ಕೆ.ವಸಂತ ಬಂಗೇರ ಪಂಚಭೂತಗಳಲ್ಲಿ ಲೀನ: ಬೆಳ್ತಂಗಡಿ ರಾಜಕೀಯದಲ್ಲಿ ಘರ್ಜನೆ ನಿಲ್ಲಿಸಿದ ಹಳೇ ಹುಲಿ ಅಂತಿಮ ನಮನ ಸಲ್ಲಿಸಿದ ನಾಡಿನ ರಾಜಕಾರಣಿಗಳು, ಗಣ್ಯರು
ಬೆಳ್ತಂಗಡಿ : ಬುಧವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಬೆಳ್ತಂಗಡಿಯ ಮಾಜಿ ಶಾಸಕ, ಹಿರಿಯ ರಾಜಕಾರಣಿ, ಕೆ.ವಸಂತ ಬಂಗೇರ(79ವ)ರವರ ಮೃತದೇಹದ ಅಂತ್ಯ ಸಂಸ್ಕಾರವು ಗುರುವಾರ ಸಂಜೆ ಕುವೆಟ್ಟು ಗ್ರಾಮದ ಪ್ರತಿಷ್ಠಿತ ಕೇದೆಯಲ್ಲಿ ಮನೆಯಲ್ಲಿ ನಡೆಯಿತು.
ಹಾಲಿಯಾದರೂ ಮಾಜಿಯಾಗಿದ್ದರೂ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯಲ್ಲಿ ಚರಿತ್ರಾರ್ಹ ಸಾಧನೆಗೈದ ವಸಂತ ಬಂಗೇರ ಅವರ ಪಾರ್ಥೀವ ಶರೀರವು ಗುರುವಾರ ಮುಂಜಾನೆ ಚಾರ್ಮಾಡಿಯ ಮೂಲಕ ಬೆಳ್ತಂಗಡಿಗೆ ತಲುಪಿತ್ತು.
ಹಿರಿಯ ಕಾಂಗ್ರೆಸ್ ಮುಖಂಡರಾಗಿ ಜಿಲ್ಲೆಯ ಪ್ರಭಾವಿ ಮತ್ತು ಧೀಮಂತ ನಾಯಕರಾಗಿ ಜನಾನುರಾಗಿಯಾಗಿದ್ದ ಮಾಜಿ ಶಾಸಕ ಕೆ.ವಸಂತ ಬಂಗೇರ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಂದ ಸ್ಪರ್ಧಿಸಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಐದು ಅವಧಿಯಲ್ಲಿ ಶಾಸಕರಾಗಿದ್ದರು. ಬೆಳಿಗ್ಗೆ ನಗರದ ಹಳೆಕೋಟೆಯಲ್ಲಿರುವ ಅವರ ‘ಸುಪ್ರಭಾತ’ ನಿವಾಸದಲ್ಲಿ ವಿಧಿವಿಧಾನಗಳನ್ನು ಮುಗಿಸಿ ಬಳಿಕ ತಾಲೂಕು ಕ್ರೀಡಾಂಗಣಕ್ಕೆ ಪಾರ್ಥೀವ ಶರೀರವನ್ನು ತಂದು ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಯಿತು.
ತಾಲೂಕು ಕ್ರೀಡಾಂಗಣಕ್ಕೆ ಧಾವಿಸಿ ಬಂದ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಭಾವುಕರಾಗಿ ಗೌರವ ಪೂರ್ವಕವಾಗಿ ಅಂತಿಮ ನಮನ ಸಲ್ಲಿಸಿದರು.ತಾಲೂಕು ಆಡಳಿತದಿಂದ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರಿಗೆ ಸರಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ಬಳಿಕ ತಾಲೂಕು ಕ್ರೀಡಾಂಗಣದಿಂದ ಬಸ್ ನಿಲ್ದಾಣದ ಬಳಿಗೆ ಅಂತಿಮ ಯಾತ್ರೆ ಮೂಲಕ ಸಾಗಿದ ಪಾರ್ಥಿವ ಶರೀರದ ಪಾದಯಾತ್ರೆಯು ಕುವೆಟ್ಟು ಕೇದೆಗೆ ಮನೆತನಕ್ಕೆ ಕೊಂಡೊಯೊಯ್ಯಲಾಯಿತು. ಬ್ಯಾಂಡ್, ಸುಡುಮದ್ದಿನೊಂದಿಗೆ ಅಂತಿಮ ಯಾತ್ರೆ ಸಾಗಿತು.
ಈ ಮಧ್ಯೆ ತಾಲೂಕು ಕ್ರೀಡಾಂಗಣದಲ್ಲಿ ದ.ಕ. ಜಿಲ್ಲಾಧಿಕಾರಿ ಮು ಮುಗಿಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ನೇತೃತ್ವದಲ್ಲಿ ಸರಕಾರಿ ಗೌರವ ಸಲ್ಲಿಸಲಾಯಿತು.
ಸೋಲೂರು ಮಠಾಧೀಶ ವಿಖ್ಯಾತಾನಂದ ಸ್ವಾಮೀಜಿ ಬಲ್ಯೂಟ್ಟು, ಬಿಷಪ್ ಲಾರೆನ್ಸ್ ಮುಕ್ಕುಯಿ, ಆರ್‌ಎಸ್‌ಎಸ್ ಹಿರಿಯ ಮುಖಂಡರಾದ ಕಲ್ಲಡ್ಕ ಪ್ರಭಾಕರ ಭಟ್, ಮಾಜಿ ಸಚಿವರಾದ ಬಿ., ರಮಾನಾಥ ರೈ, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಸಂಸದ ವಿನಯ ಕುಮಾರ್ ಸೊರಕೆ, ಮಾಜಿ ಸಚಿವರಾದ ಕೃಷ್ಣ ಪಾಲೇಮಾರ್, ಗಂಗಾಧರ ಗೌಡ, ಶಾಸಕರಾದ ಹರೀಶ್ ಪೂಂಜ, ಉಮಾನಾಥ ಕೋಟ್ಯಾನ್,
ಪ್ರತಾಪಸಿಂಹ ನಾಯಕ್, ಹರೀಶ್ ಕುಮಾರ್, ಮಾಜಿ ಶಾಸಕರಾದ ಶಕುಂತಳಾ ಟಿ. ಶೆಟ್ಟಿ, ಸಂಜೀವ ಮಠಂದೂರು, ರುಕ್ಷ್ಮಯ ಪೂಜಾರಿ, ಜೆ.ಆರ್.ಲೋಬೋ, ಐವನ್ ಡಿ ಸೋಜಾ, ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ. ಶಿವಾನಂದ, ರಾಷ್ಟ್ರೀಯ ಹಿಂದು ಜಾಗರಣ ವೇದಿಕೆಯ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ, ನಾಗರಿಕ ಸೇವಾ ಟ್ರಸ್ಟ್ ಸಂಚಾಲಕ ಸೋಮನಾಥ ನಾಯಕ್, ನಿವೃತ್ತ ಎಸ್.ಪಿ. ಪೀತಾಂಬರ ಹೇರಾಜೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಪದ್ಮನನಾಭ ಮಾಣಿಂಜ, ಸಿಬ್ಬಂದಿ ವರ್ಗದವರು, ರಬ್ಬರ್ ಬೆಳೆಗಾರರ ಮತ್ತು ಮಾರಾಟಗಾರರ ಸಹಕಾರ ಸಂಘದ ಅಧ್ಯಕ್ಷ ಶ್ರೀಧರ ಬಿಡೆ, ವಿಜಯ ಕ್ರೆಡಿಟ್ ಕೋ ಅಪರೇಟಿವ್ ಅಧ್ಯಕ್ಷ ಜಯರಾಮ ಶೆಟ್ಟಿ ಎಸ್, ಬಿಲ್ಲವ ಸಂಘದ ಅಧ್ಯಕ್ಷ ಜಯವಿಕ್ರಂ ಕಲ್ಲಾಪು, ಕಾರ್ಯದರ್ಶಿ ನಿತೀಶ್ ಕೋಟ್ಯಾನ್,
ಶ್ರೀ ಕಾಲಭೈರವೇಶ್ವರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಂಜನ್ ಜಿ. ಗೌಡ, ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಬಿಜೆಪಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉಪಾಧ್ಯಕ್ಷ ಜಯಂತ ಕೋಟ್ಯಾನ್, ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ಯುವಮೋರ್ಚಾದ ಮಾಜಿ ಅಧ್ಯಕ್ಷ ಸಂಪತ್ ಬಿ ಸುವರ್ಣ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರುಗಳಾದ ಸತೀಶ್ ಬಂಗೇರ, ನಾಗೇಶ್ ಕುಮಾರ್, ಜಿ.ಪಂ. ಮಾಜಿ ಉಪಾಧ್ಯಕ್ಷರಾದ ತುಂಗಪ್ಪ ಬಂಗೇರ, ಧರಣೇಂದ್ರ ಕುಮಾರ್, ಮಾಜಿ ಸದಸ್ಯ ಶೇಖರ ಕುಕ್ಕೇಡಿ, ವರ್ತಕರ ಸಂಘದ ಅಧ್ಯಕ್ಷ ಪುಷ್ಪರಾಜ ಶೆಟ್ಟಿ, ಹಿರಿಯ ವಕೀಲ ಬಿ.ಕೆ. ಧನಂಜಯ ರಾವ್, ಯೋಗೀಶ್ ನಡಕ್ಕರ, ಜೆಡಿಎಸ್ ಮುಖಂಡ ಎಂ.ಬಿ ಸದಾಶಿವ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮಾಧವ ಗೌಡ ಜಾಕೆ ಸಹಿತ ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು.
ಈ ಸಂದರ್ಭ ಪತ್ರಕರ್ತರ ಸಂಘ, ವಕೀಲರ ಸಂಘ ಸಹಿತ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಪದಾಧಿಕಾರಿಗಳು ವಸಂತ ಬಂಗೇರ ಅವರ ಅಂತಿಮ ದರ್ಶನ ಪಡೆದು ಭಾವುಕ ನಮನ ಸಲ್ಲಿಸಿದರು.
Post Comment