ಫೆ:1ಕ್ಕೆ ಸತ್ಯಶೋಧಕ ವೇದಿಕೆ ಬೆಳ್ತಂಗಡಿ ಇದರ ಪ್ರಥಮ ವರ್ಷದ ಮಹಾಸಭೆ, ನೂತನ ಕಛೇರಿ ಉದ್ಘಾಟನೆ

ಬೆಳ್ತಂಗಡಿ : ಸತ್ಯ ಶೋಧಕ ವೇದಿಕೆ, ಬೆಳ್ತಂಗಡಿ ಇದರ ಪ್ರಥಮ ವರ್ಷದ ಮಹಾಸಭೆ ಹಾಗೂ ಮಾತನ ಕಛೇರಿಯ ಉದ್ಘಾಟನಾ ಸಮಾರಂಭವು ಗುರುವಾಯನಕೆರೆಯಲ್ಲಿ ಫೆ 1ನೇ ಭಾನುವಾರ ಬೆಳಿಗ್ಗೆ ನಡೆಯಲಿದೆ.
ಇದೇ ಕಾರ್ಯಕ್ರಮದಲ್ಲಿ ದೇಶದ ಪ್ರಥಮ ಮಹಿಳಾ ಶಿಕ್ಷಕಿ ವಿದ್ಯಾಮಾತೆ ಸಾವಿತ್ರಿ ಭಾಯಿಫುಲೆ ಹಾಗೂ ಮಹಾನ್ ಸುಧಾರಕ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯು ನಡೆಯಲಿದೆ.
ಸಭಾ ಕಾರ್ಯಕ್ರಮವನ್ನು ನಾಗರಿಕ ಸೇವಾಟ್ರಸ್ಟ ಅಧ್ಯಕ್ಷ ಕೆ.ಸೋಮನಾಥ ನಾಯಕ್ ಅವರು ಉದ್ಘಾಟಿಸಲಿದ್ದಾರೆ.
ಸತ್ಯ ಶೋಧಕ ವೇದಿಕೆ, ಬೆಳ್ತಂಗಡಿ ಇದರ ಅಧ್ಯಕ್ಷ ಸುಕೇಶ್ ಕೆ. ಮಾಲಾಡಿ ಅವರು ಅಧ್ಯಕ್ಷತೆವಹಿಸಲಿರುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕುವೆಟ್ಟು ಗ್ರಾಮಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ, ಅಂಡಿಂಜೆ ಪಂ.ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪಾಟೀಲ್ ಮುಂತಾದವರು ಭಾಗವಹಿಸಲಿದ್ದಾರೆ.
ಶೋಷಿತ ಸಮುದಾಯಗಳ ಸಮಾನತೆ, ಸರ್ವಾಂಗೀಣ ಏಳಿಗೆಯನ್ನು ಬಯಸುವ ಮತ್ತು ಸಮಾಜಪರಿವರ್ತನಾ ಕಾರ್ಯಕ್ರಮಗಳಿಗೆ ಕೈಜೋಡಿಸುವ ಮನಸ್ಸುಳ್ಳ ಯುವಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು ತಿಳಿಸಿದ್ದಾರೆ.














Post Comment