ತಡೆದು ನಿಲ್ಲಿಸಿ ವ್ಯಕ್ತಿಗೆ ಹಲ್ಲೆಗೈದ ಆರೋಪ: ‘ಕುಡ್ಲ ರಾಂಪೇಜ್’ ಯೂಟ್ಯೂಬರ್ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

ತಡೆದು ನಿಲ್ಲಿಸಿ ವ್ಯಕ್ತಿಗೆ ಹಲ್ಲೆಗೈದ ಆರೋಪ: ‘ಕುಡ್ಲ ರಾಂಪೇಜ್’ ಯೂಟ್ಯೂಬರ್ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Share
IMG_20240528_000800-7-1024x563 ತಡೆದು ನಿಲ್ಲಿಸಿ ವ್ಯಕ್ತಿಗೆ ಹಲ್ಲೆಗೈದ ಆರೋಪ:                     'ಕುಡ್ಲ ರಾಂಪೇಜ್' ಯೂಟ್ಯೂಬರ್ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ : ಉಜಿರೆ ನಿವಾಸಿ ಹರೀಶ್‌ ನಾಯ್ಕ (46) ಎಂಬವರು ಆಗಸ್ಟ್6ರಂದು ಮಧ್ಯಾಹ್ನ ಧರ್ಮಸ್ಥಳ ಗ್ರಾಮದ ಪಾಂಗಾಳ ರಸ್ತೆ ಬಳಿ ಮೋಟಾರ್‌ ಸೈಕಲ್‌ ನಲ್ಲಿ ಹೋಗುತ್ತಿದ್ದ ಸಂದರ್ಭ ಕ್ಯಾಮೆರಾ ಹಿಡಿದುಕೊಂಡು ನಿಂತಿದ್ದ ವ್ಯಕ್ತಿಗಳು ತಡೆದು ನಿಲ್ಲಿಸಿ “ರಾಂಪೇಜ್ ಯೂಟ್ಯೂಬರ್ ” ಎಂದು ಪರಿಚಯಿಸಿಕೊಂಡು ಹಲ್ಲೆ ನಡೆಸಿರುವ ಆರೋಪದ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕು ಉಜಿರೆ ನಿವಾಸಿ ಹರೀಶ್‌ ನಾಯ್ಕ (46) ಎಂಬವರು ಆಗಸ್ಟ್6ರಂದು ಮಧ್ಯಾಹ್ನ ಧರ್ಮಸ್ಥಳ ಗ್ರಾಮದ ಪಾಂಗಾಳ ರಸ್ತೆ ಬಳಿ ಮೋಟಾರ್‌ ಸೈಕಲ್‌ ನಲ್ಲಿ ಹೋಗುತ್ತಿದ್ದ ಸಂದರ್ಭ ವಿಡಿಯೋ ಕ್ಯಾಮರಾದೊಂದಿಗೆ ನಿಂತಿದ್ದ ಮೂವರು ವ್ಯಕ್ತಿಗಳು ಹರೀಶ್‌ ನಾಯ್ಕ ಎಂಬಾತನನ್ನು ನಿಲ್ಲಿಸುವಂತೆ ಸೂಚಿಸಿದ್ದು ಈ ಸಂದರ್ಭ ವೇಳೆ ಮೋಟಾರ್‌ ಸೈಕಲ್‌ ನಿಲ್ಲಿಸಿ ವಿಚಾರಿಸದಾಗ, ತನ್ನನ್ನು ರಾಂ ಪೇಜ್‌ ಯೂಟ್ಯೂಬರ್‌ ಎಂದು ಪರಿಚಯಿಸಿಕೊಂಡಾತ, ಧರ್ಮಸ್ಥಳ ಪರಿಸರದಲ್ಲಿ ಹೆಣಗಳನ್ನು ಹೂತಿರುವ ಬಗ್ಗೆ ವಿಚಾರಿಸಿ, ಬಳಿಕ ತಕರಾರು ತೆಗೆದು, ಕುಡ್ಲಾ ರಾಂ ಪೇಜ್‌ ಎಂಬ ಯೂ ಟ್ಯೂಬರ್‌ ಹಾಗೂ ಆತನ ಜೊತೆಗಿದ್ದ ಇನ್ನಿಬ್ಬರು ಏಕಾಏಕಿ ಹಲ್ಲೆ ನಡೆಸಿರುತ್ತಾರೆ ಎಂಬುದಾಗಿ ಆರೋಪಿಸಿ ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಲಾಗಿದೆ.

ಹರೀಶ್ ನಾಯ್ಕ ಎಂಬಾತ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ:50/2025 ಕಲಂ: 126(2),115(2), 352 ಜೊತೆಗೆ 3(5) ಬಿಎನ್‌ ಎಸ್‌ ರಂತೆ ಪ್ರಕರಣ ದಾಖಲಾಗಿದೆ.

Post Comment

ಟ್ರೆಂಡಿಂಗ್‌

error: Content is protected !!