ಕೊಯ್ಯೂರು ; ಶಿವರಾತ್ರಿ ಜಾಗರಣೆ ಹೆಸರಲ್ಲಿ ಶಾಲಾ ತೆಂಗಿನ ಮರಗಳಿಂದ ಸಿಯಾಳ, ತೆಂಗಿನ ಕಳವು
ಶಿವರಾತ್ರಿ ಜಾಗರಣೆ ಹೆಸರಲ್ಲಿ ಶಾಲಾ ತೆಂಗಿನ ಮರಗಳಿಂದ
ಸಿಯಾಳ, ತೆಂಗಿನ ಕಳವು

ಬೆಳ್ತಂಗಡಿ : ಶಿವರಾತ್ರಿ ಜಾಗರಣೆ ಹೆಸರಿನಲ್ಲಿ ಸರಕಾರಿ ಶಾಲೆಯ ಆವರಣದೊಳಗೆ ರಾತ್ರಿ ವೇಳೆ ಪಿಕಪ್ ವಾಹನದೊಂದಿಗೆ ಅಕ್ರಮ ಪ್ರವೇಶಿಸಿ ಶಾಲೆಯ ತೆಂಗಿನ ಮರಗಳಿಂದ ಸಿಯಾಳ , ತೆಂಗಿನ ಕಾಯಿಗಳನ್ನು ಕಿತ್ತು ಕಳವು ಗೈದ ಘಟನೆ ಕೊಯ್ಯೂರು ಗ್ರಾಮದ ಆದೂರುಪೇರಾಲ್ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದಿದೆ.
ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮದ ಆದೂರ್ ಪೇರಾಲ್ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ಆವರಣಕ್ಕೆ ರಾತ್ರಿ ವೇಳೆ ತಂಡವೊಂದು ಪಿಕಪ್ ವಾಹನದಲ್ಲಿ ಅಕ್ರಮವಾಗಿ ಪ್ರವೇಶಿಸಿ ಶಾಲಾ ತೆಂಗಿನ ಮರಗಳಿಗೆ ಹತ್ತಿ ಸಿಯಾಳ , ತೆಂಗಿನಕಾಯಿಗಳನ್ನು ಕಿತ್ತು ಕಳವುಗೈಯ್ದಿದ್ದು ಸಿಯಾಳಗಳನ್ನು ಕುಡಿದು ತಿಂದು ಕಸಗಳನ್ನು ಚೆಲ್ಲಾಪಿಲ್ಲಿಯಾಗಿ ಆವರಣದೊಳಗೆ ಎಸೆದು ಹೋಗಿರುವುದು ಬೆಳಕಿಗೆ ಬಂದಿದೆ.
ಶಾಲೆಯ ಆವರಣದೊಳಗೆ ರಾತ್ರಿ ವೇಳೆ ಪಿಕಪ್ ನಲ್ಲಿ ಅಕ್ರಮ ಪ್ರವೇಶಿಸಿ ಸಿಯಾಳ, ತೆಂಗಿನ ಕಾಯಿಗಳನ್ನು ಕಿತ್ತು ತಿಂದು ಹಾಳು ಮಾಡಿ ಶಾಲೆಗೆ ನಷ್ಟ ಉಂಟು ಮಾಡಿ ಶಾಲಾವರಣ ಮತ್ತು ಶಾಲಾ ಪರಿಸರವನ್ನು ಕೆಡಿಸಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಶಿವರಾತ್ರಿ ಜಾಗರಣೆ ಹೆಸರಿನಲ್ಲಿ ಸರಕಾರಿ ಶಾಲೆಯ ತೆಂಗಿನ ಮರಗಳಿಂದ ಸಿಯಾಳ, ತೆಂಗಿನ ಕಾಯಿಗಳನ್ನು ಕಿತ್ತು ಕದ್ದು ಕುಡಿದು ನಾಶ ಮಾಡಿ, ನಷ್ಟ ಉಂಟು ಮಾಡಿರುವ ಕೃತ್ಯದಲ್ಲಿ ಭಾಗಿಯಾದವರು ಯಾರು ಎಂಬ ಬಗ್ಗೆ ಸ್ಥಳೀಯವಾಗಿ ಕುತೂಹಲ ಮೂಡಿದೆ.
ಕೃತ್ಯದಲ್ಲಿ ಭಾಗಿಯಾದವರು ಸ್ಥಳೀಯರೇ ? ಹಳೆ ವಿದ್ಯಾರ್ಥಿಗಳೇ? ಅಪರಿಚಿತರೇ ಎಂಬ ಬಗ್ಗೆ ಸಂಶಯ ಮೂಡಿದ್ದು ಎಸ್ ಡಿ ಎಂಸಿ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.















Post Comment