ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಭಕ್ತಾದಿಗಳ ಸಾರ್ವಜನಿಕ ಸಭೆ:

ಬೆಳ್ತಂಗಡಿ : ನಾಳ ಜಾತ್ರಾ ಮಹೋತ್ಸವ ಜಮಾ ಖರ್ಚಿನ ವಿವರ ಸಭೆಯಲ್ಲಿ ಮಂಡಿಸಿದಾಗ ವ್ಯವಸ್ಥಾಪನಾ ಸಮಿತಿಯ ಸದಸ್ಯ ಮೈಸೂರಿನ ಉದ್ಯಮಿ ಲ| ಹೇಮಂತ್ ಕುಮಾರ್ ಗೇರುಕಟ್ಟೆ
ಅವರು ಕೆಲವೊಂದು ದೊಡ್ಡ ಮೊತ್ತದ ಬಿಲ್ ಗಳಿಗೆ ಹಣವನ್ನು ಚೆಕ್ ಮೂಲಕ ನೀಡದೆ ನಗದು ನೀಡಿರುವುದು ತಪ್ಪು ಹೇಗೆ ನಗದು ಕೊಟ್ಟಿದ್ದಿರಿ ಎಂದು ಪ್ರಶ್ನಿಸಿ ಆಕ್ಷೇಪ ವ್ಯಕ್ತಪಡಿಸಿದರು. ಮತ್ತು ಈ ಕ್ರಮಕ್ಕೆ ನನ್ನ ವಿರೋಧವಿದೆ ಎಂಬುದನ್ನು ನಿರ್ಣಯದಲ್ಲಿ ನಮೂದಿಸಿ ಎಂದು ಒತ್ತಾಯಿಸಿದರು.
ಬೆಳ್ತಂಗಡಿ ತಾಲೂಕು ನ್ಯಾಯತರ್ಪು ಗ್ರಾಮದ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಜಮಾ ಖರ್ಚಿನ ಬಗ್ಗೆ ಭಕ್ತಾದಿಗಳ ಸಾರ್ವಜನಿಕ ಸಭೆಯು ದೇವಸ್ಥಾನ ಸಭಾಂಗಣದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಹರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.
ಸಭೆಯಲ್ಲಿ ದೇವಸ್ಥಾನದ ಪ್ರಬಂಧಕ ಗಿರೀಶ್ ಜಿ.ಎಸ್. ಅವರು ಜಾತ್ರಾ ಮಹೋತ್ಸವದ ಜಮಾ ಖರ್ಚಿನ ವಿವರ ಮಂಡಿಸಿದ್ದು ವ್ಯವಸ್ಥಾಪನಾ ಸಮಿತಿಯ ಸದಸ್ಯ ಉದ್ಯಮಿ ಹೇಮಂತ್ ಕುಮಾರ್ ಗೇರುಕಟ್ಟೆ ಅವರು ಖರ್ಚುಗಳ ಹಣವನ್ನು ನಗದು ಮೂಲಕ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೇ, ದೊಡ್ಡ ಮೊತ್ತದ ಹಣವನ್ನು
ಚೆಕ್ ನಲ್ಲಿ ಯಾಕೆ ನೀಡಿಲ್ಲ?
ಬಿಲ್ ನೀಡದೇ ಎಸ್ಟಿಮೇಟ್ ನೀಡಿದವರಿಗೂ ಎಲ್ಲಾ ಹಣ ಸಂದಾಯ ಮಾಡಿದ್ದೀರಿ, ಎಸ್ಟಿಮೇಟ್ ಗೂ, ಬಿಲ್ ಗೂ, ವ್ಯತ್ಯಾಸ ಇಲ್ಲವೇ?
ಎಂದು ಪ್ರಶ್ನಿಸಿದರು.
ಕಳೆದ ವರ್ಷದ ಜಾತ್ರೆ ಸಂದರ್ಭ ವಸ್ತು ರೂಪದಲ್ಲಿ ನೀಡಿದ ಕೊಡುಗೆಯನ್ನು ಜಾತ್ರೆ ದೇಣಿಗೆ ಎಂದು ನಗದು ನೀಡದೆ ಆಮಂತ್ರಣ ಪತ್ರಿಕೆಯಲ್ಲಿ ಅಧ್ಯಕ್ಷರ ಹೆಸರನ್ನು ಮುದ್ರಿಸಲಾಗಿದೆ.
ಇದಕ್ಕೆಲ್ಲ ಅಧ್ಯಕ್ಷರು ಮಾತ್ರವಲ್ಲ, ಎಲ್ಲಾ ಸದಸ್ಯರ ತಲೆಗೂ ಬರುತ್ತದೆ, ಮುಂದೆ ಸಮಿತಿಯ ಸದಸ್ಯರೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ನಿಬಂಧನೆಗಳಂತೆ ನಾವು ಹೊಣೆಯಾಗುತ್ತೇವೆ.
ಈ ಲೆಕ್ಕಚಾರಕ್ಕೆ ನನ್ನ ಆಕ್ಷೇಪ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಸಭೆಯಲ್ಲಿದ್ದ ಭಕ್ತಾದಿಗಳು ಅವರ ಮಾತಿಗೆ ಧ್ವನಿಗೂಡಿಸಿ, ಸಾರ್ವಜನಿಕರ ಹಣ ಹಾಗೂ ದೇಣಿಗೆಯ ಲೆಕ್ಕಾಚಾರ ಪಾರದರ್ಶಕವಾಗಿರಬೇಕು ಮುಂದೆ ಈ ರೀತಿ ತಪ್ಪು ಆಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭ ದಾಖಲೆಗಳ ನ್ಯೂನ್ಯತೆಗಳನ್ನು ಬಾಲಿಶ ಸಮಜಾಯಿಷಿಗಳ ಮೂಲಕ ಸಮರ್ಥಿಸಿಕೊಳ್ಳಲು ವಿಫಲ ಪ್ರಯತ್ನ ನಡೆಸಿದ್ದು ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶರತ್ ಕುಮಾರ್ ಶೆಟ್ಟಿ ಬೆಂಬಲಿಸಿ ಧ್ವನಿಗೂಡಿಸಿ ಹೇಮಂತ್ ಅವರ ಅಭಿಪ್ರಾಯಗಳಿಗೆ ವಿರೋಧ ವ್ಯಕ್ತಪಡಿಸಿದರು.
ದೇವಸ್ಥಾನದ ಚಿಕ್ಕ ಮೇಳದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸಂಬಂಧಿಸಿದ ವ್ಯಕ್ತಿಗೆ ನೋಟಿಸ್ ನೀಡುವಂತೆ ತಿಳಿಸಲಾಗಿತ್ತು ಎಂದು ಸಭೆಯಲ್ಲಿ ಚರ್ಚೆಯಾದಾಗ ನೋಟೀಸ್ ನೀಡಲಾಗಿದ್ದು ಉತ್ತರ ಬಂದಿರುವುದಿಲ್ಲ ಎಂದು ಅಧ್ಯಕ್ಷ ಬಿ.ಹರೀಶ್ ಕುಮಾರ್ ಸಭೆಗೆ ತಿಳಿಸಿದರು. ಮುಂದಿನ ವರ್ಷದಲ್ಲಿ ಬ್ರಹ್ಮ ಕಲಶೋತ್ಸವ ಸಮೀಪಿಸುತ್ತಿದೆ.
ಭಕ್ತರಿಗೆ ದೇವಸ್ಥಾನದ ಬಗ್ಗೆ ಭಕ್ತಿ ಮೂಡಿಸುವ ನಿಟ್ಟಿನಲ್ಲಿ ವ್ಯವಸ್ಥಾಪನ ಸಮಿತಿ ಹಾಗೂ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಪಾರದರ್ಶಕವಾಗಿ ಕೆಲಸವನ್ನು ಮಾಡಬೇಕು ಆಗ ಮಾತ್ರ ಮುಂದಿನ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಜಾಸ್ತಿ ಆಗುತ್ತದೆ ಎಂದು ರೈಲ್ವೆ ಇಲಾಖೆ ನಿವೃತ್ತ ಅಧಿಕಾರಿ ಕೃಷ್ಣ ಕೆ.ಕುಂಟಿನಿ ತಿಳಿಸಿದರು.
ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಭುವನೇಶ್ ಜಿ, ಮಾಜಿ ಸದಸ್ಯರಾದ ಜನಾರ್ದನ ಪೂಜಾರಿ, ಜಾತ್ರಾ ಮಹೋತ್ಸ ಸಮಿತಿ ಸದಸ್ಯರಾದ ರಘುರಾಮ ಭಟ್, ಶೇಖರ ನಾಯ್ಕ, ರಾಜೇಶ್ ಪೆಂರ್ಬುಡ, ಆಶೋಕ ಆಚಾರ್ಯ, ಬಾಲಕೃಷ್ಣ ಶೆಟ್ಟಿ ಮತ್ತಿತರರು
ಚರ್ಚೆಯಲ್ಲಿ ಪಾಲ್ಗೊಂಡು ಸಲಹೆ, ಸೂಚನೆಗಳನ್ನು ನೀಡಿದರು.
ತಪ್ಪುಗಳನ್ನು ಸರಿಪಡಿಸಿಕೊಂಡು ಕ್ಷೇತ್ರದಲ್ಲಿ ನಡೆಯುವ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತರ ಸಹಕಾರವನ್ನು ಕೇಳಿದರು.
ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ.ರಾಘವೇಂದ್ರ ಅಸ್ರಣರು, ಅರುಣ್ ಶೆಟ್ಟಿ, ರೀತಾ ಪಿ.,ಮೋಹಿನಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಎಂ., ಭಜನಾ ಮಂಡಳಿ ಅಧ್ಯಕ್ಷ ಗಣೇಶ್ ಎನ್., ಶ್ರೀ ದುರ್ಗಾ ಮಾತೃ ಮಂಡಳಿ ಅಧ್ಯಕ್ಷ ಮಮತಾ ಆಳ್ವ ಉಪಸ್ಥಿತರಿದ್ದರು.















Post Comment