ಅಂಗಳದಲ್ಲಿ ಆಟವಾಡುತ್ತಿದ್ದ ಮಗು ತೋಟದ ಕೆರೆಗೆ ಬಿದ್ದು ಮೃತ್ಯು
ಬೆಳ್ತಂಗಡಿ : ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವೊಂದು ಆಟವಾಡುತ್ತಾ ಮನೆ ಸಮೀಪದ ತೋಟದ ಕೆರೆಗೆ ಬಿದ್ದು ಮೃತಪಟ್ಟ ದುರ್ಘಟನೆ ಧರ್ಮಸ್ಥಳ ಸಮೀಪದ ಮುಳ್ಳಿಕಾರ್ ಎಂಬಲ್ಲಿ ಗುರುವಾರ ನಡೆದಿದೆ.ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಮುಳಿಕ್ಕಾರು ಪಟ್ಟೋಡಿ ಮನೆ ನಿವಾಸಿ ಜಗದೀಶ್ ಎಂಬವರ ಪುತ್ರ ಒಂದೂವರೆ ವರ್ಷದ ಮಗು ಪ್ರಣಿತ್ ಕುಮಾರ್ ಕೆರೆಯಲ್ಲಿ ಮೃತಪಟ್ಟಿದ್ದಾನೆ.
ದಿನ ನಿತ್ಯ ತೋಟದ ಕೆರೆಗೆ ಬಟ್ಟೆ ತೊಳೆಯಲು ಹೋಗುವಾಗ ತಾಯಿ ಜೊತೆ ಹೋಗಿ ದಾರಿ ಗೊತ್ತಿದ್ದ ಮಗು ಪ್ರಣೀತ್ ಕುಮಾರ್ ಗುರುವಾರ ಸಂಜೆ ಮನೆಯವರೆಲ್ಲ ಒಳಗಿದ್ದ ವೇಳೆ ಅಂಗಳದಲ್ಲಿ ಆಟವಾಡಿಕೊಂಡಿದ್ದು ನಂತರ ಕೆರೆ ಬಳಿ ಹೋಗಿ ಕೆರೆಗೆ ಬಿದ್ದು ನೀರಲ್ಲಿ ಮುಳುಗಿ ಮೃತಪಟ್ಟಿದೆ.ಅಂಗಳದಲ್ಲಿ ಆಟವಾಡುತ್ತಿದ್ದ ಪ್ರಣಿತ್ ಕಾಣಿಸದಿದ್ದಾಗ ಗಾಬರಿಗೊಂಡ ಮನೆಯವರು ಹುಡುಕಾಡಿದರೂ ಕಂಡು ಬರದ ಕಾರಣ ಸಂಶಯಗೊಂಡು ಕೆರೆಯ ಬಳಿ ಹೋಗಿ ಹುಡುಕಾಡಿದಾಗ ಹುಡುಕಾಟ ನಡೆಸಿದಾಗ ಮಗುವಿನ ಮೃತದೇಹವು ಕೆರೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post Comment