ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಮೂವರ ಹತ್ಯೆಗೈದ  ಪ್ರಕರಣ : ಜಿಲ್ಲಾ ಎ ಎಸ್ಪಿ  ಬೇಟಿಯಾದ ರಕ್ಷಿತ್ ಶಿವರಾಂ

ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಮೂವರ ಹತ್ಯೆಗೈದ  ಪ್ರಕರಣ : ಜಿಲ್ಲಾ ಎ ಎಸ್ಪಿ  ಬೇಟಿಯಾದ ರಕ್ಷಿತ್ ಶಿವರಾಂ

Share
IMG-20240324-WA0111-1-1024x777 ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಮೂವರ ಹತ್ಯೆಗೈದ  ಪ್ರಕರಣ :         ಜಿಲ್ಲಾ ಎ ಎಸ್ಪಿ  ಬೇಟಿಯಾದ ರಕ್ಷಿತ್ ಶಿವರಾಂ

ಬೆಳ್ತಂಗಡಿ :  ತಾಲೂಕಿನ ಮೂವರು ತುಮಕೂರಿಗೆ ಹೋದವರು  ದುಷ್ಕರ್ಮಿಗಳಿಂದ ಕಾರಿಗೆ ಬೆಂಕಿ ಹಚ್ಚಿ ಹತ್ಯೆಗೊಳಗಾಗಿದ್ದು ಪ್ರಕರಣಕ್ಕೆ ಸಂಬಂಧಿಸಿ ತುಮಕೂರು ಜಿಲ್ಲಾ ಎಡಿಷನಲ್  ಎಸ್ಪಿ ಬಿ ಎಸ್ ಅಬ್ದುಲ್ ಖಾದರ್ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಕಚೇರಿಯಲ್ಲಿ ಭಾನುವಾರ ಸಂಜೆ ಭೇಟಿಯಾಗಿದ್ದು ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ಪಡೆದುಕೊಂಡು ಮೂವರನ್ನು  ಯಾವ ಕಾರಣಕ್ಕೆ ಹತ್ಯೆಮಾಡಿದ್ದಾರೆ, ಕೃತ್ಯದ ಹಿಂದಿರುವ ಎಲ್ಲಾ ಆರೋಪಿಗಳನ್ನು ಕೂಡಲೇ  ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಿಕೊಂಡು ಒತ್ತಾಯಿಸಿದರು. 

ಇದೇ ಸಂದರ್ಭ ಮೂವರ ಮೃತದೇಹಗಳ  ಡಿಎನ್ಎ ಪರೀಕ್ಷೆಯನ್ನು  ಸಾಧ್ಯವಾದಷ್ಟು  ಬೇಗ ಮಾಡಿಸಿ ವರದಿ ತರಿಸಿಕೊಂಡು ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲು ಮನವಿ ಮಾಡಿಕೊಂಡರು. ಈ ಸಂದರ್ಭ ಎಡಿಷನಲ್ ಎಸ್ಪಿ ಅಬ್ದುಲ್ ಖಾದರ್ ಅವರು ಈ ಮೂರು ಜನರ ಹತ್ಯೆಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ,ಇನ್ನೆರಡು ದಿನಗಳ ಒಳಗೆ ಪ್ರಕರಣದ ಬಗ್ಗೆ ಎಲ್ಲಾ ಮಾಹಿತಿಯನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.ತುಮಕೂರು ಎಡಿಷನಲ್ ಎಸ್ಪಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ವೇಳೆ ದ ಕ ಜಿಲ್ಲಾ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಫರ್ನಾಂಡೀಸ್ ಮತ್ತು  ಬೆಳ್ತಂಗಡಿ ಕಾಂಗ್ರೆಸ್ ಯೂತ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಹಕಿಂ ಕೊಕ್ಕಡ ಜೊತೆಯಲ್ಲಿದ್ದರು.

 

Post Comment

ಟ್ರೆಂಡಿಂಗ್‌