ಮಗ, ಸೊಸೆಯಿಂದ ತಂದೆಗೆ ಹಲ್ಲೆ : ಪೊಲೀಸರಿಗೆ ದೂರು 

ಮಗ, ಸೊಸೆಯಿಂದ ತಂದೆಗೆ ಹಲ್ಲೆ : ಪೊಲೀಸರಿಗೆ ದೂರು 

Share

ಬೆಳ್ತಂಗಡಿ : ಮಗ ಮತ್ತು ಸೊಸೆ ಹಲ್ಲೆಗೈದಿರುವುದಾಗಿ ಆರೋಪಿಸಿ ವ್ಯಕ್ತಿಯೋರ್ವರು ವೇಣೂರು ಠಾಣೆಗೆ ದೂರು ನೀಡಿದ್ದಾರೆ.ಬೆಳ್ತಂಗಡಿ ತಾಲೂಕು ಶಿರ್ಲಾಲು ಗ್ರಾಮದ ಸರಪ್ಪಾಡಿ ಮನೆ ನಿವಾಸಿಯಾಗಿ ಸುಂದರ ಪೂಜಾರಿ(75) ಎಂಬವರೇ ಮಗ ಹಾಗೂ ಸೊಸೆ ವಿರುದ್ಧ ದೂರು ನೀಡಿದವರಾಗಿದ್ದಾರೆ. ಸುಂದರ ಪೂಜಾರಿ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ನನ್ನ ಹೆಸರಿನಲ್ಲಿರುವ ಜಮೀನನ್ನು ತನ್ನ ಹೆಸರಿಗೆ ಬರೆದು ಕೊಡುವಂತೆ ಒತ್ತಾಯಿಸಿ ಮಗ ಹಾಗೂ ಸೊಸೆ ಆಗಾಗ ಜಗಳ ಮಾಡುತ್ತಿದ್ದರು.ಮಾ.21ರಂದು ಸಂಜೆ  ಪುತ್ರ ಮನೆಯಲ್ಲಿದ್ದ ಅಡಿಕೆಯನ್ನು ತೆಗೆದುಕೊಂಡು ಹೋಗಲು ಮುಂದಾಗಿದ್ದು ಈ ಬಗ್ಗೆ ಆಕ್ಷೇಪಿಸಿದಾಗ ಕೋಪಗೊಂಡ ಮಗ ಮತ್ತು  ಸೊಸೆ ಅಡಿಕೆ ಮರದ ಸಲಾಕೆಯಿಂದ ಹಲ್ಲೆಗೈದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ.

Post Comment

ಟ್ರೆಂಡಿಂಗ್‌