರು ತಮ್ಮ ಅಗತ್ಯಗಳಿಗೆ ಬರುವಾಗ ಇಲ್ಲಿ ಕಟ್ಟಡದ ಸುತ್ತಲೂ ಸ್ಲ್ಯಾಬ್ ಕಲ್ಲುಗಳನ್ನು ಅಗೆದು ತೆಗೆದು ಚರಂಡಿಯನ್ನು ತೆರೆದಿಡಲಾಗಿದ್ದು ವಯಸ್ಕರಿಗೆ, ಮಹಿಳೆಯರಿಗೆ ಚರಂಡಿ ದಾಟುವುದು ತೊಂದರೆಯಾಗುತ್ತಿದೆ.
ನೋಟರಿ ವಕೀಲರನ್ನು ಕಾಣಲು ಬಂದಿದ್ದ ವಿಕಲ ಚೇತನರೊಬ್ಬರು ವಾಕರ್ ನೊಂದಿಗೆ ಚರಂಡಿ ದಾಟಲು ಪಟ್ಟ ಪರದಾಟಕ್ಕೆ ಪ್ರತ್ಯಕ್ಷದರ್ಶಿಗಳೇ ಸಾಕ್ಷಿಯಾಗಿದ್ದರು.
ಕಂದಾಯ ನಿರೀಕ್ಷಕರ, ಗ್ರಾಮಕರಣಿಕರ ಕಚೇರಿಗಳಿಗೆ, ವಕೀಲರ ಕಚೇರಿಗಳಿಗೆ, ಬ್ಯಾಂಕ್ ಗಳಿಗೆ ದಿನ ನಿತ್ಯ ವಯಸ್ಕರು, ಮಹಿಳೆಯರು , ವಿಕಲಚೇತನರು ಸೇರಿದಂತೆ ನೂರಾರು ನಾಗರಿಕರು ತಮ್ಮ ಅಗತ್ಯಗಳಿಗೆ ಬರುವಾಗ ಇಲ್ಲಿ ಕಟ್ಟಡದ ಸುತ್ತಲೂ ಸ್ಲ್ಯಾಬ್ ಕಲ್ಲುಗಳನ್ನು ಅಗೆದು ತೆಗೆದು ತೆರೆದಿಡಲಾದ ರಸ್ತೆ ಬದಿಯ ಚರಂಡಿಯನ್ನು ದಾಟುವುದು ವಿಕಲ ಚೇತನರಿಗೆ ವಯಸ್ಕರಿಗೆ, ಮಹಿಳೆಯರಿಗೆ ತೊಂದರೆಯಾಗುತ್ತಿದೆ.

IMG-20241201-WA0005-485x1024 ವಾಕರ್ ನಲ್ಲಿ ಚರಂಡಿ ದಾಟಲು ಪರದಾಡಿದ ವಿಕಲಚೇತನ !
20241211_104141-1024x461 ವಾಕರ್ ನಲ್ಲಿ ಚರಂಡಿ ದಾಟಲು ಪರದಾಡಿದ ವಿಕಲಚೇತನ !

Post Comment

ಟ್ರೆಂಡಿಂಗ್‌