ಕಡಬ ತಾ. ಪಂ. ಕಚೇರಿಗೆ ಮುಂಜಾನೆ ಲೋಕಾಯುಕ್ತ ದಾಳಿ

ಕಡಬ ತಾ. ಪಂ. ಕಚೇರಿಗೆ ಮುಂಜಾನೆ ಲೋಕಾಯುಕ್ತ ದಾಳಿ

Share
IMG-20240327-WA0045-1024x576 ಕಡಬ ತಾ. ಪಂ. ಕಚೇರಿಗೆ ಮುಂಜಾನೆ ಲೋಕಾಯುಕ್ತ ದಾಳಿ

ಕಡಬ : ಇಲ್ಲಿನ ತಾಲೂಕು ಪಂಚಾಯಿತಿ ಗೆ ಬುಧವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರ ತಂಡ ದಾಳಿ ನಡೆಸಿ ಸ್ದಳೀಯ ಭ್ರಷ್ಟ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದ್ದಾರೆ.ಕಡಬ ತಾಲೂಕು ಪಂಚಾಯಿತಿಯ  ನೂತನ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ವಿ. ಜಯಣ್ಣ ಅವರು ಈ ಹಿಂದೆ ಸೋಮವಾರಪೇಟೆ ತಾಲೂಕು ಪಂಚಾಯಿತಿಯಲ್ಲಿ ಕಾರ್ಯ ನಿರ್ವಾಹಕ ಅಧಿಕಾರಿಯಾಗಿದ್ದು, ಅಲ್ಲಿಗೆ ಸಂಬಂಧಿಸಿದ ಅಕ್ರಮ ಅಸ್ತಿ ಪ್ರಕರಣದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ತನಿಖೆಗಾಗಿ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.  ಸೋಮವಾರಪೇಟೆಯಲ್ಲಿ   ಜಯಣ್ಣ ಅವರಿಗೆ ಸೇರಿದ ಮನೆಯ ಮೇಲೆಯೂ ದಾಳಿ ನಡೆದಿದೆ. ಜಯಣ್ಣ ಅವರು ವಾಸ್ತವ್ಯ ಇದ್ದ ಕಡಬದ ಪಂಜ ರಸ್ತೆಯಲ್ಲಿರುವ ವಿದ್ಯಾನಗರದ ಬಾಡಿಗೆ ಮನೆಗೆ ಮುಂಜಾನೆ ಆಗಮಿಸಿದ ಲೋಕಾಯುಕ್ತ ಪೊಲೀಸರು ಜಯಣ್ಣ ಅವರನ್ನು ಕಡಬ ತಾಲೂಕು ಪಂಚಾಯಿತಿ ಕಚೇರಿಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಕೊಡಗು ಲೋಕಾಯುಕ್ತ ಡಿವೈಎಸ್ಪಿ‌ ಪವನ್ ಕುಮಾರ್, ಇನ್ಸ್ ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ  ದಾಳಿ ನಡೆದಿದೆ.

IMG-20240327-WA0046-1024x510 ಕಡಬ ತಾ. ಪಂ. ಕಚೇರಿಗೆ ಮುಂಜಾನೆ ಲೋಕಾಯುಕ್ತ ದಾಳಿ

Post Comment

ಟ್ರೆಂಡಿಂಗ್‌