ಕುಂಟಾಲಪಲ್ಕೆ: ಶಾಲಾ ಮಂತ್ರಿ ಮಂಡಲ ರಚನೆ

ಬಂದಾರು : ಇಲ್ಲಿನ ಕುಂಟಾಲಪಲ್ಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2026-27ನೇ ಸಾಲಿನ ಶಾಲಾ ಮಂತ್ರಿ ಮಂಡಲವನ್ನು ಚುನಾವಣೆ ಮೂಲಕ ರಚಿಸಲಾಯಿತು.
ಶಾಲಾ ನಾಯಕಿಯಾಗಿ 7ನೇ ತರಗತಿಯ ಯಕ್ಷಿತ, ಉಪನಾಯಕನಾಗಿ 7ನೇ ತರಗತಿಯ ಕೃತೇಶ್ , ವಿದ್ಯಾಮಂತ್ರಿಯಾಗಿ ಹಿತೇಶ್ ಕುಮಾರ್ ಪಿ, ಕೃಷಿ ಮಂತ್ರಿಯಾಗಿ ಧನುಷ್ ಬಿ.ಯು. ಕ್ರೀಡಾ ಮಂತ್ರಿಯಾಗಿ ಕೌಶಲ್, ಸಾಂಸ್ಕೃತಿಕ ಮಂತ್ರಿಯಾಗಿ ಅನ್ವಿತಾ, ಆರೋಗ್ಯ ಮಂತ್ರಿಯಾಗಿ ಚಿರಾಗ್ ಪಿ, ವಾರ್ತಾ ಮಂತ್ರಿಯಾಗಿ ಮೋಕ್ಷಿತ, ನೀರಾವರಿ ಮಂತ್ರಿಯಾಗಿ ಪುಷ್ಪಾದರ, ಸ್ಪೀಕರ್ ಆಗಿ ಶ್ರಾವ್ಯ, ವಿರೋಧ ಪಕ್ಷದ ನಾಯಕಿಯಾಗಿ ಅನನ್ಯ ಇವರನ್ನು ಆಯ್ಕೆ ಮಾಡಲಾಯಿತು.
ಶಾಲಾ ಮಂತ್ರಿ ಮಂಡಲದ ಚುನಾವಣಾ ಪ್ರಕ್ರಿಯೆಯನ್ನು ಮುಖ್ಯ ಶಿಕ್ಷಕಿಯಾದ ಗಾಯತ್ರಿ ಕೆ., ಅತಿಥಿ ಶಿಕ್ಷಕಿಯರಾದ ಅಕ್ಷತಾ ಮತ್ತು ಪ್ರಣೀತಾ, ಗೌರವ ಶಿಕ್ಷಕಿಯಾದ ವನಿತಾ ನಡೆಸಿಕೊಟ್ಟರು.
















Post Comment