ಬೆಳ್ತಂಗಡಿ ಧರ್ಮ ಪ್ರಾಂತ್ಯ; ಸಂತ ಲಾರೆನ್ಸರ ಪ್ರಧಾನ ದೇವಾಲಯದಲ್ಲಿ ಗರಿಗಳ ಹಬ್ಬ : ಧರ್ಮಸಂದೇಶ

ಬೆಳ್ತಂಗಡಿ : ಸಂತ ಲಾರೆನ್ಸರ ಪ್ರಧಾನ ದೇವಾಲಯದಲ್ಲಿ ಗರಿಗಳ ಹಬ್ಬವನ್ನು ಭಾನುವಾರ ಆಚರಿಸಲಾಯಿತು. ಜಯಗೋಷಗಳೊಂದಿಗಿನ ಏಸುಕ್ರಿಸ್ತರ ಜೆರುಸಲೇಮ್ ಪ್ರವೇಶವನ್ನು ಗರಿಗಳ ಹಬ್ಬವೆಂದು ಆಚರಿಸಲಾಗುತ್ತದೆ. ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಧ್ಯಕ್ಷರಾದ ಅತಿ ವಂದನೀಯ ಮುಕ್ಕುಯಿಯವರು ಆಚರಣೆಗಳಿಗೆ ಮುಖ್ಯ ಕಾರ್ಮಿಕರಾಗಿದ್ದರು. ವಂದನೀಯ ಫಾದರ್ ಟೋಮಿ ಮಟ್ಟಂ , ವಂದನೀಯ ಫಾದರ್ ಲಾರೆನ್ಸ್ ಫೋನೊಲಿಲ್, ವಂದನೀಯ ಫಾದರ್ ಕುರಿಯಕೋಸ್ ಧರ್ಮ ಭಗನಿಯರು ಹಾಗೂ ವಿಶ್ವಾಸಿಗಳು ಹಬ್ಬದಲ್ಲಿ ಪಾಲ್ಗೊಂಡರು.ಕ್ರಿಸ್ತರ ಚರಿತ್ರೆ ಪ್ರವೇಶವು ಅವರ ಸಹನ ಹಾಗೂ ಶಿಲುಬೆ ಮರಣದ ಮನ್ನುಡಿ, ರಾಜಕೀಯವಾದ ಜೆರುಸಲೇಮ್ ಪ್ರವೇಶ ಕ್ರಿಸ್ತರ ಸಹನೆ,ಮರಣ ಹಾಗೂ ಉದ್ಯಾನದ ಕಡೆಗಿನ ದಾರಿಯ ಆರಂಭ. ಜಯ ಘೋಷ ಹಾಡಿದ ಅದೇ ಜನರು ಅವರನ್ನು ಕೊಲ್ಲಲು ಅಧಿಕಾರಿಗಳನ್ನು ಒತ್ತಾಯಿಸುತ್ತಾರೆ.
ಅದೇ ಜನರ ಪಾಪ ಪರಿಹಾರಕ್ಕಾಗಿ ಏಸುಕ್ರಿಸ್ತರು ಶಿಲುಬೆಗೇರಿ ಮರಣ ಹೊಂದುವರು. ಇದು ಕ್ರೈಸ್ತ ಬಾಂಧವರಿಗೆ ಪವಿತ್ರ ವಾರವಾಗಿದೆ. ಯೇಸು ಕ್ರಿಸ್ತನ ರಾಜಕೀಯ ಜೆರುಸಲೇಮ್ ಪ್ರವೇಶದಿಂದ ಈಸ್ಟರ್ ಆದಿತ್ಯವಾರದ ತನಕದ ದಿನಗಳು ಕ್ಷಮೆಯ ಕರುಣೆಯ ದೇವರ ಪ್ರೀತಿಯನ್ನು ಮನುಕುಲಕ್ಕೆ ತಿಳಿಯಪಡಿಸಿದ ದಿನಗಳಾಗಿವೆ ಎಂದು ಧರ್ಮಾಧ್ಯಕ್ಷರು ಹೇಳಿದರು.
ಯೇಸುಕ್ರಿಸ್ತರನ್ನು ಜೆರುಸಲೇಮ್ ನಗರಕ್ಕೆ ಒತ್ತುಹೊಯ್ದ ಕತ್ತೆಯಂತೆ ಏಸುಕ್ರಿಸ್ತರ ಸಂದೇಶವನ್ನು ಲೋಕಕ್ಕೆ ಸಾರಲು ಈ ಹಬ್ಬವು ನಮಗೆ ಈ ಹಬ್ಬವು ಕರೆ ನೀಡುತ್ತದೆ ಎಂದು ಗರಿ ಹಬ್ಬದ ಮಹತ್ವದ ಬಗ್ಗೆ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನಿಯ ಲಾರೆನ್ಸ್ ಮುಕ್ಕುಯಿ ಧಾರ್ಮಿಕ ಸಂದೇಶ ನೀಡಿದರು.















Post Comment