ಗೇರುಕಟ್ಟೆ ಬಾಲಕ ಸುಮಂತ್ ಕೊಲೆ ಪ್ರಕರಣ: ಶಾಸಕ ಹರೀಶ್ ಪೂಂಜ ಅವರಿಂದ ಗೃಹ ಸಚಿವ ಜಿ.ಪರಮೇಶ್ವರ್ ಭೇಟಿ

ಬೆಳ್ತಂಗಡಿ : ಓಡಿಲ್ನಾಳ ಗ್ರಾಮದ ಸಂಬೋಳ್ಯ ನಿವಾಸಿ ಪ್ರತಿಭಾವಂತ
ವಿದ್ಯಾರ್ಥಿ ಸುಮಂತ್ ಎನ್ನುವ ಬಾಲಕನ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ತನಿಖೆಯನ್ನು ಅತ್ಯಂತ ಕೂಲಂಕುಷವಾಗಿ ನಡೆಸಿ ಶೀಘ್ರದಲ್ಲಿ ಸತ್ಯಾ ಸತ್ಯಾಸತೆಯನ್ನು ತನಿಖೆಯ ಮೂಲಕ ಜನರ ಮುಂದಿಡಬೇಕೆಂದು ಶಾಸಕ ಹರೀಶ್ ಪೂಂಜ ಅವರು
ಗೃಹ ಸಚಿವರಾದ ಜಿ ಪರಮೇಶ್ವರ್ ರವರಲ್ಲಿ ಆಗ್ರಹಿಸಿದರು.
ಜನವರಿ14ರಂದು ಧನುಪೂಜೆಗೆಂದು ಹೊರಟು ಹೋಗಿ ಬಳಿಕ ಸ್ಥಳೀಯ ಕೆರೆಯಲ್ಲಿ ಶವವಾಗಿ ಅನುಮಾನಾಸ್ಪದವಾಗಿ ಪತ್ತೆಯಾದ ಬಾಲಕ ಸುಮಂತ್‌ನ ನಿಗೂಢ ಸಾವಿನ ಪ್ರಕರಣದ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿದ್ದು ಬಾಲಕನ ಕುಟುಂಬಸ್ಥರು ಹಾಗೂ ಸ್ಥಳೀಯ ಸಾರ್ವಜನಿಕರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸುಮಂತ್ ಪ್ರಕರಣದ ತನಿಖೆಯಲ್ಲಿ ಯಾವುದೇ ರೀತಿಯ ಲೋಪದೋಷಗಳು ನಡೆಯದಂತೆ, ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿ ನಿಖರವಾದ ಸತ್ಯವನ್ನು ಶೀಘ್ರವಾಗಿ ಬಯಲಿಗೆಳೆಯಬೇಕು ಎಂದು ಶಾಸಕರು ರಾಜ್ಯದ
ಗೃಹ ಸಚಿವರನ್ನು ಭೇಟಿಯಾಗಿ ಒತ್ತಾಯಿಸಿದ್ದಾರೆ.














Post Comment