‘ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ’ ಆಶ್ರಯದಲ್ಲಿ ಉಚಿತ ಪುಸ್ತಕ ವಿತರಣೆ; ಎಸ್ಎಸ್ಎಲ್ ಸಿ- ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

‘ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ’ ಆಶ್ರಯದಲ್ಲಿ ಉಚಿತ ಪುಸ್ತಕ ವಿತರಣೆ; ಎಸ್ಎಸ್ಎಲ್ ಸಿ- ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

Share
IMG-20260610-WA0016-1024x576 'ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ' ಆಶ್ರಯದಲ್ಲಿ ಉಚಿತ ಪುಸ್ತಕ ವಿತರಣೆ; ಎಸ್ಎಸ್ಎಲ್ ಸಿ- ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

ಬೆಳ್ತಂಗಡಿ : ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ಬುದ್ಧ, ಬಸವ, ಪುಲೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಪ್ರಯುಕ್ತ 5ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಕಳೆದ ಸಾಲಿನ ಎಸ್.ಎಸ್. ಎಲ್. ಸಿ. ಮತ್ತು ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳಿಸಿದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮವು
ಜೂ: 7ನೇ ಆದಿತ್ಯವಾರದಂದು ನಗರದ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಸತ್ಯ ಶೋಧಕ ವೇದಿಕೆಯ
2ನೇ ವರ್ಷದ ಪುಸ್ತಕ ವಿತರಣೆ ಕಾರ್ಯಕ್ರಮವು ಶ್ಲಾಘನೀಯ, ಮುಂದೆಯೂ ಈ ಕಾರ್ಯವನ್ನು ಮುಂದುವರಿಸಿ ನನ್ನ ಸಹಕಾರ ಇದ್ದೇ ಇದೆ ಎಂದರು.
ಅಧ್ಯಕ್ಷ ಸುಕೇಶ್ ಕೆ ಮಾಲಾಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ತಮ್ಮ ತಂಡದ ಕಾರ್ಯಯೋಜನೆಗಳ, ಉದ್ದೇಶಗಳ ಬಗ್ಗೆ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೋ. ಜೋಸೆಫ್‌ ಎನ್.ಎಮ್., ಶ್ರೀ ಕ್ಷೇತ್ರ ಬಂಗಡಿ‌ ಸತ್ಯ ಸಾರಮಾನಿ ಕಾನದ ಕಟದ ಜನ್ಮಭೂಮಿ ಪೇರಾಲ್ದಪಲ್ಕೆ ಇದರ ಉಪಾಧ್ಯಕ್ಷ ಲಕ್ಷ್ಮಣ್ ಜಿ.ಎಸ್. ಪಟ್ಟಣ ಪಂಚಾಯತ್ ಸಿಬ್ಬಂದಿ ವನಿತಾ ರಮೇಶ್, ಮಹಮ್ಮಾಯಿ ಕಟ್ಟೆ ಫ್ರೆಂಡ್ಸ್ ಪಣಕಜೆ ಇದರ ಅಧ್ಯಕ್ಷರಾದ ಮೋಹನ್, ಮಾಜಿ ಅಧ್ಯಕ್ಷ ರಾಜೇಶ್ ಕುಲಾಲ್ ಶುಭಹಾರೈಸಿದರು.

IMG-20260521-WA0000-1-715x1024 'ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ' ಆಶ್ರಯದಲ್ಲಿ ಉಚಿತ ಪುಸ್ತಕ ವಿತರಣೆ; ಎಸ್ಎಸ್ಎಲ್ ಸಿ- ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ


ಈ ಸಂದರ್ಭ ಸುಮಾರು 186 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ 85%ಕ್ಕಿಂತ ಅಧಿಕ ಅಂಕಗಳಿಸಿದ 16 ವಿದ್ಯಾರ್ಥಿಗಳನ್ನು ಅಭಿ‌ನಂದಿಸಲಾಯಿತು. ಕು.ಲಲಿತ ಕಳೆಂಜ ಕಾರ್ಯಕ್ರಮ ನಿರೂಪಿಸಿ, ಕು.ಸುಶ್ಮಿತಾ ಮಾಲಾಡಿ ಸ್ವಾಗತಿಸಿದರು.ಕು. ರಮ್ಯ ಕಳೆಂಜ ವಂದಿಸಿದರು.

Post Comment

ಟ್ರೆಂಡಿಂಗ್‌

error: Content is protected !!