ಖಾಸಗಿ ಬಸ್ಸಿಗೆ ಸಿಲುಕಿ ಬೈಕ್ ಸವಾರ ಮೃತಪಟ್ಟ ಪ್ರಕರಣ ; ಒಂದೇ ವರ್ಷದಲ್ಲಿ ಮೂರನೇ ಬಲಿ ಪಡೆದ ಬಂಗಾಡಿಯ ಯಮರೂಪಿ ದುರ್ಗಾ ಬಸ್ 

ಖಾಸಗಿ ಬಸ್ಸಿಗೆ ಸಿಲುಕಿ ಬೈಕ್ ಸವಾರ ಮೃತಪಟ್ಟ ಪ್ರಕರಣ ; ಒಂದೇ ವರ್ಷದಲ್ಲಿ ಮೂರನೇ ಬಲಿ ಪಡೆದ ಬಂಗಾಡಿಯ ಯಮರೂಪಿ ದುರ್ಗಾ ಬಸ್ 

Share
IMG-20240628-WA0002-1 ಖಾಸಗಿ ಬಸ್ಸಿಗೆ ಸಿಲುಕಿ ಬೈಕ್ ಸವಾರ ಮೃತಪಟ್ಟ ಪ್ರಕರಣ ; ಒಂದೇ ವರ್ಷದಲ್ಲಿ ಮೂರನೇ ಬಲಿ ಪಡೆದ ಬಂಗಾಡಿಯ ಯಮರೂಪಿ ದುರ್ಗಾ ಬಸ್ 

ಬೆಳ್ತಂಗಡಿ : ಕಿಲ್ಲೂರಿನಿಂದ ಬೆಳ್ತಂಗಡಿಗೆ ಬರುತ್ತಿದ್ದ ದುರ್ಗಾ ಎಂಬ ಖಾಸಗಿ ಬಸ್ಸು , ಬೆಳ್ತಂಗಡಿ ಕಡೆಯಿಂದ ನಡದ ಕಡೆಗೆ ಹೋಗುತ್ತಿದ್ದ ಬೈಕ್‌ ಗೆ ಡಿಕ್ಕಿ ಹೊಡೆದು ಬೈಕ್‌ ಸವಾರ ಕಂದಾಯ ಇಲಾಖೆಯ ಗ್ರಾಮಸಹಾಯಕ ಬಳಂಜ ಗ್ರಾಮದ ನಿವಾಸಿ ಜಯರಾಜ್(50) ಎಂಬವರು ಮೃತಪಟ್ಟಿದ್ದಾರೆ.

ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ನಿವಾಸಿ ವಸಂತ ಬಂಗೇರ ಎಂಬವರ ಮಾಲಕತ್ವದ  ದುರ್ಗಾ ಬಸ್ಸಿನ ಚಾಲಕ ಸುದರ್ಶನ ಎಂಬಾತ ಚಲಾಯಿಸುತ್ತಿದ್ದ ದುರ್ಗಾ ಬಸ್ಸು ಡಿಕ್ಕಿಯಾಗಿ ಬೈಕ್ ಸವಾರ ಬಲಿಯಾಗಿದ್ದಾರೆ. ಇದೇ ದುರ್ಗಾ ಬಸ್ ಇದಕ್ಕೂ ಮೊದಲೇ  ಇಬ್ಬರನ್ನು ಬಲಿ ಪಡೆದಿದ್ದು ಇಂದಿನ ಅಪಘಾತವೂ ಸೇರಿದಂತೆ ಈ ಬಸ್ ಇದೀಗ ಮೂರನೇ ಬಲಿ ಪಡೆದಂತಾಗಿದೆ. ಬಂಗಾಡಿಯ ನರಭಕ್ಷಕ ಬಸ್ಸಿನ ದುಡುಕುತನ ಮತ್ತು ಅಜಾಗರೂಕತೆಯ ಚಾಲನೆಯ ಚಾಲಕ ಸುದರ್ಶನ ಎಂಬಾತನ  ಬಗ್ಗೆ ನಾಗರಿಕರಿಂದ  ತೀವ್ರ ಆಕ್ರೋಶ ವ್ಯಕ್ತವಾಗಿದೆ.   ಆದರೆ ಬಸ್‌ ಚಾಲಕ ಬೈಕಿಗೆ ಡಿಕ್ಕಿ ಹೊಡೆದ ಪ್ರಕರಣವನ್ನು ‘ಬೈಕ್‌ ಸವಾರ ಓವರ್ ಟೇಕ್ ಮಾಡಿ ಬಸ್ಸಿಗೆ ಡಿಕ್ಕಿ ಹೊಡೆಯಿತು’ ಎಂಬಂತೆ ಅಪಘಾತ ಪ್ರಕರಣವನ್ನು ಕೆಲವು ಡೀಲಿಂಗ್ ಚತುರರು ತಿರುಚಲು ಯತ್ನಿಸಿರುವುದು ಚರ್ಚೆಗೆ ಕಾರಣವಾಗಿದೆ.

ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಬೈಕ್ ಸವಾರನದ್ದೇ ತಪ್ಪು ಎಂಬಂತೆ  ವಾಟ್ಸ್ಯಾಪ್  ಕಿಡಿಗೇಡಿಗಳು ಸುಳ್ಳು ಸುದ್ದಿ ಗೀಚಿ  ವದಂತಿ ಹಬ್ಬಿಸುವ ಮೂಲಕ ಪ್ರಕರಣದ ಲಾಭ ಪಡೆಯಲು ವಿಫಲ ಯತ್ನ ನಡೆಸಿರುವುದು ಇದೀಗ ಬಯಲಾಗಿದೆ. ಸರಕಾರಿ ಆಸ್ಪತ್ರೆಗೆ  ಬಸ್ ಮಾಲೀಕರ ಆತ್ಮೀಯರೊಬ್ಬರು ಧಾವಿಸಿ ಬಂದು  ತಹಶೀಲ್ದಾ‌ರ್ ಪೃಥ್ವಿ ಸಾನಿಕಂ ಜೊತೆ ಮಾತನಾಡಿ ತಪ್ಪು ಮಾಹಿತಿ ನೀಡಲು ಪ್ರಯತ್ನಿಸಿದ್ದು ಪ್ರಕರಣದ ಸೂಕ್ಷ್ಮತೆಯನ್ನು ಗಮನಿಸಿ ಕೂಡಲೇ ಎಚ್ಚೆತ್ತ  ತಹಶೀಲ್ದಾರ್ ಮೃತರ  ಕುಟುಂಬವನ್ನು ಆಸ್ಪತ್ರೆಗೆ ಕರೆಸಿ ಮಾತಾನಾಡಿ ಧೈರ್ಯ ತುಂಬಿ ಪೊಲೀಸ್‌ ಠಾಣೆಗೆ ಅಪಘಾತದ ಪ್ರತ್ಯಕ್ಷದರ್ಶಿ ಜೊತೆ  ಸ್ವತಃ ತಹಶೀಲ್ದಾ‌ರ್ ಬೆಳ್ತಂಗಡಿ ಸಂಚಾರಿ ಠಾಣೆಗೆ ಭೇಟಿ ನೀಡಿ ಅಘಘಾತದ ದೂರಿನ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ  ಸೂಚಿಸಿದರು.  ಸಂಚಾರಿ ಪೊಲೀಸರು ಪ್ರತ್ಯಕ್ಷದರ್ಶಿ ನೀಡಿದ ದೂರು ಮತ್ತು ಹೇಳಿಕೆಯಂತೆ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡರು. ಇಡೀ ಅಪಘಾತದ ಸುತ್ತ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರ ಸ್ಪಂದನೆ ಬಗ್ಗೆ ಸಾರ್ವಜನಿಕರ ಶ್ಲಾಘನೆ ವ್ಯಕ್ತವಾಗಿದೆ.

ಒಂದೇ ವರ್ಷದಲ್ಲಿ ಮೂರನೇ ಬಲಿ ಪಡೆದ ದುರ್ಗಾ ಬಸ್ಸಿನಲ್ಲಿ ಮೊಬೈಲ್ (ಪುಂಡಿ) ಕಾಲ್ ಚಾಳಿಯ  ಚಾಲಕರ ಹಾವಳಿಯ ಸರಣಿ ಅಪಘಾತಗಳಿಗೆ ಕಾರಣವಾಗಿದ್ದು ಮಾಲಕರ ಇಂಥ ಚಾಲಕರರನ್ನು ದೂರವಿಡದಿದ್ದಲ್ಲಿ ಮುಂದೆಯೂ ಯಮರೂಪಿ ದುರ್ಗಾ ಬಸ್ಸಿಗೆ ಅಮಾಯಕರು ಬಲಿಯಾಗುವ ಅಪಾಯ ತಪ್ಪಿದ್ದಲ್ಲ ಎಂಬ ಅಭಿಪ್ರಾಯಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ‘ಕಾಲ್ ಎಂಡ್ ಡ್ರೈವ್’ ಚಾಳಿಯ ದುರ್ಗಾ ಬಸ್‌ ಚಾಲಕ ದಿಡುಪೆಯ ಸುದರ್ಶನ್ ವಿರುದ್ಧ ಪ್ರತ್ಯಕ್ಷದರ್ಶಿ ನೀಡಿದ ದೂರಿನ ಆಧಾರದಲ್ಲಿ 279, 304(ಚಿ) ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Post Comment

ಟ್ರೆಂಡಿಂಗ್‌